ಇಸ್ತಾಂಬುಲ್: ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ41 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.ಕಟ್ಟಡಗಳ ಅವಶೇಷಗಳು ಕರಾಳತೆಯ ಭೀಕರತೆಯನ್ನು ತೆರೆದಿಟ್ಟಿದೆ. ಭಾರತ ಸೇರಿದಂತೆ ಅನೇಕ ದೇಶಗಳು ಟರ್ಕಿ ಹಾಗೂ ಸಿರಿಯಾದ ನೆರವಿಗೆ ಧಾವಿಸಿ, ರಕ್ಷಣಾ ಕಾರ್ಯಚರಣೆಗೆ ಕೈಜೋಡಿಸಿವೆ.
ಇತ್ತೀಚೆಗೆ ಟರ್ಕಿಯ ಕಟ್ಟಡವೊಂದರ ಅವಶೇಷದಡಿಯಲ್ಲಿ ಸಿಲುಕಿದ್ದ ಬೆಕನ್ನು ರಕ್ಷಿಸಿದ ವಿಡಿಯೋ ವೈರಲ್ ಆಗಿತ್ತು. ಸಾವು – ಬದುಕಿನ ನಡುವೆ ಹೋರಾಡಿ ಬಂದ ಬೆಕ್ಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಅದೇ ಬೆಕ್ಕು ಮತ್ತೊಂದು ವಿಚಾರದಲ್ಲಿ ಸುದ್ದಿಯಾಗಿದೆ.
ಇದನ್ನೂ ಓದಿ: ದಕ್ಷಿಣದ ಸಿನಿಮಾಗಳನ್ನು ರಿಮೇಕ್ ಮಾಡಿ ಸಾಲು ಸಾಲು ಸೋಲು ಕಾಣುತ್ತಿದೆ ಬಾಲಿವುಡ್: ಕಾರಣವೇನು?
ಅವಶೇಷದಡಿಯಲ್ಲಿ ಸಿಲುಕಿದ್ದ ಬೆಕ್ಕನ್ನು ಅಲಿ ಕಾಕಾಸ್ ಎನ್ನುವ ರಕ್ಷಣಾ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಪ್ರಾಣಿಗಳು ತುಂಬಾ ಮುಗ್ಧ ಅವುಗಳಿಗೆ ಯಾರಾದರೂ ಒಮ್ಮೆ ಸಹಾಯ ಮಾಡಿದರೆ, ಅವು ಅವರನ್ನು ಸದಾ ನೆನಪಲ್ಲಿ ಇಟ್ಟುಕೊಳ್ಳುತ್ತವೆ.
ಈ ಮಾತಿಗೆ ಉದಾಹರಣೆಯಾಗಿದೆ ಭೂಕಂಪದಲ್ಲಿ ಬದುಕುಳಿದ ಬೆಕ್ಕು. ರಕ್ಷಿಸಿದ ಬಳಿಕ ಬೆಕ್ಕು, ರಕ್ಷಣೆ ಮಾಡಿದ ಸಿಬ್ಬಂದಿಯನ್ನು ಬಿಡದೆ, ಆತನ ಹಿಂದೆಯೇ ಹೋಗಿದೆ. ಕೆಳಗೆ ಬಿಟ್ಟರೂ, ಸಿಬ್ಬಂದಿಯ ಮೈ ಮೇಲೆ ಹತ್ತಿ ಕೂತುಕೊಂಡಿದೆ. ರಕ್ಷಣಾ ಸಿಬ್ಬಂದಿ ಬೆಕ್ಕಿನ ಪ್ರೀತಿಯನ್ನು ಕಂಡು ಬೆಕ್ಕನ್ನು ತಾನೇ ದತ್ತು ಪಡೆದುಕೊಂಡು, ಅದಕ್ಕೆ ಎಂಕಾಜ್ ಎಂದು ನಾಮಕರಣ ಮಾಡಿದ್ದಾರೆ.
ಸಿಬ್ಬಂದಿ ಹಾಗೂ ಬೆಕ್ಕು ಜೊತೆಯಾಗಿ ಕೂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಾಣಿಪ್ರಿಯ ಸಿಬ್ಬಂದಿಗೆ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.