Advertisement
ಪಾಂಗಾಳ-ಮಟ್ಟು ಸೇತುವೆಯ ಭಾಗ ದಿಂದ ಬ್ಯಾರಿ ತೋಟದವರೆಗೆ ಉಪ್ಪು ನೀರು ಕೃಷಿ ಭೂಮಿಗೆ ನುಗ್ಗಿದೆ. ಪಾಂಗಾಳ-ಮಟ್ಟು ಸೇತುವೆ ಬಳಿಯ ಕರಾವಳಿ ಇಂಟಿಗ್ರೇಟೆಡ್ ಅಗ್ರೋ ಪ್ರೊಡ್ನೂಸರ್ ಲಿ. ಅವರು ಸಾಂಪ್ರದಾಯಿಕವಾಗಿ ಸುಮಾರು 2 ಎಕರೆ ಗದ್ದೆಯಲ್ಲಿ ಬೆಳೆದಿದ್ದ ಫಸಲು ನೀಡುತ್ತಿದ್ದ ಮಟ್ಟುಗುಳ್ಳದ ಗಿಡಗಳು ಹಾನಿಗೊಂಡಿವೆ.
ಉಪ್ಪು ನೀರು ಮಟ್ಟು ಬೆಳೆಗಾರರ ಗದ್ದೆಗೆ ನುಗ್ಗಿ ತೀವ್ರ ಹಾನಿಯಾಗಿರುವ ಬಗ್ಗೆ ಫೆ.21ರಂದು ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪಾಂಗಾಳ-ಕೈಪುಂಜಾಲು ಸೇತುವೆ
ನಿರ್ಮಾಣದ ಅವೈಜ್ಞಾನಿಕ ಕಾಮಗಾರಿ ಯಿಂದಾಗಿ ನೀರಿನ ಸರಾಗ ಹರಿಯುವಿಕೆಗೆ ತಡೆಯುಂಟಾಗಿದ್ದು, ಉಕ್ಕೇರಿದ ಉಪ್ಪು ನೀರು ಹೆಚ್ಚು ಒಳಪ್ರದೇಶಕ್ಕೆ ನುಗ್ಗಿದ್ದು, ಹೆಚ್ಚು ಹಾನಿ ಸಂಭವಿಸುವಂತಾಗಿದೆ ಎಂದು ಅಧಿಕಾರಿ ವಾದಿರಾಜ ಅವರು ಹೇಳಿದ್ದಾರೆ. ಈ ಬಗ್ಗೆ ಶಾಶ್ವತ ಪರಿಹಾರಕ್ಕೆ ಕಲ್ಲಿನ ತಡೆಗೋಡೆ ನಿರ್ಮಿಸುವ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದು ಇನ್ನಾದರೂ ಆದ್ಯತೆ ಮೇರೆಗೆ ತಡೆಗೋಡೆ ನಿರ್ಮಿಸುವಂತೆ ಕೃಷಿಕರು ಆಗ್ರಹಿಸಿದ್ದಾರೆ.
Related Articles
ಹಡೀಲು ಗದ್ದೆಯನ್ನು ಬಳಸಿ ಕೃಷಿ ಕಾಯಕ ನಡೆಸುವ ನಮ್ಮ ಸಂಸ್ಥೆಯ ಮೂಲಕ ಸುಮಾರು 65 ಸಾವಿರ ರೂ. ತೊಡಗಿಸಿಕೊಂಡು ಸಾಂಪ್ರದಾಯಿಕವಾಗಿ ಮಟ್ಟುಗುಳ್ಳದ ಬೆಳೆಯನ್ನು ಬೆಳೆಸಲಾಗಿತ್ತು.ಬುಧವಾರ ತಡರಾತ್ರಿ ಉಕ್ಕೇರಿದ ಹೊಳೆಯ ಉಪ್ಪು ನೀರು ಗದ್ದೆಯೊಳಗೆ ಒಳನುಗ್ಗಿದ್ದು ಸುಮಾರು 2 ಎಕರೆಯಷ್ಟು ಮಟ್ಟುಗುಳ್ಳ ಬೆಳೆಯು ಹಾನಿಗೀಡಾಗಿದೆ.
– ವಸಂತ್ ರಾವ್,ಸಿ.ಇ.ಒ.,ಕೆ.ಐ.ಎ.ಪಿ.ಎಲ್
Advertisement