Advertisement
ಕೋವಿಡ್ ಕಾರಣ ಎರಡು ವರ್ಷಗಳಿಂದ ದನಗಳ ಜಾತ್ರೆ ,ಉತ್ಸವ ಗಳಿಗೆ ಸರ್ಕಾರ ಬ್ರೇಕ್ ಹಾಕಿ ಬಿಗಿನಿಯಮ ಜಾರಿ ಮಾಡಿತ್ತು. ಹಾಗಾಗಿ ಜಾತ್ರೆಉತ್ಸವಗಳು ನಡೆಯಲಿಲ್ಲ. ಆದರೆ ಈ ಬಾರಿ ಕೊರೊನಾ ಪ್ರಕರಣ ಗಣನೀಯವಾಗಿ ಇಳಿಕೆ ಹಿನ್ನೆಲೆ ನಿರ್ಬಂಧ ಸಡಿಲಗೊಳಿಸಿದೆ. ಆ ಕಾರಣ ಸುಗ್ಗನಹಳ್ಳಿ ಜಾತ್ರೆ ಜೋರಾಗಿ ನಡೆಯುತ್ತಿದೆ.
Related Articles
Advertisement
ವಿವಿಧ ಬಗೆಯ ತಳಿಯ ರಾಸುಗಳು: ರಾಸುಗಳ ಜಾತ್ರೆಗೆ ಈ ಬಾರಿ ಹಳ್ಳಿ ಕಾರ್, ಅಮೃತಮಹಲ್,ನಾಟಿ ಹಸು, ಹೋರಿ ಸೇರಿದಂತೆ, ವಿವಿಧ ತಳಿಗಳರಾಸುಗಳು ರಾಜ್ಯದ ಮೂಲೆ ಮೂಲೆಗಳಿಂದ ಬಂದುಸೇರಿದ್ದು,ಇಷ್ಟು ತಳಿಗಳನ್ನು ಒಂದೇ ಕಡೆ ನೋಡುವಭಾಗ್ಯ ಸುಗ್ಗನಹಳ್ಳಿ ದನಗಳ ಜಾತೆಯಲ್ಲಿ ದೊರೆತ್ತಿದೆ.
ಎತ್ತುಗಳಿಗೆ ಸಿಂಗಾರ: ಇಲ್ಲಿನ ಎತ್ತುಗಳ ಮಾರಾಟ ಮಾಡುವುದು ಕೂಡ ನವೀನತೆ ರೂಢಿಸಿಕೊಂಡಿದ್ದಾರೆ. ಎತ್ತಿನ ಕಣ್ಣಿಗೆ ಸುತ್ತ ಕಣ್ಣುಕಪ್ಪು, ಹಣೆಗೆ ಕೆಂಪುಕುಂಕುಮದ ಸ್ಟಿಕರ್, ಕೊಡುಗಳಿಗೆ ಬಗೆಬಗೆಯ ಟೇಪು ಕಟ್ಟಿದ್ದಾರೆ. ಕೈಬೆರಳುಗಳಿಗೆ ನಾವುಹಾಕುವ ಬಣ್ಣದಂತೆ ಎತ್ತಿನ ಕೋಡುಗಳನ್ನುನುಣುಪಾಗಿ ಎರೆಸಿ ಅದಕ್ಕೆ ಬಣ್ಣ ಬಳಿದಿದ್ದಾರೆ. ಬಾಲಕ್ಕೆ ಕುಚ್ಚು ಕಟ್ಟುವುದು, ಹೆಣ್ಣು ಮಕ್ಕಳ ನೀಲ ಜಡೆ ಬಾಚು ವಂತೆ ಬಾಚಿ ಸಿಕ್ಕು ಬಿಡಿಸಿ ಕೂದಲನ್ನ ನವೀರಾಗಿಸುವರು. ವಿಶೇಷವೆಂದರೆ ಮನುಷ್ಯರಲ್ಲಿ ಹೆಣ್ಣು ಮಕ್ಕಳು ಮಾಡಿಕೊಳ್ಳುವ ಅಲಂಕಾರವನ್ನು ರಾಸುಗಳ ಜಾತ್ರೆಯಲ್ಲಿ ಎತ್ತುಗಳಿಗೆ ಮಾಡುತ್ತಾರೆ. ಮನೆಗೆ ಎತ್ತು ಬಂದರೆ ಲಕ್ಷ್ಮೀ ಎಂದು ಕೆರೆಯುತ್ತಾರೆ. ಇದನ್ನೆಲ್ಲಾ ಪ್ರತ್ಯಕ್ಷವಾಗಿ ನೋಡಿಯೇ ಅನುಭವಿಸಬೇಕು.
ನಾನ ಕಸುಬುದಾರರಿಗೆ ದಾರಿ: ಎತ್ತುಗಳ ಜಾತ್ರೆಯಾದರೂ ಇಲ್ಲಿ ಹೋಟೆಲ್ ಉದ್ಯಮದವರು, ತಂಪು ಪಾನಿಯ, ಎಳನೀರು, ಕಡಲೆಪುರಿ, ಹಣ್ಣಿನಂಗಡಿ, ಎತ್ತಿನಕೊಡು ಎರೆಯುವವರು, ಬಣ್ಣ ಹಚ್ಚುವವರು, ಕಬ್ಬಿನಂಗಡಿ, ಚಪ್ಪಲಿ ಹೊಲೆಯುವ
ವರು, ಹೀಗೆ ಎಲ್ಲರಿಗೂ ದುಡಿಮೆಯ ದಾರಿಯನ್ನು ಜಾತ್ರೆ ಎನ್ನುವ ಸಂಸ್ಕೃತಿ ದಾರಿ ಮಾಡಿಕೊಡುತ್ತದೆ. ಹರಾಜು ಪ್ರಕ್ರಿಯೆ ಎಷ್ಟು ಸರಿ? ದನಗಳ ವ್ಯಾಪಾರವನ್ನು ಕೂಡ ನಮ್ಮ ಜನಪದದಲ್ಲಿ ಹಿಂದಿನಿಂದಲೂ ವಿಶಿಷ್ಟವಾಗಿ ಆಚರಿಸಿದ್ದಾರೆ. ದನಗಳ ವ್ಯಾಪಾರದಲ್ಲಿ ಅವುಗಳ ಬೆಲೆಯನ್ನು ಬಟ್ಟೆಗಳ ಮರೆಯಲ್ಲಿ ಬೆರಳುಗಳ ಸ್ಪರ್ಶ ಮಾಡುವ ಮೂಲಕ ನಿರ್ಧರಿಸುತ್ತಾರೆ. ಎತ್ತುಗಳ ಬೆಲೆ ಹತ್ತು ಸಾವಿರ ಎಂದರೆ ಒಂದು ಬೆರಳು, ಹದಿನೈದು ಸಾವಿರ ಎಂದರೆ ಒಂದೂವರೆ ಬೆರಳುಗಳ್ಳನ್ನು ಮುಟ್ಟುವುದರ ಮೂಲಕ ಬೆಲೆ ನಿರ್ಧರಿಸುತ್ತಾರೆ. ಸುತ್ತಲೂ ನೋಡುವ ಜನರಿಗೆ ಅವರ ಮುಖಚರ್ಯೆಯಿಂದಷ್ಟೇ ವ್ಯಾಪಾರ ಕುದುರುತ್ತಿದೆ ಎಂದು ಗೊತ್ತಾಗುತ್ತದೆ. ನಾವು ಸಾಕಿ ಬೆಳೆಸಿದ ದನಕರುಗಳನ್ನು ಹೀಗೆ ಸಾರ್ವತ್ರಿಕವಾಗಿ ಹರಾಜಿನ ರೀತಿಯಲ್ಲಿ ಮಾರಾಟ ಮಾಡಬಾರದು. ನಾವು ಅವುಗಳಿಗೆ ಮಾಡುವ ಅಪಚಾರ. ನಮ್ಮಸಂಸ್ಕೃತಿಯಲ್ಲಿ ದನಗಳನ್ನು ಲಕ್ಷ್ಮೀ ಎಂದು ಆರಾಧಿಸಲಾಗುತ್ತದೆ ಎಂದು ರೈತ ಗಂಗರಾಜು ಹೇಳುತ್ತಾರೆ.
ಟ್ರ್ಯಾಕ್ಟರ್ ಬೆಲೆ ಮೀರಿದ ರಾಸು :
ಜಾತ್ರೆಯಲ್ಲಿ ಸುಮಾರು 3-4 ಸಾವಿರಕ್ಕೂ ಹೆಚ್ಚು ರಾಸುಗಳು ಸೇರಿದ್ದು, 20 ಸಾವಿರದಿಂದ 10 ಲಕ್ಷದ ವರೆಗೆ ಮಾರಾಟವಾಗುತ್ತಿದೆ. ಈಗಾಗಲೇ ದನ ಗಳ ಜಾತ್ರೆಯಲ್ಲಿ ರಾಸುಗಳ ಮಾರಾಟ ಮತ್ತು ಖರೀದಿ ಬಲು ಜೋರಾಗಿ ನಡೆಯುತ್ತಿದೆ. ರೈತರು ತಮಗೆ ಗಿಟ್ಟಿದ ದರದಲ್ಲಿ ರಾಸುಗಳನ್ನು ಖರೀದಿಸಿ, ತಮ್ಮ ಊರುಗಳಿಗೆ ಟೆಂಪೋ ಸೇರಿದಂತೆ ಅನೇಕ ಸರಕು ವಾಹನಗಳಲ್ಲಿ ಕೊಂಡೊಯ್ಯುತ್ತಿರುವುದು ಕಂಡು ಬರುತ್ತಿದೆ.
-ಕೆ.ಎಸ್.ಮಂಜುನಾಥ್, ಕುದೂರು