ನ್ಯಾ| ಜಿ ರೋಹಿಣಿ ಅವರು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಆಯೋಗದ ಬೇಡಿಕೆಯಂತೆ ಅನುದಾನ ನೀಡಿದಲ್ಲಿ ಕೇಂದ್ರ ಸರಕಾರವೇ ಜಾತಿಗಣತಿ ನಡೆಸಿದಂತಾಗುತ್ತದೆ.
Advertisement
ಒಬಿಸಿಯ ಬಗ್ಗೆ ಕೇಂದ್ರದ ಬಳಿ ಇರುವ ಪಟ್ಟಿಯಲ್ಲಿ 2,600ಕ್ಕೂ ಹೆಚ್ಚು ಜಾತಿಗಳಿವೆ. ಈ ಪೈಕಿ ಬಹುತೇಕ ಜಾತಿಗಳಲ್ಲಿ ಅತ್ಯಂತ ಕಡಿಮೆ ಜನ ಸಂಖ್ಯೆಯಿದೆ ಮತ್ತು ಭೌಗೋಳಿಕವಾಗಿ ಅತ್ಯಂತ ದುರ್ಗಮ ಪ್ರದೇಶದಲ್ಲಿ ವಾಸಿಸುತ್ತಿವೆ. ಹೀಗಾಗಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಸಮೀಕ್ಷೆ ನಡೆಸುವುದು ಅಗತ್ಯವಿದೆ ಎಂದು ಆಯೋಗ ಹೇಳಿದೆ. ಪ್ರಾಥಮಿಕ ಹಂತದಲ್ಲಿ 10 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲು ಯೋಜಿಸ ಲಾಗಿದೆ. ಈ ಸಮೀಕ್ಷೆಯು ಜಾತಿಯ ವಿವರದ ಜತೆಗೆ ಶಿಕ್ಷಣದ ಮಟ್ಟ ಮತ್ತು ಉದ್ಯೋಗ ಸ್ಥಿತಿಗತಿಯ ಮಾಹಿತಿಯನ್ನೂ ಒದಗಿಸಲಿದೆ. ಈ ಸಮೀಕ್ಷೆಗೆ 200 ಕೋಟಿ ರೂ. ವೆಚ್ಚವಾಗಬಹುದು ಎಂದು ನ್ಯಾ| ರೋಹಿಣಿ ಪತ್ರ ದಲ್ಲಿ ವಿವರಿಸಿದ್ದಾರೆ. ರಾಜ್ಯ ಸರಕಾರಗಳು, ಇತರ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರು ಸಹಿತ ಹಲ ವಾರು ಮಂದಿಯ ಜತೆ ಈ ಸಮಿತಿ ಈಗಾಗಲೇ ಸಮಾಲೋಚನೆ ನಡೆಸಿದೆ. ಇದರ ಜತೆಗೆ ಒಬಿಸಿ ವಿದ್ಯಾರ್ಥಿಗಳು ಪ್ರವೇಶ ಪಡೆದ ಶಿಕ್ಷಣ ಸಂಸ್ಥೆಗಳ ಮಾಹಿತಿ, ಕೇಂದ್ರ ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಂದ ತತ್ ಸಂಬಂಧಿ ವಿವರಗಳನ್ನು ಪಡೆದುಕೊಂಡಿದೆ.
ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಕರ್ನಾಟಕದಲ್ಲೂ ಜಾತಿಗಣತಿ ನಡೆಸಲಾಗಿತ್ತು. ಇದುವರೆಗೂ ಈ ಜಾತಿ ಗಣತಿಯ ವರದಿ ಬಿಡುಗಡೆಯಾಗಿಲ್ಲ. 150 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚ ಮಾಡಿ ಈ ಜಾತಿಗಣತಿ ಸಿದ್ಧ ಮಾಡಲಾಗಿದೆ. ಆದರೆ ಜಾತಿಗಣತಿ ಯನ್ನು ತೀವ್ರವಾಗಿ ವಿರೋಧಿಸಿದ್ದ ಎಚ್.ಡಿ. ಕುಮಾರಸ್ವಾಮಿ ಅವರು, ವರದಿ ಬಿಡುಗಡೆಗೆ ಆಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗುತ್ತಿದೆ.