ಎಚ್.ಡಿ. ಕುಮಾರಸ್ವಾಮಿ ಅವರಿಗೆ ಈಗ ಸ್ವಜಾತಿ ಒಕ್ಕಲಿಗರು ನೆನಪಾಗಿದ್ದಾರೆ. ಜಾತ್ಯತೀತ ಪಕ್ಷ ಎಂದು ಕರೆಸಿಕೊಳ್ಳುವ ಪಕ್ಷದ ನಾಯಕನಿಗೆ ಈಗ ಜಾತಿ ಪ್ರೇಮ ಉಕ್ಕಿ ಹರಿಯುತ್ತಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಅಧಿಕಾರ ಕಳೆದುಕೊಂಡಿರುವ ಅವರು ಸೋತ ಮೇಲೆ ಇಂಥ ಮಾತನ್ನಾಡುತ್ತಾರೆ. ಅಳಿದುಳಿದುದನ್ನು ಉಳಿಸಿಕೊಳ್ಳಲು ಹೀಗೆ ಮಾತನಾಡುತ್ತಾರೆಂದು ಛೇಡಿಸಿದರು.
Advertisement