ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ ಅವರು ಬುಧವಾರ ಬೆಳಗ್ಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ನಂತರ ಮಾತನಾಡಿದ ಜಿ.ಟಿ ದೇವೇಗೌಡ, ನಾನು ಮತ್ತು ಡಿಕೆಶಿ ಬಹಳ ವರ್ಷಗಳಿಂದ ಸ್ನೇಹಿತರು. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದ್ದವರು ನಾವು. ಬಾಂಬೆಗೂ ಕೂಡ ಜೊತೆಗೆ ತೆರಳಿದ್ದೆವು.
ಇತ್ತೀಚಿಗೆ ಡಿಕೆಶಿ ಕುಟುಂಬ ಮತ್ತು ಸ್ನೇಹಿತರ ಮನೆ ಕಚೇರಿ ಸೇರಿ ಒಟ್ಟು 14 ಸಿಬಿಐ ರೈಡ್ ಆಗಿತ್ತು ಆದರೇ ಚುನಾವಣೆ ಸಮಯದಲ್ಲಿ ರೈಡ್ ಮಾಡಬಾರದಿತ್ತು. ಅದಾಗ್ಯೂ ಸಿಬಿಐ ದಾಳಿ ನಡೆದಿರುವುದು ತಪ್ಪು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಇದನ್ನೂ ಓದಿ: ಡ್ರಗ್ಸ್ ಕೇಸ್; ಒಂದು ತಿಂಗಳ ಬಳಿಕ ರಿಯಾಗೆ ಬಾಂಬೆ ಹೈಕೋರ್ಟ್ ನಲ್ಲಿ ಜಾಮೀನು ಮಂಜೂರು
ಜೆಡಿಎಸ್ ನಿಂದ ದೂರ ಉಳಿದ ವಿಚಾರವಾಗಿ ಮಾತನಾಡಿದ ಅವರು, ಎಲ್ಲವೂ ನಿಮ್ಮಗೆ ಗೊತ್ತಿದೆ. ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ನಿರ್ಧಾರ ಮಾಡುವವರು ಚಾಮುಂಡೇಶ್ವರಿ ಕ್ಷೇತ್ರದ ಜನರು ಎಂದಷ್ಟೇ ತಿಳಿಸಿದರು.