Advertisement

ಇನ್ನೆರಡು ವಾರದಲ್ಲಿ ಕಾವೇರಿ ತೀರ್ಪು 

07:25 AM Sep 08, 2017 | Team Udayavani |

ಹಾಸನ: ಕಾವೇರಿ ನೀರು ಹಂಚಿಕೆ ವಿವಾದ ಕುರಿತು ಸುಪ್ರೀಂಕೋರ್ಟ್‌ ತೀರ್ಪು ಒಂದೆರಡು ವಾರದಲ್ಲಿ ಪ್ರಕಟವಾಗಲಿದೆ. ವಿಚಾರಣೆ ನಡೆಸಿರುವ ನ್ಯಾ. ದೀಪಕ್‌ ಮಿಶ್ರಾ ಇದೀಗ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ವಿಚಾರಣೆ ಆರಂಭದಲ್ಲಿಯೇ ವಿವಾದವನ್ನು ಮತ್ತೆ ಕಾವೇರಿ ನ್ಯಾಯಾಧಿಕರಣಕ್ಕೆ ನೀಡುವುದಿಲ್ಲ. ಸುಪ್ರೀಂಕೋರ್ಟ್‌ ತೀರ್ಪು ನೀಡಲಿದೆ. ಈ ತೀರ್ಪು ರಾಜ್ಯದ ಕಾವೇರಿ ಕಣಿವೆಯ ಹಣೆಬರಹ ಬರೆಯಲಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಚಾರಣೆಯ ಹಂತದಲ್ಲಿ ನಡೆದ ವಾದ-ಪ್ರತಿವಾದಗಳನ್ನು ಗಮನಿಸಿದರೆ ತೀರ್ಪು ಹೇಗಿರಬಹುದೆಂದು ಊಹಿಸಬಹುದು. ತಮಿಳುನಾಡಿನವರು ನೀರಿಲ್ಲದೆ ಭಾರೀ ಸಂಕಷ್ಟದಲ್ಲಿದ್ದೇವೆಂದು ದೆಹಲಿಯಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿ ಕೇಂದ್ರ ಸರ್ಕಾರ, ನ್ಯಾಯಾಂಗದ ಗಮನ ಸೆಳೆದಿದ್ದಾರೆ. ಆದರೆ, ಕನ್ನಡಿಗರು ಈ ನಿಟ್ಟಿನಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ವಿಷಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next