Advertisement
ಸಿಬಿಐ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಘಟನೆಯ ಸಾಕ್ಷ್ಯಗಳನ್ನು ಸಂಗ್ರಹಿಸಲು ಹತ್ರಾಸ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಿಬಿಐ ತಂಡ ಯಾವುದೇ ಸಾಕ್ಷ್ಯಗಳಿಲ್ಲದೇ ವಾಪಾಸಾಗಿದೆ.
Related Articles
Advertisement
ಸಂತ್ರಸ್ತೆಯನ್ನು ಅವರ ಕುಟುಂಬವು ಸೆಪ್ಟೆಂಬರ್ 14ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಲಿಘರ್‌ನ ಜೆಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಹೀಗಾಗಿ ಅಲ್ಲಿನ ಘಟನೆಗಳ ಕುರಿತ ಪ್ರಶ್ನೆಗಳಿಗೆ ಸಿಬಿಐ ಉತ್ತರಗಳನ್ನು ಬಯಸಿದೆ.
ಸಿಬಿಐ ಕೇಳಿದ ಪ್ರಶ್ನೆಗಳು-ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸುವಾಗ ಅವರೊಂದಿಗೆ ಯಾರು ಇದ್ದರು?
-ಯಾವ ವೈದ್ಯರು ಚಿಕಿತ್ಸೆ ನೀಡಿದರು?
-ಸಂತ್ರಸ್ತೆ ಆಸ್ಪತ್ರೆಯಲ್ಲಿ ಎಷ್ಟು ದಿನ ಇದ್ದರು?
-ಅವರನ್ನು ಭೇಟಿಯಾಗಲು ಯಾರು ಬಂದಿದ್ದರು.
– ಸಂತ್ರಸ್ತೆ ಎಷ್ಟು ಜನರೊಂದಿಗೆ ಮಾತನಾಡಿದ್ದಾರೆ? ನಮ್ಮ ಕ್ಯಾಮೆರಾಗಳು ಉತ್ತಮವಾಗಿವೆ, ಆದರೆ ಈಗ ಬ್ಯಾಕಪ್ ಇಲ್ಲ
ಸಿಸಿಟಿವಿ ತುಣುಕು ಲಭ್ಯವಿಲ್ಲದ ಕಾರಣ ಸಿಬಿಐ ಈಗ ಹೇಳಿಕೆಗಳ ಆಧಾರದ ಮೇಲೆ ಮಾತ್ರ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ನಮ್ಮ ಕ್ಯಾಮೆರಾಗಳು ಉತ್ತಮವಾಗಿವೆ. ಆದರೆ ಅವುಗಳ ಬ್ಯಾಕಪ್ ಕೇವಲ 7 ದಿನಗಳು ಎಂದು ಹತ್ರಾಸ್ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಇಂದ್ರವೀರ್ ಸಿಂಗ್ ಹೇಳಿದ್ದಾರೆ. ಸಿಬಿಐ 29 ದಿನಗಳ ಅನಂತರ ಬಂದಿತ್ತು. ಆದ್ದರಿಂದ ಬ್ಯಾಕಪ್ ಅನ್ನು ಇಟ್ಟುಕೊಳ್ಳಲಾಗಿಲ್ಲ. ಪ್ರತಿ 7 ದಿನಗಳಿಗೊಮ್ಮೆ ಹಳೆಯ ದಾಖಲೆಗಳನ್ನು ಅಳಿಸಲಾಗುತ್ತದೆ. ಆದರೆ ಜಿಲ್ಲಾಡಳಿತ ನಮಗೆ ಮಾಹಿತಿ ನೀಡಿದ್ದರೆ ನಾವು ದೃಶ್ಯಾವಳಿಗಳನ್ನು ಸಂಗ್ರಹಿಸಿಡುತ್ತಿದ್ದೆವು ಎಂದು ಆಸ್ಪತ್ರೆ ಹೇಳಿದೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.