Advertisement

ಜಯಂತಿ ನಟರಾಜನ್‌ ವಿರುದ್ಧ ಸಿಬಿಐ ಎಫ್ಐಆರ್‌

08:30 AM Sep 10, 2017 | Team Udayavani |

ಹೊಸದಿಲ್ಲಿ: ಕಾನೂನು ಉಲ್ಲಂ ಸಿ ಅರಣ್ಯ ಭೂಮಿಯನ್ನು ಉಕ್ಕಿನ ಘಟಕಕ್ಕೆ ನೀಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಕೇಂದ್ರದ ಮಾಜಿ ಪರಿಸರ ಸಚಿವೆ ಜಯಂತಿ ನಟರಾಜನ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಜತೆಗೆ, ಶನಿವಾರ ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಶೋಧ ಕಾರ್ಯವನ್ನೂ ನಡೆಸಿದೆ.

Advertisement

2012ರಲ್ಲಿ ಸಚಿವೆಯಾಗಿದ್ದ ಸಂದರ್ಭ ಜಯಂತಿ ಅವರು ಜಾರ್ಖಂಡ್‌ನ‌ಲ್ಲಿ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ಬಳಸಿಕೊಳ್ಳಲು ಅನುಮತಿ ನೀಡಿದ್ದರು. ಅಧಿಕಾರಿಗಳ ಸಲಹೆ ತಿರಸ್ಕರಿಸಿ, ಕಾನೂನು ಉಲ್ಲಂ ಸಿದ್ದರು ಎಂದು ಆರೋಪಿಸಿ ರುವ ಸಿಬಿಐ, ಎಫ್ಐಆರ್‌ ದಾಖಲಿಸಿಕೊಂಡಿದೆ. ಪ್ರಕರಣ ಸಂಬಂಧ ದೆಹಲಿ, ಕೋಲ್ಕತ್ತಾದಲ್ಲಿರುವ ಇತರೆ ಆರೋಪಿಗಳಿಗೆ ಸಂಬಂಧಿಸಿದ ಕಚೇರಿ, ನಿವಾಸ ಹಾಗೂ ಒಡಿಶಾದಲ್ಲಿರುವ ಗಣಿಗಾರಿಕೆ ಕಂಪೆನಿಯ ಕಚೇರಿಯ ಮೇಲೂ ದಾಳಿ ನಡೆಸಲಾಗಿದೆ. ವಿಶೇಷವೆಂದರೆ, ರಾಹುಲ್‌ ಗಾಂಧಿ ಅವರ ಆದೇಶದ ಮೇರೆಗೆ ಬೃಹತ್‌ ಯೋಜನೆಗಳಿಗೆ ಅನುಮತಿ ಕೊಟ್ಟಿದ್ದೆ ಎಂದು ಈ ಹಿಂದೆ ಜಯಂತಿ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next