Advertisement

INX ಮಾಧ್ಯಮ ಪ್ರಕರಣ; ಸಿಬಿಐನಿಂದ ಚಾರ್ಜ್ ಶೀಟ್, ಚಿದಂಬರಂ, ಪೀಟರ್ ಸೇರಿ 14 ಮಂದಿ ಆರೋಪಿಗಳು

11:43 AM Oct 19, 2019 | Team Udayavani |

ನವದೆಹಲಿ: ಐಎನ್ ಎಕ್ಸ್ ಮಾಧ್ಯಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಸಿದ್ದು, ಕೇಂದ್ರ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಸೇರಿದಂತೆ 14 ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಐಎನ್ ಎಕ್ಸ್ ಮಾಧ್ಯಮ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ಶುಕ್ರವಾರ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ, ಪೀಟರ್ ಮುಖರ್ಜಿ ಸೇರಿದಂತೆ 14 ಆರೋಪಿಗಳ ಹೆಸರು ದಾಖಲಿಸಲಾಗಿದೆ.

ಈ ಪ್ರಕರಣದಲ್ಲಿ ಚಿದಂಬರಂ ಹಲವಾರು ವಾರಗಳ ಕಾಲ ತಿಹಾರ್ ಜೈಲುವಾಸ ಅನುಭವಿಸಿದ್ದರು. ಗುರುವಾರ ದೆಹಲಿ ಕೋರ್ಟ್ ಚಿದಂಬರಂ ಅವರನ್ನು ಅಕ್ಟೋಬರ್ 24ರವರೆಗೆ ಇ.ಡಿ ವಶಕ್ಕೆ ಒಪ್ಪಿಸಿ ಆದೇಶ ನೀಡಿತ್ತು.  ನಂತರ ಜಾರಿ ನಿರ್ದೇಶನಾಲಯ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಚಿದಂಬರಂ ಅವರನ್ನು ವಿಚಾರಣೆಗೊಳಪಡಿಸಿ ಬಂಧಿಸಿತ್ತು.

ಆಗಷ್ಟ್ 12ರಂದು ಐಎನ್ ಎಕ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಎರಡು ತಿಂಗಳ ಕಾಲದಿಂದ ಚಿದಂಬರಂ ಸಿಬಿಐ ಮತ್ತು ನ್ಯಾಯಾಂಗ ಬಂಧನದಲ್ಲಿದ್ದಾರೆ. ವಿಚಾರಣೆ ನಂತರ ಚಾರ್ಜ್ ಶೀಟ್ ಸಲ್ಲಿಸಿರುವ ಸಿಬಿಐ, ಚಿದಂಬರಂ, ಪೀಟರ್ ಮುಖರ್ಜಿ, ಕಾರ್ತಿ ಚಿದಂಬರಂ, ಭಾಸ್ಕರ್(ಕಾರ್ತಿ ನಿಕಟವರ್ತಿ), ಮಾಜಿ ಕಾರ್ಯದರ್ಶಿ ಆರ್.ಪ್ರಸಾದ್, ಮಾಜಿ ನಿರ್ದೇಶಕ ಪ್ರಬೋಧ್ ಸಕ್ಸೇನಾ, ಜಂಟಿ ಕಾರ್ಯದರ್ಶಿ ಅನುಪ್ ಪೂಜಾರಿ ಮತ್ತು ಹೆಚ್ಚುವರಿ ಕಾರ್ಯದರ್ಶಿ ಸಿಧುಶ್ರೀ ಖುಲ್ಲಾರ್ , ಐಎನ್ ಎಕ್ಸ್ ಮೀಡಿಯಾ, ಎಎಸ್ ಸಿಪಿಲ್ ಮತ್ತು ಚೆಸ್ ಮ್ಯಾನೇಜ್ ಮೆಂಟ್ ಅನ್ನು ಆರೋಪಿಗಳು ಎಂದು ಹೆಸರು ಉಲ್ಲೇಖಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next