Advertisement

ಐಪಿಎಲ್ ಫೈನಲ್: ಯಾವ ತಂಡಕ್ಕೆ ಎಷ್ಟು ಹಣ ಸಿಗಲಿದೆ? ಆರ್ ಸಿಬಿಗೆ ಸಿಗುವ ಮೊತ್ತವೆಷ್ಟು?

04:23 PM May 29, 2022 | Team Udayavani |

ಅಹಮದಾಬಾದ್: ಸುಮಾರು ಎರಡು ತಿಂಗಳ ವರ್ಣರಂಜಿತ ಕೂಟದ ಬಳಿಕ 2022ರ ಸಾಲಿನ ಐಪಿಎಲ್ ಕೂಟ ತನ್ನ ಅಂತಿಮ ಘಟ್ಟ ತಲುಪಿದೆ. ಇಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಸೆಣಸಲಿದೆ.

Advertisement

ವಿಶ್ವದ ಅತ್ಯಂತ ಶ್ರೀಮಂತ ಟಿ 20 ಲೀಗ್ ಐಪಿಎಲ್ ನ ಫೈನಲ್‌ನ ಬಳಿಕ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್, ಎಮರ್ಜಿಂಗ್ ಪ್ಲೇಯರ್ ಮತ್ತು ಫೇರ್ ಪ್ಲೇಯರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಲಾಗುವುದು. ಇದಲ್ಲದೆ, ವಿಜೇತ ಮತ್ತು ರನ್ನರ್ ಅಪ್ ತಂಡಗಳು ದೊಡ್ಡ ನಗದು ಬಹುಮಾನಗಳನ್ನು ಪಡೆಯುತ್ತವೆ.

ವಿಜೇತರು: ವಿಜೇತ ತಂಡವು ಐಪಿಎಲ್ ಚಾಂಪಿಯನ್ ಟ್ರೋಫಿಯೊಂದಿಗೆ ಬಿಸಿಸಿಐನಿಂದ  20 ಕೋಟಿ ರೂ. ನಗದು ಬಹುಮಾನವನ್ನು ಪಡೆಯುತ್ತದೆ.

ರನ್ನರ್ಸ್-ಅಪ್: ಎರಡನೇ ಸ್ಥಾನ ಪಡೆಯುವ ತಂಡವು 13 ಕೋಟಿ ರೂ ಪಡೆಯುತ್ತದೆ. ಕಳೆದ ವರ್ಷ ರನ್ನರ್ಸ್ ಅಪ್ ತಂಡಕ್ಕೆ 12.5 ಕೋಟಿ ರೂ ನೀಡಲಾಗುತ್ತು.

ಮೂರನೇ ಸ್ಥಾನ: ಕ್ವಾಲಿಫೈಯರ್ 2 ಸೋತ ತಂಡಕ್ಕೆ (ಆರ್‌ಸಿಬಿ) ಬಿಸಿಸಿಐ 7 ಕೋಟಿ ರೂ. ನಗದು ಬಹುಮಾನ ನೀಡಲಿದೆ.

Advertisement

ನಾಲ್ಕನೇ ಸ್ಥಾನ: ಎಲಿಮಿನೇಟರ್ ಸೋತ ತಂಡಕ್ಕೆ (ಎಲ್‌ಎಸ್‌ಜಿ) ಬಿಸಿಸಿಐ 6.5 ಕೋಟಿ ರೂ. ನಗದು ಬಹುಮಾನ ನೀಡಲಿದೆ.

ಆರೆಂಜ್ ಕ್ಯಾಪ್: ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಐಪಿಎಲ್ ಆರೆಂಜ್ ಕ್ಯಾಪ್ ಮತ್ತು ₹15 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.

ಪರ್ಪಲ್ ಕ್ಯಾಪ್: ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗೆ ಪರ್ಪಲ್ ಕ್ಯಾಪ್ ಮತ್ತು 15 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ.

ಉದಯೋನ್ಮುಖ ಆಟಗಾರ: ಈ ಪ್ರಶಸ್ತಿ ಪಡೆಯುವ ಆಟಗಾರನಿಗೆ 20 ಲಕ್ಷ ರೂ. ನಗದು ಬಹುಮಾನ ಸಿಗಲಿದೆ.

ಐಪಿಎಲ್ 2022 ರಲ್ಲಿ ಗರಿಷ್ಠ ಸಿಕ್ಸ್ ಪ್ರಶಸ್ತಿ: ವಿಜೇತರು 12 ಲಕ್ಷ ರೂ. ನಗದು ಬಹುಮಾನ ಪಡೆಯುತ್ತಾರೆ

ಸೀಸನ್‌ನ ಗೇಮ್ ಚೇಂಜರ್: ಸೀಸನ್‌ನ ಗೇಮ್ ಚೇಂಜರ್ ವಿಜೇತರು 12 ಲಕ್ಷ ರೂ. ನಗದು ಬಹುಮಾನವನ್ನು ಪಡೆಯುತ್ತಾರೆ.

ಋತುವಿನ ಸೂಪರ್ ಸ್ಟ್ರೈಕರ್: ಐಪಿಎಲ್ 2022 ರ ಋತುವಿನ ಸೂಪರ್ ಸ್ಟ್ರೈಕರ್ ವಿಜೇತರು 15 ಲಕ್ಷ ರೂ. ನಗದು ಬಹುಮಾನವನ್ನು ಪಡೆಯುತ್ತಾರೆ.

ಋತುವಿನ ಅತ್ಯಂತ ಮೌಲ್ಯಯುತ ಆಟಗಾರ: ವಿಜೇತರು 12 ಲಕ್ಷ ರೂ. ಬಹುಮಾನವನ್ನು ಪಡೆಯುತ್ತಾರೆ.

ಫೇರ್ ಪ್ಲೇ ಪ್ರಶಸ್ತಿ: ಋತುವಿನ ಉದ್ದಕ್ಕೂ ಫೇರ್ ಪ್ಲೇನಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದ ತಂಡವು ನಗದು ಬಹುಮಾನವನ್ನು ಸಹ ಪಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next