ನವದೆಹಲಿ: 25 ಲಕ್ಷ ರೂಪಾಯಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರೆಕ್ಟೋರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (ಡಿಆರ್ ಐ)ನ ಅಡಿಷನಲ್ ಡೈರೆಕ್ಟರ್ ಜನರಲ್ ಚಂದ್ರಶೇಖರ್ ಮತ್ತು ಮಧ್ಯವರ್ತಿಯನ್ನು ಸಿಬಿಐ ಬುಧವಾರ ಬಂಧಿಸಿದೆ.
Advertisement
ಡಿಆರ್ ಐ ವೆಬ್ ಸೈಟ್ ಪ್ರಕಾರ, ಚಂದ್ರಶೇಖರ್ ಅವನ್ನು ಲುಧಿಯಾನಾದಲ್ಲಿ ಎಡಿಜಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಧಿಕಾರಿ(ಚಂದ್ರಶೇಖರ್)ಯ ಆಣತಿ ಮೇರೆಗೆ ಲಂಚ ಸ್ವೀಕರಿಸುತ್ತಿದ್ದ ಮಧ್ಯವರ್ತಿಯನ್ನು ಸಿಬಿಐ ಬಂಧಿಸಿತ್ತು.
ತನಿಖೆಯ ವೇಳೆ ತಾವು ಪಡೆಯುತ್ತಿರುವ ಲಂಚ ಅಧಿಕಾರಿಗೆ ಸೇರಿದ್ದು ಎಂದು ಮಧ್ಯವರ್ತಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಸೂತ್ರಧಾರಿ ಅಧಿಕಾರಿಯನ್ನು ಬಂಧಿಸಿರುವುದಾಗಿ ತಿಳಿಸಿದೆ.