Advertisement

ನಂದಿಯಲ್ಲಿ ಕಳೆಗಟ್ಟುತ್ತಿರುವ ದನಗಳ ಜಾತ್ರೆ

02:14 PM Feb 28, 2022 | Team Udayavani |

ಚಿಕ್ಕಬಳ್ಳಾಪುರ: ಪ್ರಸಿದ್ಧ ನಂದಿ ಜಾತ್ರಾಮಹೋತ್ಸವದ ಪ್ರಯುಕ್ತ ಮಾ.2ರಂದುರಾಸುಗಳ ಮೆರವಣಿಗೆ, 3ರಂದು ಜಾತ್ರೆನಡೆಯಲಿದ್ದು, ಈಗಾಗಲೇ ರಾಜ್ಯ ವಿವಿಧೆಡೆಗಳಿಂದ ರೈತರು ರಾಸುಗಳನ್ನು ಕರೆ ತಂದಿದ್ದಾರೆ.

Advertisement

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗ್ರಾಮದಲ್ಲಿ ಮಂಗಳವಾರಭೋಗನಂದೀಶ್ವರ ಸ್ವಾಮಿ ಜಾತ್ರಾಮಹೋತ್ಸವವನ್ನು ಶಿವೋತ್ಸವ ಹೆಸರಿನಲ್ಲಿವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.ಭೋಗನಂದೀಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಬುಧವಾರಹಮ್ಮಿಕೊಳ್ಳಲಾಗಿರುವ ಸ್ವಾಮಿಯರಥೋತ್ಸವದಂದು ರಾಸುಗಳ ಮೆರವಣಿಗೆಹಾಗೂ ಮಾರನೇಯ ದಿನ ಭಾರಿರಾಸುಗಳ ಜಾತ್ರೆ ನಡೆಸಲಾಗುತ್ತದೆ.

ಈ ಜಾತ್ರೆಗೆ ಚಿಕ್ಕಬಳ್ಳಾಪುರ, ಸುತ್ತಮುತ್ತಲಿನ ಜಿಲ್ಲೆ, ಹೊರ ರಾಜ್ಯಗಳಿಂದಉತ್ತಮ ಹೋರಿಗಳು, ಎತ್ತುಗಳುಭಾಗವಹಿಸಲಿದ್ದು, ಅತ್ಯುತ್ತಮ ರಾಸುಗಳಿಗೆಅಕರ್ಷಕ ಬಹುಮಾನ ನೀಡಲಾಗುತ್ತದೆ.ರೈತರು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಚಿಕ್ಕಬಳ್ಳಾಪುರ ಜಿಪಂ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಕರಪತ್ರ, ಭಿತ್ತಿಪತ್ರದಮೂಲಕ ಜಿಲ್ಲಾದ್ಯಂತ ಹಳ್ಳಿಗಳಲ್ಲಿ ಈಗಾಗಲೇ ಮನವಿ ಮಾಡಿದೆ. ಪ್ರಸ್ತುತವೂಕರಪತ್ರಗಳ ಹಂಚಿಕೆ ಕಾರ್ಯ ಮುಂದುವರಿಸಿದೆ.

ಚಿಕ್ಕಬಳ್ಳಾಪುರ ಪಶುಪಾಲನಾ ಮತ್ತುಪಶುವೈದ್ಯ ಸೇವಾ ಇಲಾಖೆ ಮುನ್ನೆಚ್ಚರಿಕೆಯಾಗಿ ರಾಸುಗಳ ಚಿಕಿತ್ಸೆಗಾಗಿ ನಂದಿಯಲ್ಲಿ ತಾತ್ಕಾಲಿಕ ಪಶು ಚಿಕಿತ್ಸಾಲಯ ತೆರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next