Advertisement

“ಆ ನಿರ್ದೇಶಕ ಮಾತನಾಡುವ ನೆಪದಲ್ಲಿ ಹೊಟೇಲ್‌ ರೂಮ್‌ ಗೆ ಕರೆದಿದ್ದ..”ವಿದ್ಯಾ ಬಾಲನ್

04:53 PM Mar 11, 2023 | Team Udayavani |

ಮುಂಬಯಿ: ಬಾಲಿವುಡ್‌ ಬೆಡಗಿ ವಿದ್ಯಾ ಬಾಲನ್‌ ಇತ್ತೀಚೆಗೆ ಹಾಟ್‌ ಫೋಟೋವೊಂದರ ಮೂಲಕ ಸುದ್ದಿಯಾಗಿದ್ದರು. ಬಾಲಿವುಡ್‌ ಫೋಟೋಗ್ರಾಫರ್‌ ಒಬ್ಬರು ಸೆರೆ ಹಿಡಿದ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ಸಂದರ್ಶನವೊಂದರಲ್ಲಿ ವಿದ್ಯಾ ಬಾಲನ್‌ ಕಾಸ್ಟಿಂಗ್‌ ಅನುಭವದ ಬಗ್ಗೆ ಮಾತನಾಡಿದ್ದಾರೆ.

Advertisement

‌ʼಡರ್ಟಿ ಪಿಕ್ಚರ್‌ʼ ನಟಿ ತಮ್ಮ ಜೀವನದಲ್ಲಿ ಒಮ್ಮೆ ನಡೆದ ಆ ಘಟನೆಯನ್ನು ನೆನಪಿಸಿಕೊಂಡು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ನನ್ನನು ನಾನು ಯಾವಾಗಲೂ ಅದೃಷ್ಟವಂತೆ ಎಂದು ಭಾವಿಸುತ್ತೇನೆ. ಎಂದಿಗೂ ಕಾಸ್ಟಿಂಗ್‌ ಕೌಚ್‌ ನಂತಹ ಬಲೆಗೆ ಬೀಳಲಿಲ್ಲ. ಆದರೆ ಅದೊಂದು ದಿನ ಒಬ್ಬ ನಿರ್ದೇಶರು ತನ್ನೊಂದಿಗೆ ನಡೆದುಕೊಂಡ ವರ್ತನೆ ಬಗ್ಗೆ ಹೇಳುತ್ತೇನೆ.  ಸಿನಿಮಾವೊಂದರ ಬಗ್ಗೆ ಮಾತನಾಡುವ ನಿಟ್ಟಿನಲ್ಲಿ ನಿರ್ದೇಶಕರೊಬ್ಬರು ನನ್ನನು ಅವರ ಹೊಟೇಲ್‌ ರೂಮ್‌ ಗೆ ಕರೆದಿದ್ದರು. ನಾನು ಅವರಿಗೆ ಕಾಫಿ ಶಾಪ್‌ ನಲ್ಲಿ ಭೇಟಿಯಾಗುವ ಹೇಳಿದೆ. ಆದರೆ ಅವರು ಹೊಟೇಲ್‌ ರೂಮ್‌ ನಲ್ಲಿ ಭೇಟಿಯಾಗಲು ಹೇಳಿದರು. ಆ ನಿರ್ದೇಶಕರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ನಾನು ಅರ್ಥೈಸಿಕೊಂಡು ಆಯಿತೆಂದು ಹೇಳಿ ಹೊಟೇಲ್‌ ರೂಮ್‌ ಗೆ ಹೋದೆ. ಆದರೆ ಹೊಟೇಲ್‌ ಕೋಣೆಯ ಅರ್ಧ ಬಾಗಿಲನ್ನು ಹಾಗೆಯೇ ಓಪನ್‌ ಮಾಡಿಟ್ಟು ಮಾತನಾಡಲು ಆರಂಭಿಸಿದೆ. ಬಳಿಕ ಆ ನಿರ್ದೇಶಕ ಐದೇ ನಿಮಿಷದಲ್ಲಿ ಹೊಟೇಲ್‌ ಕೋಣೆಯಿಂದ ಹೊರ ಹೋದರು ಎಂದು  ಹಳೆಯ ಘಟನೆಯ ಬಗ್ಗೆ ವಿದ್ಯಾ ಬಾಲನ್‌ ಮಾತನಾಡಿದ್ದಾರೆ.

ಇತ್ತೀಚೆಗೆ ವಿದ್ಯಾ ಬಾಲನ್‌ ʼಜಲ್ಸಾʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಮುಂದೆ ʼನೀಯತ್ & ಲವರ್ಸ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next