Advertisement

ಜಯಂತಿ ನಟರಾಜನ್‌ ನಿವಾಸಕ್ಕೆ ಸಿಬಿಐ ದಾಳಿ, FIR ದಾಖಲು

07:17 PM Sep 09, 2017 | udayavani editorial |

ಹೊಸದಿಲ್ಲಿ : ಸಿಬಿಐ ಇಂದು ಶನಿವಾರ ಮಾಜಿ ಕೇಂದ್ರ ಪರಿಸರ ಸಚಿವೆ ಜಯಂತಿ ನಟರಾಜನ್‌ ಅವರ ಚೆನ್ನೈ ನಿವಾಸದ ಶೋಧ ಕಾರ್ಯಾಚರಣೆ ಕೈಗೊಂಡು ಆಕೆ ತನ್ನ ಅಧಿಕಾರಾವಧಿಯಲ್ಲಿ ತನ್ನ ಅಧಿಕಾರವನ್ನು ದುರುಪಯೋಗಿಸಿಕೊಂಡಿರುವ ಆರೋಪದಲ್ಲಿ ಆಕೆಯ ವಿರುದ್ದ  ಕ್ರಿಮಿನಲ್‌ ಸಂಚಿನ ಕೇಸನ್ನು ದಾಖಲಿಸಿಕೊಂಡಿದೆ. 

Advertisement

ಭ್ರಷ್ಟಾಚಾರ ತಡೆ ಕಾಯಿದೆಯ ಸೆ.120ಬಿ ಅಡಿ ಕ್ರಿಮಿನಲ್‌ ಸಂಚು ಮತ್ತು ಅಧಿಕಾರ ದುರ್ಬಳಕೆಯ ಕೇಸನ್ನು ದಾಖಲಿಸಿಕೊಂಡಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಇದೇ ವೇಳೆ ಸಿಬಿಐ ಇಲೆಕ್ಟ್ರೋ ಸ್ಟೀಲ್‌ ಕ್ಯಾಸ್ಟಿಂಗ್‌ ಲಿಮಿಟೆಡ್‌ ಹಾಗೂ ಅದರ ಆಗಿನ ಆಡಳಿತ ನಿರ್ದೇಶಕ ಉಮಂಗ್‌ ಕೇಜ್ರಿವಾಲ್‌ ವಿರುದ್ಧವೂ ಪಿಸಿ ಕಾಯಿದೆ ಸೆ.120ರಡಿ ಕ್ರಿಮಿನಲ್‌ ಸಂಚಿನ ಕೇಸನ್ನು ದಾಖಲಿಸಿಕೊಂಡಿದೆ. 

ಜಯಂತಿ ನಟರಾಜನ್‌ ವಿರುದ್ಧದ ಕೇಸಿನ ವಿಚಾರಗಳು 2012ರಷ್ಟು ಹಿಂದಿನದ್ದಾಗಿದೆ. ಅಂದು ಆಕೆ ಜಾರ್ಖಂಡ್‌ನ‌ ಸಿಂಘಭೂಮ್‌ ಜಿಲ್ಲೆಯಲ್ಲಿನ ಅರಣ್ಯ ಭೂಮಿಯನ್ನು, ಅರಣ್ಯ ಸಂರಕ್ಷಣೆ ಕಾಯಿದೆಯ ಉಲ್ಲಂಘನೆಗೈದು, ಇಲೆಕ್ಟ್ರೋ ಸ್ಟೀಲ್‌ ಕಂಪೆನಿಗೆ ಪರಭಾರೆ ಮಾಡಿದ್ದರು. 

ಜಯಂತಿ ನಟರಾಜನ್‌ ಅವರ ಪೂರ್ವಾಧಿಕಾರಿಯಾಗಿದ್ದ ಸಚಿವ ಜೈರಾಮ್‌ ರಮೇಶ್‌ ಅವರು ಇದೇ ವಿಷಯದಲ್ಲಿ ಅನುಮತಿ ನಿರಾಕರಿಸಿದ್ದರು. ಅದರ ಹೊರತಾಗಿಯೂ ಜಯಂತಿ ನಟರಾಜನ್‌ ತನ್ನ ಅಧಿಕಾರಾವಧಿಯಲ್ಲಿ ಅನುಮತಿ ನೀಡಿದ್ದರು. ಹಾಗೆ ಮಾಡುವಾಗ ಆಕೆ ಅರಣ್ಯ ಮಹಾ ನಿರ್ದೇಶಕರ ಸಲಹೆಗಳನ್ನು ಮತ್ತು ಸುಪ್ರೀಂ ಕೋರ್ಟಿನ ಮಾರ್ಗದರ್ಶಿ ಸೂತ್ರಗಳನ್ನು ಪೂರ್ಣವಾಗಿ ನಿರ್ಲಕ್ಷಿಸಿದ್ದರು. 

Advertisement

ಈ ವಿಷಯದಲ್ಲಿನ ವಿವಾದವು ತಾರಕಕ್ಕೇರಿದ್ದ ಸಂದರ್ಭದಲ್ಲಿ 2013ರ ಡಿಸೆಂಬರ್‌ 21ರಂದು ಜಯಂತಿ ನಟರಾಜನ್‌ ಅವರು ಸಚಿವಪದದಿಂದ ಕೆಳಗಿಳಿದಿದ್ದರು. ತಾನು ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ನಿರ್ದಿಷ್ಟ ಕೋರಿಕೆಯ ಮೇರೆಗೆ ಅನುಮತಿ ನೀಡಿದ್ದೆ ಎಂದು ಅನಂತರ ಜಯಂತಿ ನಟರಾಜನ್‌ ಹೇಳಿದ್ದರು. 

ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜಯಂತಿ ನಟರಾಜನ್‌ ಅವರು 2015ರಲ್ಲಿ ಕಾಂಗ್ರೆಸ್‌ ತ್ಯಜಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next