Advertisement

5ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಹಲವು ಸೌಲಭ್ಯ

11:13 PM Jul 27, 2021 | Team Udayavani |

ಕೊಟ್ಟಾಯಂ: ಕೇರಳದಲ್ಲಿ ಐದು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕ್ರೈಸ್ತ ಕುಟುಂಬ ಗಳಿಗಾಗಿ ಕ್ಯಾಥೊಲಿಕ್‌ ಚರ್ಚ್‌ವೊಂದು ವಿಶೇಷ ಕ್ಷೇಮಾಭಿವೃದ್ಧಿ ಯೋಜನೆಯನ್ನು ಘೋಷಿಸಿದೆ. ತಮ್ಮ ಸಮುದಾಯದ ಜನಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

2000 ಇಸವಿಯ ಅನಂತರ ಮದುವೆಯಾಗಿರುವ ಹಾಗೂ 5 ಅಥವಾ ಐದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕ್ರೈಸ್ತ ದಂಪತಿಗೆ ಮಾಸಿಕ 1,500 ರೂ.ಗಳ ಮಾಸಿಕ ಸಹಾಯ ಧನ ನೀಡುವುದಾಗಿ  ಕೊಟ್ಟಾಯಂನ ಸಿರೊ-ಮಲಬಾರ್‌ ಚರ್ಚ್‌ನ ಪಾಲಾ ಡಯೊಸೀಸ್‌ ಅಧೀನದಲ್ಲಿರುವ ಫ್ಯಾಮಿಲಿ ಅಪೋಸ್ಟೋಲೇಟ್‌ ಸಮಿತಿ ಪ್ರಕಟಿಸಿದೆ.

ಕಳೆದ ಕೆಲವು ವರ್ಷಗಳಿಂದ ಕೇರಳದಲ್ಲಿ ಕ್ರೈಸ್ತ ಸಮುದಾಯದ ಜನಸಂಖ್ಯೆ ಇಳಿಮುಖವಾಗುತ್ತಿದ್ದು, ಅದನ್ನು ಹೆಚ್ಚಿಸುವುದು ಕೂಡ ನಮ್ಮ ಉದ್ದೇಶ. ಅದಕ್ಕಿಂತಲೂ ಮುಖ್ಯವಾಗಿ ಕೊರೊನಾ ದಿಂದ ಸಂಕಷ್ಟಕ್ಕೆ ಸಿಲುಕಿರುವ ಕ್ರೈಸ್ತ ಕುಟುಂಬಗಳಿಗೆ ನೆರವು ನೀಡಲು ಈ ಯೋಜನೆ ಜಾರಿಗೊಳಿಸ ಲಾಗಿದೆ ಎಂದು ಚರ್ಚ್‌ ತಿಳಿಸಿದೆ. ಆಗಸ್ಟ್‌ನಿಂದ ಇದು ಅನುಷ್ಠಾನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next