Advertisement
ಚೇತೋಹಾರಿ ಕಂಬಳಿ ಹುಳದ ಕಥೆಕಂಬಳಿ ಹುಳ ಚಿಟ್ಟೆಯಾಗಿ ಬದಲಾಗುತ್ತದೆ ಎನ್ನಲಾಗುವ ಕಥೆ ಎಂತಹವರಿಗೂ ಸ್ಫೂರ್ತಿಯಾಗಬಲ್ಲದು. ಪರಿಶ್ರಮದಿಂದ ಯಾವುದೇ ಗುರಿ ಈಡೇರಬಹುದು ಎಂಬುದನ್ನು ಈ ಕಥೆ ಸಾರಿ ಹೇಳುತ್ತದೆ. ಕಂಬಳಿ ಹುಳ ಯಾರಿಗೆ ಗೊತ್ತಿಲ್ಲ ಹೇಳಿ. ಮೈಯೆಲ್ಲ ರೋಮ ಹೊಂದಿರುವ ಅದನ್ನು ನೋಡಿ ಅಸಹ್ಯಪಟ್ಟುಕೊಳ್ಳುವವರೇ ಅಧಿಕ. ನಿಜ ಹೇಳಬೇಕೆಂದರೆ ಪ್ರಕೃತಿಯಲ್ಲಿ ಅಸುಂದರ ಎಂಬ ಕಲ್ಪನೆಯೇ ಇಲ್ಲ. ಆದರೆ ನಮ್ಮ ದೃಷ್ಟಿಕೋನ ಸರಿಯಾಗಿಲ್ಲದಿರುವುದರಿಂದ ಕಂಬಳಿ ಹುಳವನ್ನು ಅಸಹ್ಯ ಎನ್ನುತ್ತೇವೆ. ಅದಿರಲಿ. ಎಲ್ಲರಂತೆ ಕಂಬಳಿ ಹುಳಕ್ಕೂ ಅದರದ್ದೇ ಆದ ಕನಸುಗಳಿರುತ್ತವೆ. ಬಣ್ಣ ಬಣ್ಣದ ರೆಕ್ಕೆ ಕಟ್ಟಿಕೊಂಡು ಸ್ವತ್ಛಂದವಾಗಿ ಹಾರಾಡುತ್ತಿರಬೇಕು ಎಂದು ಕನಸು ಕಾಣುವ ಅದು ಎಷ್ಟೇ ಕಷ್ಟ ಪಟ್ಟಾದರೂ ನನಸು ಮಾಡಲು ಸಿದ್ಧವಾಗುತ್ತದೆ.
Related Articles
ಇಲ್ಲಿ ನಾವು ಕಲಿಯಬೇಕಾದ ಪಾಠ ಬಹಳಷ್ಟಿದೆ. ಇಂದಿಗೆ ಅಂದುಕೊಂಡು ನಾಳೆ ಗುರಿ ಮುಟ್ಟುತ್ತೇವೆ ಎನ್ನಲು ಸಾಧ್ಯವಿಲ್ಲ. ಅದಕ್ಕೆ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಜತೆಗೆ ಕಲ್ಲು-ಮುಳ್ಳಿನ ಹಾದಿ ಕ್ರಮಿಸಬೇಕಾಗುತ್ತದೆ. ಇದಕ್ಕೆಲ್ಲ ಸಿದ್ಧರಿದ್ದರಷ್ಟೇ ನಾವು ಇತಿಹಾಸವಾಗುತ್ತೇವೆ. ವಿದ್ಯಾರ್ಥಿ ಜೀವನದಲ್ಲಿ ಬರೆ ಮೋಜು-ಮಸ್ತಿ ಅಂದುಕೊಂಡರೆ ಭವಿಷ್ಯದಲ್ಲಿ ಕೊರಗಬೇಕಾಗುತ್ತದೆ. ಮನೋರಂಜನೆಯಷ್ಟೇ ಮಹತ್ವ ಕಲಿಕೆಗೂ ನೀಡಿದರೆ, ಪರಿಶ್ರಮಪಟ್ಟರೆ,ಗೆಲವು ಒಲಿಯುವುದರಲ್ಲಿ ಸಂದೇಹವಿಲ್ಲ.
Advertisement
- ರಮೇಶ್ ಬಳ್ಳಮೂಲೆ