Advertisement

ಮಣಿಪುರ್ ಮಾಜಿ ಸಿಎಂ ಸರ್ಕಾರಿ ಹಣ ದುರುಪಯೋಗ ಕೇಸ್; ಮೂರು ರಾಜ್ಯಗಳಲ್ಲಿ ಸಿಬಿಐ ದಾಳಿ

09:30 AM Nov 23, 2019 | Nagendra Trasi |

ನವದೆಹಲಿ:ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಏಕಕಾಲಕ್ಕೆ ಮೂರು ರಾಜ್ಯಗಳ ಒಂಬತ್ತು ಸ್ಥಳಗಳಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

Advertisement

ವರದಿಯ ಪ್ರಕಾರ, ಮಿಜೋರಾಂನ ಐಝಾವಲ್, ಮಣಿಪುರದ ಇಂಫಾಲ್, ಹರ್ಯಾಣದ ಗುರುಗ್ರಾಮ್ ಸೇರಿದಂತೆ ಇತರ ಸ್ಥಳಗಳ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ತಿಳಿಸಿದೆ.

ಇತ್ತೀಚೆಗಷ್ಟೇ ಸಿಬಿಐ ಮಣಿಪುರ್ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಹಾಗೂ ಇತರ ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಮಣಿಪುರ್ ಡೆವಲಪ್ ಮೆಂಟ್ ಸೊಸೈಟಿಯ ಅಧ್ಯಕ್ಷರಾಗಿದ್ದ ಇಬೋಬಿ ಸುಮಾರು 332 ಕೋಟಿ ರೂಪಾಯಿ ಸರ್ಕಾರ ಹಣವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಸಿಬಿಐ ಆರೋಪಿಸಿತ್ತು.

ಅಭಿವೃದ್ಧಿ ಕಾರ್ಯಕ್ಕಾಗಿ ಮೀಸಲಿಟ್ಟಿದ್ದ 518 ಕೋಟಿ ರೂಪಾಯಿಯಲ್ಲಿ 332 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ. ಇಬೋಬಿ 2009ರ ಜುಲೈನಿಂದ 2017ರವರೆಗೆ ಅಧ್ಯಕ್ಷರಾಗಿದ್ದ ವೇಳೆ ಅವ್ಯವಹಾರ ನಡೆದಿರುವುದಾಗಿ ಸಿಬಿಐ ಅಧಿಕಾರಿಗಳು ದೂರಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next