Advertisement

Cauvery ನೀರು ತಮಿಳುನಾಡಿಗೆ; ಬಿಜೆಪಿ ಪ್ರತಿಭಟನೆ: ಸಂಸದೆ ಸುಮಲತಾ ಭಾಗಿ

04:41 PM Aug 21, 2023 | Team Udayavani |

ಮಂಡ್ಯ: ಕೆಆರ್‌ಎಸ್ ಅಣೆಕಟ್ಟಿನಿಂದ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ಬಿಜೆಪಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದೆ.

Advertisement

ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ಹೆದ್ದಾರಿಯಲ್ಲಿ ಟೈರ್​​​ಗಳಿಗೆ ಬೆಂಕಿ ಹಾಕಿ ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ : Cauvery; ಡಿಎಂಕೆ ಒತ್ತಡಕ್ಕೆ ಮಣಿದು ತಮಿಳುನಾಡಿಗೆ ನೀರು: ರಾಜೀವ್ ಚಂದ್ರಶೇಖರ್ ಕಿಡಿ

”ಕಾವೇರಿ ಒಡಲನ್ನು ಬರಿದು ಮಾಡಿಯೇ ಸಿದ್ದ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಕಲ್ಪ ತೊಟ್ಟಂತಿದೆ.ಕಾವೇರಿಗಾಗಿ ಹೋರಾಟ ನಡೆಯುತ್ತಿರುವಾಗಲೇ, ಕೇವಲ 4,900 ಕ್ಯೂಸೆಕ್ಸ್ ಒಳಹರಿವು ಇರುವಾಗ ತಮಿಳುನಾಡಿಗೆ 12,631 ಕ್ಯೂಸೆಕ್ಸ್ ಕಾವೇರಿ ಹರಿಸಿ ರಾಜ್ಯದ ರೈತರನ್ನೇ ಲೇವಡಿ ಮಾಡಲಾಗುತ್ತಿದೆ. ಮುಂದಿನ ಬೇಸಿಗೆಯಲ್ಲ, ಚಳಿಗಾಲದಲ್ಲೇ ಕೆ.ಆರ್.ಎಸ್. ಬರಿದು ಮಾಡುವುದು ಸಿದ್ದರಾಮಯ್ಯ ಅವರ ಸರ್ಕಾರದ ದುಷ್ಟ ಗುರಿಯಂತಿದೆ!” ಎಂದು ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

ಸರ್ವಪಕ್ಷ ಸಭೆ ಕರೆದ ಡಿಸಿಎಂ
ಜಲಸಂಪನ್ಮೂಲ ಸಚಿವ,ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಕೋರ್ಟ್ ಆದೇಶದಂತೆ ನೀರು ಬಿಟ್ಟಿದ್ದೇವೆ. ಬುಧವಾರ ಸರ್ವಪಕ್ಷ ನಾಯಕರ ಸಭೆ ಕರೆದಿದ್ದೇವೆ. ಕೇಂದ್ರ ಸರಕಾರದ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ದು, ಅಲ್ಲಿಮಹದಾಯಿ ವಿಚಾರವನ್ನೂ ಚರ್ಚೆ ಮಾಡಬೇಕು ಎಂದು ಹೇಳಿದ್ದಾರೆ.

Advertisement

ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕರಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು, ಜನರ ಒಳಿತಿಗಾಗಿ ಕೆಲಸ ಮಾಡಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next