Advertisement

ನ್ಯಾಯ ಒದಗಿಸಲು ಎಚ್ಚರಿಕೆಯ ಪ್ರಯತ್ನ: ದಿನೇಶ್‌ ಕಾರ್ತಿಕ್‌

12:42 AM Apr 07, 2022 | Team Udayavani |

ಮುಂಬಯಿ: ಪ್ರತಿಯೊಂದು ಪಂದ್ಯದಲ್ಲಿಯೂ ನ್ಯಾಯ ಒದಗಿಸಲು ನಾನು ಎಚ್ಚರಿಕೆಯ ಪ್ರಯತ್ನ ಮಾಡುತ್ತಿದ್ದೇನೆ. ಕಳೆದ ಕೆಲವು ವರ್ಷಗಳಿಂದ ನಾನು ಉತ್ತಮ ಬ್ಯಾಟಿಂಗ್‌ ನಿರ್ವಹಣೆ ನೀಡುತ್ತಿದ್ದೇನೆ ಎಂದು ಆರ್‌ಸಿಬಿಯ ಆಟಗಾರ ದಿನೇಶ್‌ ಕಾರ್ತಿಕ್‌ ಹೇಳಿದ್ದಾರೆ.

Advertisement

ದಿನೇಶ್‌ ಕಾರ್ತಿಕ್‌ 23 ಎಸೆತಗಳಿಂದ 44 ರನ್‌ ಸಿಡಿಸಿದ್ದರಿಂದ ಆರ್‌ಸಿಬಿ ತಂಡವು ಮಂಗಳವಾರದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಸೋಲಿಸಲು ಯಶಸ್ವಿಯಾಗಿತ್ತು.

37ರ ಹರೆಯದ ದಿನೇಶ್‌ ಕಾರ್ತಿಕ್‌ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಇಷ್ಟರವರೆಗೆ 330 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಅವರ ಬ್ಯಾಟಿಂಗ್‌ ಸಾಮರ್ಥ್ಯದಿಂದಾಗಿ ಅವರಿನ್ನೂ ಮ್ಯಾಚ್‌ ವಿನ್ನರ್‌ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಐಪಿಎಲ್‌ ಋತುವಿನ ವೇಳೆ ದಿನೇಶ್‌ ಬಹು ಬೇಡಿಕೆಯ ಆಟಗಾರ ಆಗಿದ್ದಾರೆ. ಆದರೆ ಅವರು 2019ರ ಏಕದಿನ ವಿಶ್ವಕಪ್‌ ಬಳಿಕ ಭಾರತೀಯ ತಂಡದಲ್ಲಿ ಮಾತ್ರ ಕಾಣಿಸಿಕೊಳ್ಳಲಿಲ್ಲ.

ಇದನ್ನೂ ಓದಿ:ಐಪಿಎಲ್‌ : ಏಕಪಕ್ಷೀಯವಾಗಿ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್

ದಿನೇಶ್‌ ಕಾರ್ತಿಕ್‌ ಕ್ರೀಸ್‌ಗೆ ಆಗಮಿಸಿದಾಗ ತಂಡ ಗೆಲ್ಲಲು ಓವರೊಂದಕ್ಕೆ 12 ರನ್‌ ಗಳಿಸಬೇಕಿತ್ತು. ಶಾಂತವಾಗಿರಿ, ನಿಮ್ಮ ಆಟದ ಶಕ್ತಿಯನ್ನು ತಿಳಿದುಕೊಳ್ಳಿ ಮತ್ತು ಅದರಂತೆ ಆಟವಾಡಿ ಎಂಬುದು ದಿನೇಶ್‌ ಅವರ ಮಂತ್ರವಾಗಿತ್ತು. ಅದರಂತೆ ಆಡಿದ ದಿನೇಶ್‌ ಯಾವುದೇ ಹಂತದಲ್ಲೂ ಒತ್ತಡಕ್ಕೆ ಒಳಗಾಗದೇ ಆರಾಮವಾಗಿ ಆಡಿ ತಂಡಕ್ಕೆ ರೋಮಾಂಚಕ ಗೆಲುವು ಒದಗಿಸಿಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next