Advertisement
ಕಾವೇರಿ ನೀರಿಗಾಗಿ ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಹೋರಾಟ ಬೆಂಕಿಯನ್ನೇ ಹಬ್ಬಿಸುತ್ತಿತ್ತು. ಮಾಜಿ ಸಂಸದ ಜಿ.ಮಾದೇಗೌಡ ಅವರ ನಾಯಕತ್ವದಲ್ಲಿ ಜಿಲ್ಲೆಯ ಎಲ್ಲ ಸಂಘಟನೆಗಳು ಹೋರಾಟಕ್ಕಿಳಿಯುತ್ತಿದ್ದವು. ಇದರಿಂದ ಇಡೀ ಸರ್ಕಾರವೇ ಬೀಳಿಸುವ ಮಟ್ಟಕ್ಕೆ ಹೋರಾಟದ ಕಾವು ಪಡೆಯುತ್ತಿತ್ತು.
Related Articles
Advertisement
ಸಮಿತಿ ಪುನರ್ ರಚನೆಗಿಲ್ಲ ಆಸಕ್ತಿ: ಮಾದೇಗೌಡರ ನಿಧನದ ನಂತರ ಇದ್ದೂ ಸತ್ತಂತಿರುವ ಸಮಿತಿಯನ್ನು ಪುನರ್ ರಚನೆ ಮಾಡುವ ಆಸಕ್ತಿ ಯಾರಿಗೂ ಇಲ್ಲದಂತಾಗಿದೆ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಪಕ್ಷಾತೀತ ವಾಗಿ ಕೂಡಿತ್ತು. ಸಮಿತಿಯಲ್ಲಿ ಎಲ್ಲ ಪಕ್ಷದ ನಾಯಕರು ಇದ್ದರು. ಸಮಿತಿಯಲ್ಲಿ ಪದಾ ಕಾರಿಗಳಾಗಿದ್ದ ರಾಜಕೀಯ ಮುತ್ಸದ್ಧಿಗಳಾದ ಜಿ.ಮಾದೇಗೌಡ, ಡಾ.ಎಚ್.ಡಿ. ಚೌಡಯ್ಯ ಸೇರಿದಂತೆ ಅನೇಕ ಹಿರಿಯರು ಪದಾಧಿಕಾರಿಗಳು ಮರಣ ಹೊಂದಿದ್ದಾರೆ. ಆದರೆ ಇದುವರೆಗೂ ಸಮಿತಿ ಪುನರ್ ರಚಿಸುವ ಕಾರ್ಯಕ್ಕೆ ಯಾರೂ ಮುಂದಾಗಿಲ್ಲ. ಆಸಕ್ತಿಯನ್ನೂ ತೋರಿಸುತ್ತಿಲ್ಲ.
ಛಿದ್ರಗೊಂಡ ಹೋರಾಟ:
ಜಿಲ್ಲೆಯಲ್ಲಿ ಕಾವೇರಿ ಚಳವಳಿಯು ಛಿದ್ರಗೊಂಡಿದೆ. ಜಿ.ಮಾದೇಗೌಡರು ಇರುವ ವರೆಗೂ ಎಲ್ಲ ಸಂಘಟನೆಗಳು ಒಗ್ಗಟ್ಟಿಲ್ಲದಿದ್ದರೂ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದವು. ಆದರೆ ಪ್ರಸ್ತುತ ಎಲ್ಲ ಹೋರಾಟಗಳ ಸಂಘಟಕರು ಛಿದ್ರಗೊಂಡಿದ್ದಾರೆ. ಇದರಿಂದ ಸಂಘಗಳು ಛಿದ್ರಗೊಂಡಿವೆ. ರೈತಸಂಘವು ಮೂರು ಬಣಗಳಾಗಿದ್ದು, ಪ್ರತ್ಯೇಕ ಹೋರಾಟ ಮಾಡುತ್ತಿವೆ. ಮೂಲ ಸಂಘಟನೆ, ರೈತಬಣ ಹಾಗೂ ರೈತಸಂಘ ಎಂಬ ಮೂರು ಬಣಗಳಾಗಿ ಛಿದ್ರಗೊಂಡಿವೆ. ಇದರಿಂದ ಒಗ್ಗಟ್ಟು ಹಾಗೂ ಸಂಘಟನೆ ಇಲ್ಲದಂತಾಗಿದೆ. ಪ್ರತ್ಯೇಕವಾಗಿ ಪ್ರತಿಭಟನೆ ನಡೆಯುತ್ತಿರು ವುದರಿಂದ ಸರ್ಕಾರಕ್ಕೆ ಯಾವುದೇ ಬಿಸಿ ಮುಟ್ಟುತ್ತಿಲ್ಲ. ಇದರಿಂದ ಸರ್ಕಾರವೂ ನಿರ್ಲಕ್ಷ್ಯ ವಹಿಸಿದ್ದು, ನೀರನ್ನು ತಮಿಳುನಾಡಿಗೆ ಸಲೀಸಾಗಿ ಹರಿಸುತ್ತಿದೆ.
ಜೆಡಿಎಸ್ ಕೂಡ ಮೌನ:
ಜಿಲ್ಲೆಯಲ್ಲಿ ಕಾವೇರಿ ನೀರಿನ ವಿಚಾರದಲ್ಲಿ ಪûಾತೀತವಾಗಿ ಹೋರಾಟ ನಡೆಯುತ್ತಿತ್ತು. ಆದರೆ ಇದೀಗ ಆ ಇತಿಹಾಸ ಕಾಣದಂತಾಗಿದೆ. ಇತ್ತೀಚೆಗೆ ಬಿಜೆಪಿಯು ಸಹ ಕಾಟಾಚಾರಕ್ಕೆ ಎಂಬಂತೆ ಪ್ರತಿಭಟನೆ ನಡೆಸಿ ಮೌನವಾಯಿತು. ಇತ್ತ ವಿರೋಧ ಪಕ್ಷವಾಗಿರುವ ಜೆಡಿಎಸ್ ಕೂಡ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದೆ. ಜಿಲ್ಲೆಯಲ್ಲಿ ಪ್ರಬಲವಾಗಿರುವ ಜೆಡಿಎಸ್ ನಾಯಕರು ಮೌನ ವಹಿಸಿದ್ದಾರೆ. ಕಾವೇರಿ ನೀರಿನ ವಿಚಾರದಲ್ಲಿ ಯಾವುದೇ ಸೊಲ್ಲೆತ್ತುತ್ತಿಲ್ಲ. ರಾಜಕೀಯ ಹಿತಾಸಕ್ತಿಗೆ ತೋರುವ ಮನಸ್ಸು ಕಾವೇರಿ ವಿಚಾರದಲ್ಲಿ ತೋರಿಸುತ್ತಿಲ್ಲ. ಸೋಲಿನ ಹತಾಶೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆಗಳು ಜಿಲ್ಲೆಯ ಜನರನ್ನು ಕಾಡುತ್ತಿದೆ.
– ಎಚ್.ಶಿವರಾಜು