Advertisement

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

03:09 PM May 16, 2024 | Team Udayavani |

ರಾಜಸ್ಥಾನ: ಮದುವೆ ಸಮಾರಂಭದಲ್ಲಿ ಭಾಗಿಯಾಗುವ ಗೋಜಿನಲ್ಲಿ ಕುಟುಂಬವೊಂದು ತಮ್ಮ ಮೂರೂ ವರ್ಷದ ಮಗುವನ್ನೇ ಮರೆತು ಕಾರಿನೊಳಗೆ ಲಾಕ್ ಮಾಡಿದ ಪರಿಣಾಮ ಮಗು ಉಸಿರುಗಟ್ಟಿ ಮೃತಪಟ್ಟ ಆಘಾತಕಾರಿ ಘಟನೆಯೊಂದು ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

Advertisement

ಬುಧವಾರ ಸಂಜೆ ಈ ಘಟನೆ ನಡೆದಿದ್ದು ನತದೃಷ್ಟ ಮಗುವನ್ನು ಮೂರೂ ವರ್ಷದ ಗೋರ್ವಿಕಾ ನಗರ ಎಂದು ಗುರುತಿಸಲಾಗಿದೆ.

ಘಟನೆ ವಿವರ:
ಮಾಹಿತಿಯ ಪ್ರಕಾರ ಬುಧವಾರ ಸಂಜೆ ಬಾಲಕಿಯ ತಂದೆ ಪ್ರದೀಪ್ ನಗರ್ ತನ್ನ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ತೆರಳಿದ್ದಾರೆ. ಕಾರು ನಿಲ್ಲಿಸಿದ ವೇಳೆ ತಾಯಿ ಮತ್ತು ಹಿರಿಯ ಮಗಳು ಕಾರಿನಿಂದ ಇಳಿದಿದ್ದಾರೆ ಆದರೆ ಕಾರಿನ ಸೀಟಿನ ಮೇಲಿದ್ದ ಮೂರೂ ವರ್ಷದ ಮಗು ಮಾತ್ರ ಕಾರಿನೊಳಗೆಯೇ ಇತ್ತು ಆದರೆ ತಾಯಿಗೆ ಇದರ ಅರಿವೇ ಇರಲಿಲ್ಲ ಮದುವೆ ಸಮಾರಂಭಕ್ಕೆ ಬಂದಿದ್ದ ಅವರ ಇತರ ಸಂಬಂಧಿಕರು ಕಾರಿನ ಬಳಿ ಮಾತನಾಡಲು ಬಂದಿದ್ದಾರೆ ಈ ಸಮಯದಲ್ಲಿ ಕಾರಿನೊಳಗೆ ಮಗು ಇರುವುದು ಮರೆತು ಹೋಗಿದೆ ಬಳಿಕ ಕಾರಿನಿಂದ ಇಳಿದ ಪತಿ ಕಾರನ್ನು ಲಾಕ್ ಮಾಡಿ ಒಟ್ಟಿಗೆ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಆದರೆ ಅದೆಷ್ಟೋ ಗಂಟೆಗಳ ಬಳಿಕ ಕುಟುಂಬ ಸದಸ್ಯರು ಪರಸ್ಪರ ಮಾತನಾಡುವ ವೇಳೆ ಮಗುವಿನ ಬಗ್ಗೆ ಮಾತನಾಡಿದ್ದಾರೆ ಆಗ ಸಣ್ಣ ಮಗು ನಮ್ಮ ಬಳಿ ಇಲ್ಲ ಕಾರಿನೊಳಗೆ ಬಾಕಿಯಾಗಿದೆ ಎಂದು ಬಳಿಕ ಓಡೋಡಿ ಬಂದ ಪೋಷಕರು ಕಾರಿನ ಬಾಗಿಲು ತೆರೆದು ನೋಡಿದಾಗ ಮಗು ಅಸ್ವಸ್ಥ ಸ್ಥಿತಿಯಲ್ಲಿತ್ತು ಕೂಡಲೇ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದ ವೇಳೆ ಪರಿಶೀಲಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಸದ್ಯ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Bidar; ಯುವಕರ‌ ಬದುಕು‌ ಹಾಳು ಮಾಡಿದ‌ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next