Advertisement

ರಾಜಕೀಯ ನೇತಾರರ ಜಾತಿ ಜಗಳ

11:06 AM May 04, 2019 | sudhir |

ಉತ್ತರಪ್ರದೇಶದ ಹರ್ದೋಯಿಯಲ್ಲಿ ಶನಿವಾರ ನಡೆದ ರ್ಯಾಲಿ ವೇಳೆ ಪ್ರಧಾನಿ ಮೋದಿ ಪ್ರಸ್ತಾವಿಸಿದ “ಜಾತಿ’ ಹೊಸ ಕಿಚ್ಚು ಹೊತ್ತಿಸಿದೆ. ನಾನು ಗುಜರಾತ್‌ನ ಅತ್ಯಂತ ಹಿಂದುಳಿದ ಜಾತಿಗೆ ಸೇರಿದವನು ಎಂದು ಪ್ರಧಾನಿ ಮೋದಿ ಹೇಳಿದ್ದೇ ತಡ, ವಿವಿಧ ರಾಜಕೀಯ ಪಕ್ಷಗಳ ನಡುವೆ “ಜಾತಿ ರಾಜಕೀಯ’ದ ಜಗಳ ಶುರುವಾಗಿದೆ. ಬೆಹನ್‌ಜಿà, ಅಖೀಲೇಶ್‌ ಮತ್ತು ಕಾಂಗ್ರೆಸ್‌ ನನ್ನ ಜಾತಿಯನ್ನು ಪ್ರಸ್ತಾವಿಸುವವರೆಗೆ ನಾನು ಜಾತಿಯನ್ನು ಹೇಳಿಕೊಂಡಿರಲಿಲ್ಲ. ನನ್ನನ್ನು ಈ ಜಾತಿ ರಾಜಕೀಯಕ್ಕೆ ಎಳೆಯಬೇಡಿ ಎಂದು ಮೋದಿ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಬಿಎಸ್‌ಪಿ ನಾಯಕಿ ಮಾಯಾವತಿ, “ಮೇಲ್ಜಾತಿಯ ಕುಟುಂಬದಲ್ಲಿ ಹುಟ್ಟಿದ್ದರೂ ರಾಜಕೀಯ ಲಾಭಕ್ಕಾಗಿ ಮೋದಿಯವರು ಒಬಿಸಿ ಪಟ್ಟಿಗೆ ಸೇರಿಕೊಂಡರು’ ಎಂದು ಟೀಕಿಸಿದ್ದರು. ಈಗ ಅರುಣ್‌ ಜೇಟಿÉ, ತೇಜಸ್ವಿ ಯಾದವ್‌, ಅಮಿತ್‌ ಶಾ, ಪ್ರಿಯಾಂಕಾ ವಾದ್ರಾ, ಚಿದಂಬರಂ ಸೇರಿ ಅನೇಕ ನಾಯಕರು ಈ ಜಾತಿ ಜಗಳದಲ್ಲಿ ಸೇರಿಕೊಂಡು, ಪರಸ್ಪರ ವಾಗ್ಯುದ್ಧ ನಡೆಸಿದ್ದಾರೆ.

Advertisement

ಪಾರೀಕರ್‌ ಪುತ್ರನಿಗಿಲ್ಲ ಪಣಜಿ ಟಿಕೆಟ್‌
ಪಣಜಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಸರತ್ತು ಕೊನೆಗೂ ಪೂರ್ಣಗೊಂಡಿದ್ದು, ಮಾಜಿ ಶಾಸಕ ಸಿದ್ಧಾರ್ಥ್ ಕುನ್‌ಕೋಲಿಯೆಂಕರ್‌ ಅವರಿಗೆ ಬಿಜೆಪಿ ಟಿಕೆಟ್‌ ಅಂತಿಮಗೊಳಿಸಿದೆ. ಹೀಗಾಗಿ ಮೇ 19ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಮಾಜಿ ಸಿಎಂ ಮನೋಹರ್‌ ಪಾರೀಕರ್‌ ಪುತ್ರ ಉತ್ಪಲ್‌ ಪಾರೀಕರ್‌ಗೆ ಟಿಕೆಟ್‌ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಪರ್ರಿಕರ್‌ ನಿಧನದ ಹಿನ್ನೆಲೆಯಲ್ಲಿ ಈ ಕ್ಷೇತ್ರ ತೆರವಾಗಿತ್ತು. ಪರ್ರಿಕರ್‌ ಇಲ್ಲಿ ಸ್ಪರ್ಧಿಸುವುದಕ್ಕೂ ಮುನ್ನ ಅಂದರೆ 2017ರ ಅಸೆಂಬ್ಲಿ ಚುನಾವಣೆಯಲ್ಲಿ ಸಿದ್ಧಾರ್ಥ್ ಅವರೇ ಇಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.

ಕಾಂಗ್ರೆಸ್‌ ಗೆದ್ದರೆ ಸ್ವಂತ ಮನೆ
ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಮುಂಬಯಿಯ ಕೊಳೆಗೇರಿ ನಿವಾಸಿಗಳು ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೆ ಸ್ವಂತ ಸೂರು ಕಲ್ಪಿಸುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆಶ್ವಾಸನೆ ನೀಡಿದ್ದಾರೆ. ಸೋಮ  ವಾರ ಮುಂಬಯಿಯ ಎಲ್ಲ 6 ಲೋಕಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದ್ದು, ಇದರ ಮುನ್ನಾದಿನ ಟ್ವಿಟರ್‌ನಲ್ಲಿ ರಾಹುಲ್‌ ಇಂಥ ವಾಗ್ಧಾನ ನೀಡಿದ್ದಾರೆ. ವಿಶೇಷವೆಂದರೆ, ರಾಹುಲ್‌ ಮರಾಠಿ ಭಾಷೆಯಲ್ಲೇ ಈ ಟ್ವೀಟ್‌ ಮಾಡಿದ್ದು, ಕನಿಷ್ಠ 500 ಚದರ ಅಡಿ ಪ್ರದೇಶದಲ್ಲಿ ಕೊಳೆಗೇರಿ ನಿವಾಸಿಗಳಿಗೆ ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸು ವವರಿಗೆ ಸ್ವಂತ ಮನೆ ಕಟ್ಟಿಸಿಕೊಡಬೇಕೆಂದು ಪಕ್ಷದ ಸಹೋದ್ಯೋಗಿಗಳು ಪ್ರಸ್ತಾವ ಸಲ್ಲಿಸಿದ್ದು, ಅದಕ್ಕೆ ಬೆಂಬಲ ಸೂಚಿಸಿದ್ದೇನೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಈಡೇರಿಸಲಾಗುವುದು ಎಂದಿದ್ದಾರೆ.

ಚುನಾವಣಾ ಆಯೋಗ ಮೂಕಪ್ರೇಕ್ಷಕ
ಬಿಜೆಪಿ ನಾಯಕರು ಪದೇ ಪದೆ ನೀತಿ ಸಂಹಿತೆ ಉಲ್ಲಂ ಸುತ್ತಿದ್ದರೂ, ಪ್ರಧಾನಿ ಮೋದಿ ಮತ್ತು ಬಿಜೆಪಿಯು ಅತಿಯಾಗಿ ವರ್ತಿಸುತ್ತಿದ್ದರೂ, ಹಣವನ್ನು ನೀರಿನಂತೆ ವೆಚ್ಚ ಮಾಡುತ್ತಿದ್ದರೂ ಚುನಾವಣಾ ಆಯೋಗ ಮಾತ್ರ ಮೂಕಪ್ರೇಕ್ಷಕನಂತೆ ಕುಳಿತಿದೆ. ಈ ಮೂಲಕ ಆಯೋಗವು ಭಾರತೀಯರಿಗೆ ವಂಚಿಸುತ್ತಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಆರೋಪಿಸಿ ದ್ದಾರೆ. ಸಂದರ್ಶನವೊಂದರಲ್ಲಿ ಮಾತನಾ ಡಿದ ಅವರು, ಬಿಜೆಪಿಯ ರಾಷ್ಟ್ರೀಯವಾದದ ಕುರಿತೂ ಟೀಕಿಸಿದ್ದು, ಬಿಜೆಪಿ ಪ್ರಚುರಪಡಿಸುತ್ತಿರುವ ರಾಷ್ಟ್ರೀ ಯವಾದವು ತಮ್ಮ ವೈಫ‌ಲ್ಯಗಳನ್ನು ಮುಚ್ಚಿಟ್ಟು ಕೊಳ್ಳಲು ಮಾಡುತ್ತಿರುವ ತಂತ್ರ. ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಭಾರತೀಯರೇನು ದೇಶದ್ರೋಹಿ ಗಳಾಗಿದ್ದರೇ ಎಂದು ಪ್ರಶ್ನಿಸಿದ್ದಾರೆ.

ಜತೆಗೆ, ಜಾತಿ ಕುರಿತು ಪ್ರಧಾನಿ ಮೋದಿ ಆಡಿರುವ ಮಾತುಗಳ ಬಗ್ಗೆಯೂ ಉಲ್ಲೇಖೀಸಿದ ಚಿದಂಬರಂ, “ಮೋದಿ ಅವರು 2014ರಲ್ಲೂ ನಾನು ಹಿಂದುಳಿದ ವರ್ಗಕ್ಕೆ ಸೇರಿದವನು ಎಂದು ಹೇಳುತ್ತಾ ಚುನಾವಣಾ ಪ್ರಚಾರ ಮಾಡಿದರು. ಈಗ ನನಗೆ ಜಾತಿಯೇ ಇಲ್ಲ ಎನ್ನುತ್ತಿದ್ದಾರೆ. ಅವರೇನು ಜನರನ್ನು ಸ್ಮರಣಶಕ್ತಿ ಕಳೆದುಕೊಂಡಿರುವ ಮೂರ್ಖರ ಗೊಂಚಲು ಎಂದು ಭಾವಿಸಿದ್ದಾರಾ’ ಎಂದೂ ಆಕ್ರೋಶಭರಿತರಾಗಿ ಪ್ರಶ್ನಿಸಿದ್ದಾರೆ.

Advertisement

ನನ್ನಲ್ಲಿರುವುದು ಒಂದೇ ಗುರುತಿನ ಚೀಟಿ
ಪೂರ್ವ ದಿಲ್ಲಿಯ ಬಿಜೆಪಿ ಅಭ್ಯರ್ಥಿ ಗೌತಮ್‌ ಗಂಭೀರ್‌ 2 ವೋಟರ್‌ ಐಡಿ ಹೊಂದಿದ್ದಾರೆ ಎಂಬ ಆಪ್‌ ಅಭ್ಯರ್ಥಿ ಆತಿಷಿ ಆರೋಪವನ್ನು ಗಂಭೀರ್‌ ರವಿವಾರ ತಳ್ಳಿಹಾಕಿದ್ದಾರೆ. ನನ್ನ ಬಳಿ ಇರುವುದು ಒಂದೇ ಗುರುತಿನ ಚೀಟಿ. ಅದು ರಾಜೇಂದ್ರ ನಗರದಲ್ಲಿದೆ. ನಾನು ಬೇರೆಲ್ಲಿಯೂ ವೋಟರ್‌ ಐಡಿಗೆ ಅರ್ಜಿ ಸಲ್ಲಿಸಿಯೂ ಇಲ್ಲ, ಮತ ಚಲಾಯಿಸಿಯೂ ಇಲ್ಲ. ಆಡಳಿತಾರೂಢ ಆಮ್‌ ಆದ್ಮಿ ಪಕ್ಷವು ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದೆ ಎಂದು ಗಂಭೀರ್‌ ಕಿಡಿಕಾರಿದ್ದಾರೆ.

ಬೆಂಕಿ ನಂದಿಸಲು ಸ್ಮತಿ ನೆರವು
ಅಮೇಠಿಯಲ್ಲೇ ಠಿಕಾಣಿ ಹೂಡಿರುವ ಕೇಂದ್ರ ಸಚಿವೆ ಸ್ಮತಿ ಇರಾನಿ, ರವಿವಾರ ಇಲ್ಲಿನ ಗ್ರಾಮವೊಂದರಲ್ಲಿ ಬೆಂಕಿ ಕಾಣಿಸಿಕೊಂಡಾಗ, ಅದನ್ನು ನಂದಿಸಲು ಸಹಾಯ ಮಾಡಿದ ದೃಶ್ಯ ವೈರಲ್‌ ಆಗಿದೆ. ಪೂರಬ್‌ ದ್ವಾರಾ ಗ್ರಾಮದ ಜಮೀನಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಎಚ್ಚೆತ್ತ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಅಲ್ಲೇ ಇದ್ದ ಇರಾನಿ ಅವರೂ ಹ್ಯಾಂಡ್‌ಪಂಪ್‌ ಮೂಲಕ ನೀರು ತೆಗೆದು, ಬಕೆಟ್‌ಗೆ ತುಂಬಿಸಿ ಕೊಡಲಾರಂಭಿಸಿದರು. ಜತೆಗೆ, ಆತಂಕಕ್ಕೀಡಾದ ಮಹಿಳೆಯರನ್ನು ಸಮಾಧಾನಪಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾದರು.

ನಿಮ್ಮದೆಂಥಾ ರಾಷ್ಟ್ರೀಯವಾದ?
ಉತ್ತರಪ್ರದೇಶದ ಬಹ್ರೈಚ್‌ ಮತ್ತು ಅಮೇಠಿಯಲ್ಲಿ ಪ್ರಚಾರ ಕೈಗೊಂಡ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, “ನಿಮ್ಮದೆಂಥಾ ರಾಷ್ಟ್ರೀಯವಾದ’ ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ. ರಾಷ್ಟ್ರೀಯವಾದ ಎಂದರೆ ದೇಶದ ಮೇಲಿನ ಪ್ರೀತಿ. ದೇಶ ಎಂದರೆ ಇಲ್ಲಿನ ಜನರು. ಅವರ ಸಮಸ್ಯೆಗಳನ್ನು ಅರಿತು ಪರಿಹರಿಸುವುದೇ ನಿಜವಾದ ದೇಶಭಕ್ತಿ. ಆದರೆ “ನಾನು ಮೋದಿ’ ಎನ್ನುವ ಪರಿಕಲ್ಪನೆಯು ವ್ಯಕ್ತಿ ಆಧರಿತವಾಗಿರುವಂಥದ್ದು. ಇದು ಯಾವ ರೀತಿಯ ರಾಷ್ಟ್ರೀಯವಾದ ಆಗುತ್ತದೆ ಎಂದು ಪ್ರಿಯಾಂಕಾ ಕೇಳಿದ್ದಾರೆ. ಇದೇ ವೇಳೆ, ಕಿಸಾನ್‌ ಸಮ್ಮಾನ್‌ ಯೋಜನೆ ಮೂಲಕ ರೈತರಿಗೆ ಬಿಜೆಪಿ ಅವಮಾನ ಮಾಡುತ್ತಿದೆ. ದಿನಕ್ಕೆ ಕೇವಲ 3.50 ರೂ. ನೀಡುವ ಯೋಜನೆಯು ಕಿಸಾನ್‌ ಸಮ್ಮಾನ್‌ ಅಲ್ಲ, ಕಿಸಾನ್‌ ಅಪಮಾನ ಯೋಜನೆಯಾಗಿದೆ ಎಂದೂ ಹಳಿದಿದ್ದಾರೆ.

ಫ‌ಲಕ ಹಿಡಿದು ತಿರುಗುತ್ತಿದ್ದಾರೆ
ಉತ್ತರಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಆಡಳಿತ ನಡೆಸುತ್ತಿದ್ದಾಗ ಕ್ರಿಮಿನಲ್‌ಗ‌ಳು ರಾಜಾರೋಷವಾಗಿ ತಿರುಗಾಡುತ್ತಿದ್ದರು. ಆದರೆ, ಯೋಗಿ ಆದಿತ್ಯನಾಥ್‌ ಇಲ್ಲಿ ಸಿಎಂ ಆದ ಬಳಿಕ ಕ್ರಿಮಿನಲ್‌ಗ‌ಳೆಲ್ಲ “ನಮ್ಮನ್ನು ಬಂಧಿಸಿ. ಆದರೆ ಎನ್‌ಕೌಂಟರ್‌ ಮಾತ್ರ ಮಾಡಬೇಡಿ’ ಎಂಬ ಫ‌ಲಕಗಳನ್ನು ಕುತ್ತಿಗೆಗೆ ನೇತುಹಾಕಿಕೊಂಡೇ ತಿರುಗುತ್ತಿದ್ದಾರೆ. ಹೀಗೆಂದು ಹೇಳಿದ್ದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ. ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ರವಿವಾರ ಪ್ರಚಾರ ರ್ಯಾಲಿಯಲ್ಲಿ ಅವರು ಮಾತನಾಡಿದರು. ಇದೇ ವೇಳೆ, ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳನ್ನು ನಾಶ ಮಾಡುವ ಮೂಲಕ ಪ್ರಧಾನಿ ಮೋದಿಯವರು ತಮ್ಮದು 56 ಇಂಚಿನ ಎದೆ ಎಂಬುದನ್ನು ತೋರಿಸಿಕೊಟ್ಟರು ಎಂದೂ ಶಾ ಹೇಳಿದ್ದಾರೆ. ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲ ದೇಶ ವಿರೋಧಿ ಶಕ್ತಿಗಳು ಕಂಬಿ ಎಣಿಸುವಂತೆ ಮಾಡುತ್ತೇವೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next