Advertisement

ಗರ್ಭಿಣಿಯರ ಆಹಾರ ಸೇವನೆಯಲ್ಲಿ ಎಚ್ಚರಿಕೆ ಅಗತ್ಯ

10:47 PM Nov 18, 2019 | mahesh |

ಎಲ್ಲ ಹೆಣ್ಣು ಮಕ್ಕಳ ಬದುಕಿನ ಮಹತ್ತರವಾದ ಘಟ್ಟ ಗರ್ಭಧಾರಣೆ. ಈ ಸಮಯದಲ್ಲಿ ಅವಳು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಅತ್ಯಂತ ಸೂಕ್ಷ್ಮವಾದ ಈ ಅವಧಿಯಲ್ಲಿ ದೇಹದಲ್ಲಿನ ಬದಲಾವಣೆಯೊಂದಿಗೆ ಮಾನಸಿಕವಾಗಿಯೂ ಹಲವು ವ್ಯತ್ಯಾಸಗಳು ಕಂಡುಬರುತ್ತವೆ. ಸದಾ ತಾನು ಜನ್ಮ ನೀಡುವ ಮಗುವಿನ ಕುರಿತಾಗಿ ಜಪಿಸುವ ಅವಳು ತನ್ನ ಕಂದಮ್ಮನ ಬಗ್ಗೆ ಸಾವಿರಾರು ಆಸೆ-ಕನಸುಗಳನ್ನು ಇಟ್ಟುಕೊಂಡಿರುತ್ತಾಳೆ.

Advertisement

ಆ ಕನಸನ್ನು ಹೆಮ್ಮರವಾಗಿ ಬೆಳೆಸಬೇಕಾದರೆ ದೇಹದ ಪೋಷಣೆಯೊಂದಿಗೆ ಈ ಸಂದರ್ಭದಲ್ಲಿ ಆಕೆ ಸೇವಿಸುವ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ.

ಅಲೋವೆರಾ : ಹೆಣ್ಮಕ್ಕಳ ತ್ವಚೆಯನ್ನು ಹೆಚ್ಚಿಸುವ ಶಕ್ತಿ ಇರುವ ಈ ಆಹಾರ ಪದಾರ್ಥ ಗರ್ಭಿಣಿಯರ ಆಹಾರ ಕ್ರಮಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ಅಲೋವೆರಾ ಮಿಶ್ರೀತ ಪಾನೀಯ, ಆಹಾರ ಸೇವನೆ ಒಳಿತಲ್ಲ. ಇದರ ಸೇವನೆಯಿಂದ ರಕ್ತಸ್ರಾವ ಉಂಟಾಗುವ ಅವಕಾಶ ಇದ್ದು, ಗರ್ಭಪಾತದಂತಹ ಅಪಾಯಕ್ಕೂ ಕಾರಣವಾಗಬಹುದು.

ಪಪ್ಪಾಯ : ತಾಯ್ತನವನ್ನು ಎದುರು ನೋಡುತ್ತಿರುವ ಮಹಿಳೆಯರು ಪಪ್ಪಾಯವನ್ನು ತಿನ್ನುವುದು ಒಳ್ಳೆಯದಲ್ಲ. ಪಪ್ಪಾಯ ಕಾಯಿಯ ಪದಾರ್ಥಗಳನ್ನು ತಿಂದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಣ್ಣಿನಲ್ಲಿರುವ ಕಿಣ್ವ ಕಣಗಳು ಗರ್ಭಾಶಯವನ್ನು ಕುಗ್ಗಿಸುವುದಲ್ಲದೆ, ಗರ್ಭಪಾತವನ್ನು ಉಂಟು ಮಾಡಬಹುದು.

ಅನಾನಸ್‌: ಗರ್ಭಿಣಿಯರ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಫ‌ಲಗಳಲ್ಲಿ ಅನಾನಸ್‌ ಕೂಡ ಒಂದಾಗಿದ್ದು, ಇದರಲ್ಲಿರುವ ಬ್ರೊಮಲೆನ್‌ ಎಂಬ ಅಂಶ ಗರ್ಭಾಶಯದ ಸ್ನಾಯುವಿನ ಮೇಲೆ ಪರಿಣಾಮ ಬೀರುತ್ತದೆ.

Advertisement

ಸೋಯಾ ಸಾಸ್‌: ಬಸುರಿ ಮಹಿಳೆಯರು ತೆಗೆದುಕೊಳ್ಳುವ ಆಹಾರದಲ್ಲಿ ಸೋಯಾ ಸಾಸ್‌ ಅಂತಹ ಪದಾರ್ಥಗಳನ್ನು ಬಳಸದಿದ್ದರೆ ಒಳಿತು. ಇದರ ಸೇವೆನೆಯಿಂದ ಗರ್ಭಿಣಿಯರ ರಕ್ತದೊತ್ತಡ ಹೆಚ್ಚಾಗುವುದರೊಂದಿಗೆ ಗರ್ಭಧಾರಣೆ ಮೇಲೆಯೂ ಪರಿಣಾಮ ಬೀರುತ್ತದೆ.

ಹಸಿ ಮೊಟ್ಟೆ: ಗರ್ಭಿಣಿ ಮಹಿಳೆಯರು ಹಸಿ ಮೊಟ್ಟೆ ಮತ್ತು ಮೊಟ್ಟೆಯ ಹಳದಿಯನ್ನು ಸೇವಿಸುವುದರಿಂದ ಗರ್ಭಪಾತವಾಗುವ ಸಾಧ್ಯತೆ ಇದ್ದು, ಮೆಯೊನಿಸ್‌ಗಳ ತಯಾರಿಕೆಯಲ್ಲಿಯೂ ಮೊಟ್ಟೆಯನ್ನು ಬಳಸುವುದರಿಂದ ಇದನ್ನು ಸೇವಿಸುವುದು ಕೂಡ ಅಪಾಯಕಾರಿ.

ಗರ್ಭಾವಸ್ಥೆಯ ಸಮಯದಲ್ಲಿ ಸೇವಿಸಲು ಅನರ್ಹವಾದ ಕೆಲವೊಂದು ಆಹಾರಗಳನ್ನು ಇಲ್ಲಿ ತಿಳಿಸಿದ್ದು, ಈ ಆಹಾರಗಳಿಂದ ದೂರವಿರುವುದು ಉತ್ತಮ.

- ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next