Advertisement

ವಕೀಲೆ ಇಂದಿರಾ ಜೈಸಿಂಗ್‌ ಪತಿ ವಿರುದ್ಧ ದೂರು

12:48 AM Jun 19, 2019 | Team Udayavani |
ನವದೆಹಲಿ: ವಿದೇಶದಿಂದ ಅಕ್ರಮ ಅನುದಾನ ಸ್ವೀಕರಿಸಿದ ಪ್ರಕರಣದಲ್ಲಿ ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಇಂದಿರಾ ಜೈಸಿಂಗ್‌ ಪತಿ, ದೆಹಲಿಯ ಹಿರಿಯ ವಕೀಲ ಆನಂದ್‌ ಗ್ರೋವರ್‌ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ. ಆದರೆ ಗೃಹ ಸಚಿವಾಲಯವು ಸಿಬಿಐಗೆ ನೀಡಿದ ಮಾಹಿತಿಯಲ್ಲಿ ಇಂದಿರಾ ವಿರುದ್ಧವೇ ಆರೋಪಗಳಿದ್ದವಾದರೂ, ಸಿಬಿಐ ದೂರಿನಲ್ಲಿ ಇಂದಿರಾ ಪ್ರಸ್ತಾಪ ಇಲ್ಲ. ಗ್ರೋವರ್‌ ನೇತೃತ್ವದ ಎನ್‌ಜಿಒ ಲಾಯರ್ಸ್‌ ಕಲೆಕ್ಟಿವ್‌ ಹೆಸರಿನಲ್ಲಿ ಈ ಅಕ್ರಮ ವಹಿವಾಟು ನಡೆದಿದೆ. ಹೆಚ್ಚುವರಿ ಸಾಲಿಸಿಟರ್‌ ಜನರಲ್ ಆಗಿದ್ದಾಗ ಇಂದಿರಾ ವಿದೇಶ ಪ್ರಯಾಣ ಮಾಡಿದ್ದರು. ಇದರ ಖರ್ಚುವೆಚ್ಚವನ್ನು ಲಾಯರ್ಸ್‌ ಕಲೆಕ್ಟಿವ್‌ ನಿರ್ವಹಿಸಿತ್ತು. ಇದಕ್ಕಾಗಿ ಲಾಯರ್ಸ್‌ ಕಲೆಕ್ಟಿವ್‌ಗೆ ವಿದೇಶದಿಂದ ಅನುದಾನ ಲಭ್ಯವಾಗಿತ್ತು. ಅನುಮತಿ ಇಲ್ಲದೇ ಈ ವಹಿವಾಟು ನಡೆದಿದೆ ಎಂದು ಆರೋಪಿಸಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next