Advertisement

ಹಣ ದುರುಪಯೋಗ ಆರೋಪ: ಐಒಎ ಮುಖ್ಯಸ್ಥ ಬಾತ್ರಾ ವಿರುದ್ಧ ಸಿಬಿಐ ತನಿಖೆ

11:25 PM Apr 06, 2022 | Team Udayavani |

ಹೊಸದಿಲ್ಲಿ: ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಶನ್‌ (ಐಒಎ) ಮುಖ್ಯಸ್ಥ, ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ (ಎಫ್ಐಎಚ್‌) ಅಧ್ಯಕ್ಷ ನರೇಂದ್ರ ಬಾತ್ರಾ ವಿರುದ್ಧ ಸಿಬಿಐ ಪ್ರಾಥಮಿಕ ತನಿಖೆ ಆರಂಭ ಮಾಡಿದೆ.

Advertisement

ಬಾತ್ರಾ ಹಾಕಿ ಇಂಡಿಯಾದ 35 ಲಕ್ಷ ರೂ. ಹಣವನ್ನು ತಮ್ಮ ಖಾಸಗಿ ಲಾಭಕ್ಕೆ ಬಳಸಿಕೊಂಡಿದ್ದಾರೆನ್ನುವುದು ಆರೋಪ.

ಈ ಬಗ್ಗೆ ಅಸ್ಲಾಮ್‌ ಶೇರ್‌ ಖಾನ್‌ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ಆರಂಭವಾಗಿದೆ. ಹಾಕಿ ಇಂಡಿಯಾದ ಮಾಜಿ ಅಧ್ಯಕ್ಷರಾಗಿರುವ ಬಾತ್ರಾ, ಇತ್ತೀಚೆಗೆ ಭಾರತದ ಪುರುಷರ ಹಾಕಿ ತಂಡ ನೀಡುತ್ತಿರುವ ಕಳಪೆ ಪ್ರದರ್ಶನವನ್ನು ಬಲವಾಗಿ ಪ್ರಶ್ನಿಸಿದ್ದರು.

ಈ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾ ಮತ್ತು ಬಾತ್ರಾ ನಡುವೆ ಒಳಜಗಳ ಆರಂಭವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಕೊರಿಯ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌ ದ್ವಿತೀಯ ಸುತ್ತಿಗೆ

Advertisement

ಸದ್ಯ ಬಾತ್ರಾ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ ಅಧ್ಯಕ್ಷ. ಅವರಿಗೆ ಹಾಕಿ ಇಂಡಿಯಾದ ಮೇಲೆ ಯಾವುದೇ ಅಧಿಕಾರವಿಲ್ಲ. ಹಾಗಿದ್ದರೂ ಅವರು ಹಾಕಿ ಇಂಡಿಯಾ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದೇಕೆ? ಇದು ಸ್ವಹಿತಾಸಕ್ತಿ ಎನ್ನುವುದು ಅಸ್ಲಾಮ್‌ ಶೇರ್‌ ಖಾನ್‌ ಆರೋಪ. ಅಲ್ಲದೇ ಹಾಕಿ ಇಂಡಿಯಾಕ್ಕೆ ಬಾತ್ರಾರನ್ನು ಆಜೀವ ಸದಸ್ಯರನ್ನಾಗಿ ನೇಮಿಸಿದ್ದರ ವಿರುದ್ಧವೂ ತಗಾದೆ ತೆಗೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next