ಮಂಡ್ಯ: ಕೋವಿಡ್ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಮೂಲಕ ಕೋವಿಡ್ ವಾರಿಯರ್ಸ್‌ಗಳನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದುಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್ .ಪಿ.ಮಂಚೇಗೌಡ ತಿಳಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಒಕ್ಕಲಿಗರ ಸೇವಾ ಟ್ರಸ್ಟ್ ನಿಂದ ನಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕೋವಿಡ್ ವಾರಿಯರ್ಸ್‌ಗಳಿಗೆ ಗೌರವ, ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಂ.ಜೆ.ಅಭಿಷೇಕ್‌ಗೌಡಗೆ ಅಭಿನಂದನೆ, ಟಿ.ಶಿವಣ್ಣ ಅವರ 2ನೇ ವರ್ಷದ ಪುಣ್ಯಸ್ಮರಣೆ ಹಾಗೂ ಟ್ರಸ್ಟಿನ 6ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊರೊನಾ ಎಲ್ಲೆಡೆ ಹಬ್ಬಿದ್ದು, ಈ ರೋಗದ ಮುನ್ನೆಚರಿಕೆಗಳನ್ನು ವಹಿಸುವುದು ಅಗತ್ಯ ಎಂದರು.
ವಿದ್ಯೆಯಿಂದ ಉತ್ತಮ ಸ್ಥಾನ: ಒಕ್ಕಲಿಗರ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಡಾ.ಟಿ.ಟಿ.ಅನುಸೂಯ ಮಾತನಾಡಿ, ಬಸವಣ್ಣನವರನಾಣ್ಣುಡಿಯಂತೆವಿದ್ಯೆಯಿಂದ ಉತ್ತಮ ಸ್ಥಾನ ದೊರೆತಿದೆ. ಕೋವಿಡ್-19ರ ವಿರುದ್ಧಹೋರಾಡುವ ಅನಿವಾರ್ಯ ಹಾಗೂ ಅವಶ್ಯವಿದೆ ಎಂದರು.
ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕೋವಿಡ್ ವಾರಿಯರ್ಸ್ ಅಧಿಕಾರಿಗಳಿಗೆ ಹಾಗೂ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಂ.ಜೆ.ಅಭಿಷೇಕ್‌ಗೌಡ ಅವರನ್ನು ಅಭಿನಂದಿಸಲಾಯಿತು.
ಆದಿಚುಂಚನಗಿರಿ ಶಾಖಾ ಮಠ ಅಂಧರ ಶಾಲೆಯ ಶ್ರೀಅನ್ನದಾನೇಶ್ವರ ಸ್ವಾಮೀಜಿ, ಒಕ್ಕಲಿಗರ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಾಗಣ್ಣ ಬಾಣಸವಾಡಿ,ಪ್ರೊ.ಶಿವಶಂಕರ್,ಡಾ.ಎ.ಎಸ್ .ನಾಗೇಶ್, ಡಾ.ಮಂಜೇಗೌಡ, ಹೊನ್ನರಾಜು, ದೇವರಾಜೇಗೌಡ, ಎಲ್.ಕೃಷ್ಣ, ಸಿ.ತಮ್ಮಯ್ಯ,ಕೆ.ಪಿ.ಬಾಬು, ಯತೀಶ್‌ಬಾಬು, ಜಯರಾಂ, ಬಸವೇಗೌಡ, ಕುಮಾರ್ ಉಪಸ್ಥಿತರಿದ್ದರು.