Advertisement

ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯದ ಆರೋಪ.. ರಾಜ್ಯಪಾಲರಿಂದ ರಾಜಭವನದ CCTV ದೃಶ್ಯ ಬಹಿರಂಗ

04:09 PM May 09, 2024 | Team Udayavani |

ಪಶ್ಚಿಮ ಬಂಗಾಳ: ರಾಜಭವನದ ಮಹಿಳಾ ಸಿಬಂದಿಯೋರ್ವರು ಪಶ್ಚಿಮ ಬಂಗಾಳದ ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಇಂದು ಸುಮಾರು 100 ಜನರಿಗೆ ಮೇ 2ರ ಸಿಸಿಟಿವಿ ದೃಶ್ಯಾವಳಿಗಳನ್ನು ಬಹಿರಂಗಪಡಿಸಿದ್ದಾರೆ.

Advertisement

ಮಹಿಳೆಯೊಬ್ಬರಿಗೆ ರಾಜ್ಯಪಾಲರು ಕಿರುಕುಳ ನೀಡಿದ್ದಾರೆ ಎಂಬ ವಿಚಾರವಾಗಿ ರಾಜಕೀಯ ಗದ್ದಲಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ ರಾಜ್ಯಪಾಲರು ಬುಧವಾರ ಮಮತಾ ಬ್ಯಾನರ್ಜಿ ಮತ್ತು ಆಕೆಯ ಪೊಲೀಸರನ್ನು ಹೊರತುಪಡಿಸಿ ಸಾಮಾನ್ಯ ಜನರಿಗೆ ಅಂದು ನಡೆದ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸುವುದಾಗಿ ಹೇಳಿದ್ದರು ಅದರಂತೆ ಇಂದು ಸುಮಾರು 100 ಜನರಿಗೆ ಮೇ 2 ರ ರಾಜಭವನದ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಿದರು.

ತನ್ನ ಮೇಲೆ ರಾಜ್ಯಪಾಲರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ರಾಜಭವನದ ಮಹಿಳಾ ಉದ್ಯೋಗಿ ಕಳೆದ ಶುಕ್ರವಾರ ಕೋಲ್ಕತ್ತಾ ಪೊಲೀಸರಿಗೆ ಲಿಖಿತ ದೂರಿನಲ್ಲಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಮಾಡಿದ್ದರು, ಆದರೆ ಮಹಿಳೆಯ ಆರೋಪವನ್ನು ರಾಜ್ಯಪಾಲರು ಖಡಾಖಂಡಿತ ಅಲ್ಲಗಳೆದಿದ್ದರು ಜೊತೆಗೆ ಇದೊಂದು ರಾಜಕೀಯ ಷಡ್ಯಂತ್ರ ನನ್ನ ಹೆಸರು ಹಾಳುಮಾಡಲು ಉದ್ದೇಶ ಪೂರ್ವಕವಾಗಿ ಮಹಿಳೆಯನ್ನು ಮುಂದಿಟ್ಟು ಕೃತ್ಯ ಎಸೆಗಲಾಗುತ್ತಿದೆ ದೇವರು ಎಲ್ಲವನ್ನು ನೋಡುತ್ತಿದ್ದಾರೆ ಅವರಿಗೆ ಒಳ್ಳೆಯದನ್ನು ದೇವರು ಮಾಡಲಿ ಎಂದು ಹೇಳಿದ್ದರು.

ಇದನ್ನೂ ಓದಿ: Sandeshkhali; ಖಾಲಿ ಪತ್ರಕ್ಕೆ ಸಹಿ ಹಾಕಿಸಿದ್ದರು…: ಅತ್ಯಾಚಾರ ದೂರು ಹಿಂಪಡೆದ 2 ಮಹಿಳೆಯರು

Advertisement

Udayavani is now on Telegram. Click here to join our channel and stay updated with the latest news.

Next