Advertisement
ವಿಪಕ್ಷಗಳ ವಿರುದ್ಧ ಸಿದ್ದರಾಮಯ್ಯ ಕಿಡಿಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆ ನಡೆಸಲು ಅವಕಾಶವಿದೆ. ಕಾವೇರಿ ವಿಚಾರದಲ್ಲಿ ನಡೆಯುತ್ತಿರುವ ಹೋರಾಟವನ್ನು ನಾವು ಹತ್ತಿಕ್ಕುವುದಿಲ್ಲ. ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಾವೇರಿ ವಿವಾದದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಮಂಗಳವಾರ ನಡೆಯುವ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.
Related Articles
ಬೆಂಗಳೂರು: ನೀವು ಕಾವೇರಿ ಬಗ್ಗೆ ಮಾತನಾಡಿದರೆ ನನ್ನ ಸರಕಾರ ಹೋಗುತ್ತದೆ. ತಮಿಳರು ಎಲ್ಲರೂ ಒಟ್ಟಾಗಿದ್ದಾರೆ. ಕೋರ್ಟ್‌ನಲ್ಲೇ ಬಗೆಹರಿಸಿಕೊಳ್ಳಿ ಎಂದು ಅಂದಿನ ಪ್ರಧಾನಿ
ಮನಮೋಹನ್ ಸಿಂಗ್ ಕೈಚೆಲ್ಲಿದ್ದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
Advertisement
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಮನ ಮೋಹನ್ ಸಿಂಗ್ ಸಂಪುಟದಲ್ಲಿ ನಮ್ಮ ರಾಜ್ಯದ 4 ಜನ ಮಂತ್ರಿಗಳಿದ್ದರು. ಅವರಲ್ಲಿ ಒಬ್ಬರೂ ಅಂದು ರಾಜ್ಯದ ಪರವಾಗಿ ಮಾತನಾಡಲಿಲ್ಲ. ಈಗ ಮನಮೋಹನ್ ಸಿಂಗ್ ಅವರೂ ಇದ್ದಾರೆ, ಆ ನಾಲ್ವರು ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಲಿ, ಎಸ್.ಎಂ.ಕೃಷ್ಣ, ಕೆ.ಎಚ್.ಮುನಿಯಪ್ಪ ಅವರೂ ಇದ್ದಾರೆ. ಇದು ಕರ್ನಾಟಕದ ಬಗ್ಗೆ ಕಾಂಗ್ರೆಸ್ ತೋರಿಸಿದ ಕಾಳಜಿ ಎಂದು ಜರಿದರು.
ಬರಿದಾದ ಜಲಾಶಯಗಳ ಚಿತ್ರ ಪ್ರದರ್ಶನರಾಜ್ಯದಲ್ಲಿ ದೊಡ್ಡ ಪ್ರಮಾಣದ ಜಲ ಸಂಕಷ್ಟ ಉಂಟಾಗಿದೆ. ಜಲಾಶಯಗಳಲ್ಲಿ ನೀರಿಲ್ಲ. ಆದರೂ ತಮಿಳುನಾಡಿಗೆ ನೀರು ಬಿಡಿ ಎಂದು ಆದೇಶಗಳು ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಮಾಜಿ ಪ್ರಧಾನಿಗಳು, ಸುದ್ದಿಗೋಷ್ಠಿಯಲ್ಲಿ ಬರಿದಾದ ಕೆಆರ್‌ಎಸ್ ಜಲಾಶಯದ ಚಿತ್ರಗಳನ್ನು ಪ್ರದರ್ಶಿಸಿದರು. ಈ ಫೋಟೋಗಳನ್ನು ಪ್ರಧಾನಿಯವರಿಗೂ ಕಳಿಸುತ್ತೇವೆ. ಅವರೇ ಗಮನಿಸಲಿ. ನೀರಿದ್ದರೆ ಸಮಸ್ಯೆ ಇಲ್ಲ. ನೀರು ಇಲ್ಲದಿದ್ದಕ್ಕೆ ಈ ಬಿಕ್ಕಟ್ಟು. ಅವರೂ ಬದುಕಬೇಕು, ನಾವೂ ಬದುಕಬೇಕು. ರಾಜ್ಯಸಭೆಯಲ್ಲಿ ನಾನು ಎಲ್ಲ ವಿಷಯವನ್ನು ಹೇಳಿದ್ದೇನೆ. ನನ್ನಿಂದ ನಿಲ್ಲಲು ಆಗದಿದ್ದರೂ ಶಕ್ತಿಮೀರಿ ಪ್ರಯತ್ನಿಸಿ ಎದ್ದು ನಿಂತು ಮಾತನಾಡಿದ್ದೇನೆ. ಕಣ್ಣೀರು ಹಾಕಿದ್ದೇನೆ ಎಂದು ಗದ್ಗದಿತರಾಗಿ ಹೇಳಿದರು. ಪ್ರಧಾನಿ ಮಧ್ಯಪ್ರವೇಶಕ್ಕೆ ಎಚ್‌ಡಿಕೆ ಆಗ್ರಹ
ಬೆಂಗಳೂರು: ಸಿಡಬ್ಲೂಎಂಎ ಹಾಗೂ ಸಿಡಬ್ಲೂಆರ್‌ಸಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಸೂಚನೆ ನೀಡಿದ ದಿನವೇ ಪ್ರಧಾನಿಗಳು ಮಧ್ಯ ಪ್ರವೇಶಿಸ ಬೇಕೆಂದು ಹೇಳಿದ್ದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಲೂ ಪ್ರಧಾನಿ ಮಧ್ಯಪ್ರವೇಶ ಮಾಡುವಂತೆ ನಾನು ಆಗ್ರಹಿಸುತ್ತೇನೆ ಎಂದರು. ಕುಮಾರಸ್ವಾಮಿ ಅವರು ಅಮಿತ್ ಶಾ ಜತೆ ಮಾತನಾಡಿಕೊಂಡು ಬಂದಿದ್ದಾರೆ. ಅದೇ ಕಾವೇರಿ ವಿಚಾರವಾಗಿ ಮಾತನಾಡಬೇಕಿತ್ತು ಎಂಬ ಸಚಿವರೊಬ್ಬರ ಹೇಳಿಕೆ ಬಗ್ಗೆ ಕಿಡಿಕಾರಿದ ಅವರು, ಆ ಸಚಿವರು ಮೊದಲೇ ಹೇಳಿದ್ದರೆ ಮಾತನಾಡಿಕೊಂಡು ಬರುತ್ತಿದೆ. ಅವರೂ ಹೋಗಿ ಕೇಂದ್ರ ಮಂತ್ರಿಯನ್ನು ಭೇಟಿ ಮಾಡಿದ್ದರಲ್ಲ, ಅವರು ಏನು ಮಾತನಾಡಿಕೊಂಡು ಬಂದಿದ್ದಾರೆ ಎಂದು ಮರು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ ಮುಂದೆ ಈ ಸರಕಾರ ಏನು ವಾಸ್ತವಾಂಶ ಇಟ್ಟಿದೆ ಎಂದು ಹೇಳಲಿ. ದೇವೇಗೌಡರ ಬದ್ಧತೆ ಇವರಿಗೆ ಇದೆಯಾ? ಇವರಿಂದ ಕಲೀಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು. ಬಂದ್‌ಗೆ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ನೈತಿಕ ಬೆಂಬಲ
ಬೆಂಗಳೂರು: ಬೆಂಗಳೂರು ಬಂದ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ತಿಳಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಗಮ್ ಸುರೇಶ್, ಬೆಂಗಳೂರು ಬಂದ್‌ನಲ್ಲಿ ಸ್ವಯಂ ಪ್ರೇರಿತವಾಗಿ ಪತ್ರಿಕೆ ವಿತರಣೆ ಮಾಡುವುದರ ಜತೆಗೆ ಕಪ್ಪು ಪಟ್ಟಿ ಧರಿಸಿ ಕಾವೇರಿ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಪತ್ರಿಕಾ ವಿತರಕರು ನೀಡಲಿದ್ದಾರೆ. ರಾಜ್ಯದ ರೈತರ ಹಿತದೃಷ್ಟಿಯಿಂದ ಹಾಗೂ ಜೀವ ಜಲಗಳ ಹಿತದೃಷ್ಟಿಯಿಂದ ನಡೆಯುವ ಹೋರಾಟಕ್ಕೆ ಪತ್ರಿಕಾ ವಿತರಕರು ಸದಾ ಬೆಂಬಲವಾಗಿ ನಿಲ್ಲಲಿದ್ದಾರೆ ಎಂದು ತಿಳಿಸಿದ್ದಾರೆ.