ನವದೆಹಲಿ: ಡಿಎಲ್ ಎಫ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ರೈಲ್ವೆ ಸಚಿವ, ರಾಷ್ಟ್ರೀಯ ಜನತಾದಳದ ವರಿಷ್ಠ ಲಾಲು ಪ್ರಸಾದ್ ಯಾದವ್ ಗೆ ಸಿಬಿಐ ಕ್ಲೀನ್ ಚಿಟ್ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಮೂರು ವರ್ಷಕ್ಕಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ ನಂತರ ಏಪ್ರಿಲ್ ನಿಂದ ಜಾಮೀನಿನಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಡಾಮಿನೋಸ್ ಡೇಟಾಗಳು ಡಾರ್ಕ್ ವೆಬ್ ನಲ್ಲಿ ಸೋರಿಕೆ: ಸೈಬರ್ ಪರಿಣಿತರು ಹೇಳುವುದೇನು ?
ಸಿಬಿಐನ ಆರ್ಥಿಕ ಅಪರಾಧ ಬ್ರ್ಯಾಂಚ್ ನ ಮೂಲಗಳ ಪ್ರಕಾರ, ಭ್ರಷ್ಟಾಚಾರ ಆರೋಪದ ಮೇಲೆ ರಿಯಲ್ ಎಸ್ಟೇಟ್ ಗ್ರೂಪ್ ಡಿಎಲ್ ಎಫ್ ಹಾಗೂ ಲಾಲು ಪ್ರಸಾದ್ ವಿರುದ್ಧ 2018ರಲ್ಲಿ ಪ್ರಾಥಮಿಕ ತನಿಖೆ ಆರಂಭಿಸಿರುವುದಾಗಿ ವಿವರಿಸಿದೆ.
ಮುಂಬೈನ ಬಾಂದ್ರಾದ ರೈಲ್ವೆ ಭೂ ಗುತ್ತಿಗೆ ಯೋಜನೆ ಮತ್ತು ನವದೆಹಲಿ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವ ಯೋಜನೆ ಮೇಲೆ ಡಿಎಲ್ ಎಫ್ ಗ್ರೂಪ್ ಕಣ್ಣಿಟ್ಟಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ದೆಹಲಿ ಪ್ರದೇಶದಲ್ಲಿನ ಆಸ್ತಿಯನ್ನು ಡಿಎಲ್ ಎಫ್ ಮಾಜಿ ರೈಲ್ವೆ ಸಚಿವೆ ಲಾಲು ಪ್ರಸಾದ್ ಯಾದವ್ ಗೆ ಲಂಚ ರೂಪದಲ್ಲಿ ನೀಡಿರುವುದಾಗಿ ವರದಿ ತಿಳಿಸಿದೆ.
ಸಿಬಿಐ ಮೂಲಗಳು ಎನ್ ಡಿಟಿವಿಗೆ ತಿಳಿಸಿರುವಂತೆ, ಈ ಪ್ರಕರಣದ ಬಗ್ಗೆ ಎರಡು ವರ್ಷಗಳ ಕಾಲ ಪ್ರಾಥಮಿಕ ತನಿಖೆಯನ್ನು ನಡೆಸಿ ಮುಕ್ತಾಯಗೊಳಿಸಲಾಗಿದೆ. ಈ ಆರೋಪ ಸಾಬೀತುಪಡಿಸುವ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಸಿಬಿಐ ತಿಳಿಸಿರುವುದಾಗಿ ಹೇಳಿದೆ.