Advertisement
ರಾಮಾಯಣ ಪವಿತ್ರ ಗ್ರಂಥ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಪವಿತ್ರ ಗ್ರಂಥವಾಗಿದೆ. ಇಲ್ಲಿನ ತತ್ವಸಿದ್ಧಾಂತಗಳಲ್ಲಿ ಮೌಲ್ಯಗಳು ನಮ್ಮದಾಗಲಿ. ಭಾರತದಲ್ಲಿ ಧಾರ್ಮಿಕ ನಂಬಿಕೆಗಳು ಹೆಚ್ಚಾಗಿವೆ. ಎಲ್ಲವನ್ನೂ ಜಾತಿ ಹೆಸರಿನಲ್ಲಿ ನೋಡುವ ಪರಿಸ್ಥಿತಿ ದೇಶದಲ್ಲಿ ಉದ್ಭವಿಸಿದೆ. ಇದು ದೇಶದ ಪ್ರಗತಿಗೂ ಮಾರಕವಾಗುತ್ತಿದೆ ಎಂದರು.
Related Articles
Advertisement
ಶಿಕ್ಷಣಕ್ಕೆ ಒತ್ತು ನೀಡಬೇಕು: ಪ್ರೇರಣಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಸ್ಥಾಪಕಿ ಕೆ.ಜೆ. ಜಯಲಕ್ಷ್ಮಮ್ಮ ಮಾತನಾಡಿ, ವಾಲ್ಮೀಕಿ ರಾಮಾಯಣ ಬುಡಕಟ್ಟು ಜನಾಂಗಗಳ ಮಹಾಕಾವ್ಯವಾಗಿದೆ. ಇದರಲ್ಲಿ ಬುಡಕಟ್ಟಿನ ಜೀವನವೇ ಅಡಕವಾಗಿದೆ. ಪರಿಶಿಷ್ಟರು, ಹಿಂದುಳಿದವರೆ ನಿಜವಾದ ಮೂಲನಿವಾಸಿಗಳಾಗಿದ್ದಾರೆ. ನಿಜವಾದ ಗೋರಕ್ಷರು ಇವರೇ ಆಗಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ರಾವಣನೇ ನಿಜವಾದ ನಾಯಕನಾಗಿದ್ದಾನೆ. ಆದರೆ ಆತನನ್ನು ನಮ್ಮ ಕೈಯಲ್ಲೇ ಸುಡಿಸುವ ಮೂಲಕ ಒಡಕು ಉಂಟು ಮಾಡಲಾಗುತ್ತಿದೆ. ಇದರ ಬಗ್ಗೆ ನಾವು ಜಾಗೃತರಾಗಬೇಕು. ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಪಂ ಅಧ್ಯಕ್ಷೆ ಶಿವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾವತಿಸಿದ್ದರಾಜು, ಸದಸ್ಯರಾದ ಜೆ.ಯೋಗೇಶ್, ಕಮಲ್‌ನಾಗರಾಜು, ತಾಪಂ ಅಧ್ಯಕ್ಷ ನಿರಂಜನ್ ಉಪಾಧ್ಯಕ್ಷೆ ಮಲ್ಲಾಜಮ್ಮ, ಸದಸ್ಯರಾದ ವೆಂಕಟೇಶ್, ನಾಗರಾಜು, ಪಲ್ಲವಿಮಹೇಶ್, ಭಾಗ್ಯನಂಜಯ್ಯ, ಪದ್ಮಾವತಿ, ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಮಹಾದೇವನಾಯಕ, ಸವಿತಾ, ಕೆ.ಮಲ್ಲಯ್ಯ, ಮಂಜು, ಪ್ರಭಾವತಿ, ಬಿ.ರವಿ ನಾಯಕ ಸಂಘದ ತಾಲೂಕು ಅಧ್ಯಕ್ಷ ವೈ.ಎನ್. ಮುರುಳಿಕೃಷ್ಣ, ತಹಶೀಲ್ದಾರ್ ವರ್ಷಾ, ಇಒ ಬಿ.ಎಸ್.ರಾಜು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಕೆ. ಮೇಘಾ, ಬಿಇಒ ವಿ.ತಿರುಮಲಾಚಾರ್ ಇತರರು ಇದ್ದರು.
ಗಮನ ಸೆಳೆದ ಆಕರ್ಷಕ ಮೆರವಣಿಗೆಸಂತೆಮರಹಳ್ಳಿ: ಯಳಂದೂರು ಪಟ್ಟಣದಲ್ಲಿ ಪರಿಶಿಷ್ಟ ಕಲ್ಯಾಣ ವರ್ಗಗಳ ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಿಮಿತ್ತ ನಡೆದ ಮೆರವಣಿಗೆ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಶಾಲೆಯ ಮಕ್ಕಳು ಮಾಡಿದ್ದ ಸ್ತಬ್ಧಚಿತ್ರಗಳು ಗಮನ ಸೆಳೆದವು. ಅಲಂಕೃತ ಕುದುರೆ ಸಾರೋಟಿನಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಗಾರುಡಿಗೊಂಬೆ, ಕುದುರೆ ಮೇಲೇರಿಬಂದ ವೀರಮದಕರಿ ನಾಯಕರ ಪಾತ್ರಧಾರಿಗಳು ಗಮನಸೆಳೆದವು. ಇದರೊಂದಿಗೆ ಡೊಳ್ಳು ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ವಿವಿಧ ಗ್ರಾಮಗಳಿಂದ ಮಹರ್ಷಿ ವಾಲ್ಮೀಕಿಯ ಚಿತ್ರಪಟಗಳನ್ನು ತಮ್ಮ ಅಲಂಕೃತ ವಾಹನಗಳ ಮೇಲೇರಿಸಿಕೊಂಡು ಬಂದಿದ್ದ ಸಾವಿರಾರು ಜನರು ಗಮನ ಸೆಳೆದರು. ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಶಿವಮ್ಮ ಚಾಲನೆ ನೀಡಿದರು.