Advertisement
ವಾಪಸಾದ ತಂಡ: ಸುಶಾಂತ್ ಪ್ರಕರಣದ ತನಿಖೆಗಾಗಿ ಮುಂಬಯಿಗೆ ಆಗಮಿಸಿದ್ದ ನಾಲ್ವರು ಪೊಲೀಸರ ತಂಡ ಗುರುವಾರ ಬಿಹಾರಕ್ಕೆ ಮರಳಿದೆ. ಸುಶಾಂತ್ ತಂದೆ ರಿಯಾ ವಿರುದ್ಧ ನೀಡಿದ ದೂರಿನನ್ವಯ ತನಿಖೆಗೆಂದು ಜು.28 ರಂದು ಈ ತಂಡ ಮುಂಬಯಿಗೆ ಆಗಮಿಸಿತ್ತು. ಈ ನಡುವೆ ಬಿಹಾರ ಮತ್ತು ಮುಂಬಯಿ ಪೊಲೀಸರ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಮುಂಬಯಿನಲ್ಲಿ ಒತ್ತಾಯಪೂರ್ವಕ ವಾಗಿ ಕ್ವಾರಂಟೈನ್‌ನಲ್ಲಿ ಇಟ್ಟಿರುವ ಬಿಹಾರದ ಐಪಿಎಸ್ ಅಧಿಕಾರಿಯನ್ನು ಬಿಡುಗಡೆ ಮಾಡದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ಬಿಹಾರ ಪೊಲೀಸ್ ಮುಖ್ಯಸ್ಥ ಗುಪ್ತೆಶ್ವರ ಪಾಂಡೆ ಎಚ್ಚರಿಸಿದ್ದಾರೆ. ಬೃಹನ್ಮುಂಬೈ ಪಾಲಿಕೆಯ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿಕಾರಿದ ಬಳಿಕವೂ ಅಧಿ ಕಾರಿ ವಿನಯ್ ತಿವಾರಿಯವರನ್ನು ಬಿಡು ಗಡೆ ಮಾಡದೇ ಸತಾಯಿಸುತ್ತಿರುವ ಹಿನ್ನೆಲೆ ಯಲ್ಲಿ ಪಾಂಡೆ ಈ ಎಚ್ಚರಿಕೆ ನೀಡಿದ್ದಾರೆ.
ಸುಶಾಂತ್ ಅವರ ಮೊಬೈಲ್ ಫೋನ್ ಸಂಖ್ಯೆಯನ್ನು ಗರ್ಲ್ಫ್ರೆಂಡ್ ರಿಯಾ ಚಕ್ರವರ್ತಿ ಜೂನ್ 8ರಂದೇ ಬ್ಲಾಕ್ ಮಾಡಿದ್ದರು ಎಂಬ ಹೊಸ ವಿಚಾರ ಗುರುವಾರ ಬೆಳಕಿಗೆ ಬಂದಿದೆ. ಹೀಗಾಗಿ ಜೂ.8ರಿಂದ 14ರವರೆಗೆ ಸುಶಾಂತ್ ಮತ್ತು ರಿಯಾ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿರಲಿಲ್ಲ ಎಂದು ಕಾಲ್ ರೆಕಾರ್ಡ್‌ಗಳ ಮಾಹಿತಿಯಿಂದ ತಿಳಿದುಬಂದಿದೆ. 14ರಂದು ಸುಶಾಂತ್ ಬಾಂದ್ರಾದ ತಮ್ಮ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.