ಶಿರ್ವ: ಪಣಿಯಾಡಿಯ ಶ್ರೀಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಉತ್ಖನನದ ವೇಳೆ ಪತ್ತೆಯಾಗಿದ್ದು ಶಿಲಾಯುಗದ ಗುಹಾ ಸಮಾಧಿ ಎಂದು ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ|ಟಿ. ಮುರುಗೇಶಿ ತಿಳಿಸಿದ್ದಾರೆ.
ನೆಲಮಟ್ಟದಿಂದ ಸುಮಾರು 3 ಅಡಿ ಆಳದಲ್ಲಿ ಈ ಗುಹೆಯ ಎರಡು ಅಡಿ ಸುತ್ತಳತೆಯ ಪ್ರವೇಶ ದ್ವಾರ ಕಂಡು ಬಂದಿದೆ. ಇದು 8 ಅಡಿ ವಿಸ್ತೀರ್ಣದಲ್ಲಿ ಹಂಡೆಯ ರೀತಿ ಇದೆ. ಮಣ್ಣು ಕುಸಿದಿದ್ದರಿಂದ ಅವಶೇಷ ಸಂಗ್ರಹಣೆ ಸಾಧ್ಯವಾಗಿಲ್ಲ. ಸಾಂತೂರಿನ ಸಮಾಧಿಯಲ್ಲಿ ಮಡಕೆ ಅವಶೇಷಗಳು ಪತ್ತೆಯಾಗಿದ್ದವು.
ಇದನ್ನೂ ಓದಿ:ಒಂದು ಅಪರೂಪದ ಸಂದರ್ಶನ; ಯುವ ಧೋನಿ ವರ್ಸಸ್ ನಿವೃತ್ತ ಧೋನಿ!
ಸ್ಥಳೀಯ ಅಧ್ಯಯನದಲ್ಲಿ ರಾಜೇಶ ಭಟ್ ಪಣಿಯಾಡಿ ಅವರು ಸಹಕರಿಸಿದ್ದರು.ಇದೇ ರೀತಿ ಪಾವಂಜೆಯ ಸುಬ್ರಹ್ಮಣ್ಯ ದೇವಾಲಯ, ಸಾಂತೂರಿನ ಸುಬ್ರಹ್ಮಣ್ಯ ದೇವಾಲಯ ಮತ್ತು ಸೂಡಾದ ಸುಬ್ರಹ್ಮಣ್ಯ ದೇವಾಲಯಗಳ ಸಮೀಪದಲ್ಲೂ ಗುಹಾ ಸಮಾಧಿಗಳು ಪತ್ತೆಯಾಗಿವೆ.
ಪಳ್ಳಿಯ ಮದ್ಮಲ್‌ಪಾದೆಯಲ್ಲಿ ಬೃಹತ್ ಶಿಲಾಯುಗದ ಕಲ್ಮನೆ ಸಮಾಧಿಯನ್ನೇ ನಾಗಬ್ರಹ್ಮಸ್ಥಾನವಾಗಿ ಆರಾಧಿಸಲಾಗುತ್ತಿದೆ.