Advertisement

Video: ತಪಾಸಣೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗೆ ಡಿಕ್ಕಿ ಹೊಡೆದು 400 ಮೀ. ಎಳೆದೊಯ್ದ ಕಾರು

10:45 AM Nov 07, 2023 | sudhir |

ಗುಜರಾತ್ :ಗುಜರಾತ್‌ನ ಸೂರತ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗೆ ಕಾರೊಂದು ಡಿಕ್ಕಿ ಹೊಡೆದು ಅಧಿಕಾರಿಯನ್ನು ಸುಮಾರು 300 ರಿಂದ 400 ಮೀಟರ್ ದೂರ ಎಳೆದೊಯ್ದ ಆಘಾತಕಾರಿ ಘಟನೆ ನಡೆದಿದೆ.

Advertisement

ಕಟರ್ಗಾಮ್ ಪ್ರದೇಶದ ಅಲ್ಕಾಪುರಿ ಮೇಲ್ಸೇತುವೆಯ ಕೆಳಗೆ ಈ ಘಟನೆ ನಡೆದಿದ್ದು, ಅಲ್ಲಿನ ಸಿಸಿಟಿವಿಯಲ್ಲಿ ಘಟನೆಯ ದೃಶ್ಯಾವಳಿ ಸೆರೆಯಾಗಿದೆ.

ದೃಶ್ಯಾವಳಿಯಲ್ಲಿ, ಬಿಳಿ ಬಣ್ಣದ ಸ್ಕೊಡಾ ಕಾರಿನ ಬಾನೆಟ್ ಮೇಲೆ ಪೊಲೀಸ್ ಅಧಿಕಾರಿ ಇದ್ದಿರುವುದು ಕಾಣಬಹುದು ಅಲ್ಲದೆ ಕಾರು ಚಾಲಕ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿ ಎದುರಿಗೆ ಇರುವ ಸ್ಪೀಡ್ ಬ್ರೇಕರ್ ಮೇಲೆ ವೇಗವಾಗಿ ಸಂಚರಿಸಿದಾಗ ಪೊಲೀಸ್ ಅಧಿಕಾರಿ ಕಾರಿನಿಂದ ಕೆಳಗೆ ಬಿದ್ದಿದ್ದಾನೆ ಆದರೆ ಕಾರು ಚಾಲಕ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದ.

ಕೊಲೆ ಯತ್ನಕ್ಕಾಗಿ ಕಟರ್ಗಾಂ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಘಟನೆ ಸಂಬಂಧ ಚಾಲಕ ಸೇರಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರು ಡಿಕ್ಕಿ ಹೊಡೆದು ಗಾಯಗೊಂಡಿದ್ದ ಪೊಲೀಸ್ ಅಧಿಕಾರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

Advertisement

ಘಟನೆ ಕುರಿತು ಮಾಹಿತಿ ನೀಡಿದ ಸೂರತ್ ಸಹಾಯಕ ಪೊಲೀಸ್ ಕಮಿಷನರ್ ಝಾಲಾ, ಕಟರ್ಗಾಮ್ ಪೊಲೀಸ್ ಠಾಣೆಯ ತಂಡವು ಅಲ್ಕಾಪುರಿ ಸೇತುವೆಯ ಕೆಳಗೆ ವಾಹನ ತಪಾಸಣೆ ನಡೆಸುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದ ಬಿಳಿ ಸ್ಕೋಡಾ ಕಾರು ಸ್ಥಳಕ್ಕೆ ಬಂದಿದೆ ಈ ವೇಳೆ ಕಾರನ್ನು ತಪಾಸಣೆ ನಡೆಸಲು ಮುಂದಾದಾಗ ಕಾರು ಚಾಲಕ ಗೌತಮ್ ಕಾರು ನಿಲ್ಲಿಸದೆ ಮುಂದೆ ಸಂಚರಿಸಿದ್ದಾನೆ ಈ ವೇಳೆ ಕಾರಿಗೆ ಅಡ್ಡ ಬಂದ ಪೊಲೀಸ್ ಅಧಿಕಾರಿಗೆ ಕಾರು ಡಿಕ್ಕಿ ಹೊಡೆಸಿದ್ದಾನೆ ಆ ವೇಳೆ ಪೊಲೀಸ್ ಅಧಿಕಾರಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ ಕಾರು ಚಾಲಕ ಕಾರು ನಿಲ್ಲಿಸದೆ ಸಂಚರಿಸಿದ್ದಾನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Arrested: ಲೋಕಾ ಎಡಿಜಿಪಿ ಹೆಸರಿನಲ್ಲಿ ಹಣಕೆ ಬೇಡಿಕೆ ಇಟ್ಟಿದವನ ಸೆರೆ

Advertisement

Udayavani is now on Telegram. Click here to join our channel and stay updated with the latest news.

Next