ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಐದನೇ ಚಿತ್ರ ಮಾರ್ಟಿನ್ ಸಿನಿಮಾದ ಪೋಸ್ಟರ್ ಈಗಗಲೇ ರಿಲೀಸ್ ಆಗಿದೆ. ಇಷ್ಟೆ ಅಲ್ಲದೆ ಚಿತ್ರದ ಫಸ್ಟ್ ಲುಕ್ ಟೀಸರ್ ಕೂಡ ಬಿಡುಗಡೆಯಾಗಿದ್ದು, ಚಿತ್ರ ಪ್ರೇಮಿಗಳ ಗಮನ ಸೆಳೆದಿದೆ. ಇದೀಗ ಮಾರ್ಟಿನ್ ಚಿತ್ರತಂಡ ಸಿನಿಮಾ ನಾಯಕಿಯ ಹುಡುಕಾಟದಲ್ಲಿ ತೊಡಗಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಡಿಷನ್ ಕರೆದಿರುವ ಚಿತ್ರತಂಡ ಸಿನಿಮಾಕ್ಕೆ ನಾಯಕಿ ಬೇಕಾಗಿದ್ದಾರೆ. ಯಾರಿಗಾದರೂ ಆಸಕ್ತಿ ಇದ್ದರೆ ಮುಂದೆ ಬನ್ನಿ ಎಂದು ಚಿತ್ರತಂಡ ತಿಳಿಸಿದೆ. ಇನ್ನು ಆಸಕ್ತಿ ಇದ್ದವರು martinmovie1234@gmail.com ಈ ವಿಳಾಸಕ್ಕೆ ನಿಮ್ಮ ಫೋಟೋ ಮತ್ತು ನಿಮ್ಮ ಬಗ್ಗೆ ಕಳುಹಿಸಿಕೊಡಬಹುದು.
ಮಾರ್ಟಿನ್ ಚಿತ್ರವು ಕಾಲೇಜ್ ಬ್ಯಾಕ್‌ಡ್ರಾಪ್ ನಲ್ಲಿ ನಡೆಯುವ ಕಥೆ ಹೊಂದಿರುವ ಸಿನಿಮಾ. ಇದು ಔಟ್ ಅಂಡ್ ಔಟ್ ಕಮರ್ಶಿಯಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ. ಈ ಚಿತ್ರದಲ್ಲಿ ನವಿರಾದ ಪ್ರೇಮಕಥೆಯೂ ಇರಲಿದೆ. ಲವ್ ಸ್ಟೋರಿ ಹಾಗೂ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದೆ. ಚಿತ್ರಕ್ಕೆ ಎಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ರೆ, ಉದಯ್ ಮೆಹ್ತಾ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.