Advertisement

Caste Census ಸಂಘರ್ಷ!; ಸಂಪುಟದಲ್ಲಿ ಚರ್ಚಿಸಿ ಸಮೀಕ್ಷಾ ವರದಿ ಮಂಡನೆ: ಸಿದ್ದರಾಮಯ್ಯ

01:09 AM Oct 05, 2024 | Team Udayavani |

ಕೊಪ್ಪಳ/ರಾಯಚೂರು: ಮುಡಾ ಪ್ರಕರಣದ ಜಟಾಪಟಿ ಜೋರಾದ ಬೆನ್ನಲ್ಲೇ ಒಳ ಮೀಸಲಾತಿ ಕೂಗು ಭುಗಿಲೆದ್ದಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ ವರದಿಯನ್ನು ಸಂಪುಟದಲ್ಲಿ ಚರ್ಚಿಸಿ ಸದನದಲ್ಲೂ ಮಂಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಇದೇ ವಾರದಲ್ಲಿ ವರದಿ ಜಾರಿ ಘೋಷಿಸಿ ನ. 1ರಿಂದಲೇ ಅನುಷ್ಠಾನಕ್ಕೆ ತರಲಿ ಎಂದು ಆಗ್ರಹಿಸಿದ್ದಾರೆ.

Advertisement

ಕಾಂಗ್ರೆಸ್‌ ಪಕ್ಷದ ಹಿಂದುಳಿದ ವರ್ಗಗಳ ನಾಯಕರಾದ ಎಚ್‌.ಎಂ. ರೇವಣ್ಣ, ಪಿ.ಆರ್‌. ರಮೇಶ್‌, ಸಿ.ಎಸ್‌. ದ್ವಾರಕಾನಾಥ್‌, ನಾಗರಾಜ್‌ ಯಾದವ್‌, ರಾಮಚಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜಾತಿ ಸಮೀಕ್ಷೆ ವರದಿಯನ್ನು ಶೀಘ್ರವೇ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವುದಾಗಿ ಪ್ರಕಟಿಸಿದ್ದಾರೆ.

ಚನ್ನಪಟ್ಟಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿ, “ಜಾತಿ ಗಣತಿ ವರದಿಯಲ್ಲಿ ಏನಾ
ದರೂ ನ್ಯೂನತೆ ಇದ್ದರೆ ಸಿದ್ದರಾಮಯ್ಯ, ನಾನು ಹಾಗೂ ನಮ್ಮ ಪಕ್ಷದ ನಾಯಕರು ಮಾತನಾಡಿ, ಸರಿಪಡಿಸುತ್ತೇವೆ. ಈ ವಿಚಾರವಾಗಿ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ’ ಎಂದಿದ್ದಾರೆ.

ಜತೆಗೆ ಸದನದಲ್ಲೂ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಈ ಕುರಿತು ಬಸವರಾಜ ರಾಯರಡ್ಡಿ ಚರ್ಚಿಸಿದ್ದಾರೆ. ಆ ವರದಿಯನ್ನು ಇನ್ನೂ ಕ್ಯಾಬಿನೆಟ್‌ಗೆ ತಂದಿಲ್ಲ, ಸಂಪುಟಕ್ಕೆ ತಂದು ಚರ್ಚೆ ಮಾಡಬೇಕು. ಅದನ್ನು ಸದನದಲ್ಲೂ ಚರ್ಚೆ ಮಾಡಬೇಕು. ಹಿಂದುಳಿದ ವರ್ಗಗಳ ಇಲಾಖೆ ಸಚಿವರ ಹಾಗೂ ಇಲಾಖೆ ಜತೆಗೂ ಚರ್ಚೆ ಮಾಡಬೇಕು. ಆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಒಳ ಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಹೇಳಿದೆ. ಈ ಸಂಬಂಧ ಹೈಕಮಾಂಡ್‌ ಹಾಗೂ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಇದಕ್ಕೂ ಮುನ್ನ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸುದ್ದಿಗಾರರ ಜತೆ ಮಾತನಾಡಿದ, 2013-18ರ ಅವಧಿಯ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರವೇ 165 ಕೋಟಿ ರೂ. ವೆಚ್ಚದಲ್ಲಿ ಸಾಮಾಜಿಕ, ಆರ್ಥಿಕ, ಜಾತಿ ಗಣತಿ ಸಮೀಕ್ಷೆ ಮಾಡಿಸಿದೆ. ಹಿಂದೆ ಕಾಂತರಾಜ ಅವರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿದ್ದಾರೆ. ಆಗ ಸಿದ್ದರಾಮಯ್ಯಗೆ ಕೊನೆಯ ಅವಧಿಯಲ್ಲಿ ಆ ವರದಿ ತಲುಪಲಿಲ್ಲ. ಅನಂತರ ಬಂದ ಕುಮಾರಸ್ವಾಮಿ, ಬೊಮ್ಮಾಯಿ ಸರಕಾರ ಆ ವರದಿಯನ್ನು ಬಿಡುಗಡೆ ಮಾಡಲಿಲ್ಲ. ಸರಕಾರಕ್ಕೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್‌ ಹೆಗಡೆ ವರದಿ ಸಲ್ಲಿಸಿದ್ದರು. ಅದು 2024ರ ಫೆ.29ರಂದೇ ಸರ್ಕಾರಕ್ಕೆ ತಲುಪಿದೆ. ವರದಿ ಕೊಟ್ಟು 8 ತಿಂಗಳು ಕಳೆದಿವೆ. ಸಿಎಂ ಸಹ ಬದ್ಧತೆ ಇರುವ ನಾಯಕ. ಅವರನ್ನು ಭೇಟಿ ಮಾಡಿ ವರದಿ ಜಾರಿ ಮಾಡಿ ಎಂದು ಆಗ್ರಹಿಸಿದ್ದೇನೆ. ಅವರೂ ಸಹ ಈ ಬಗ್ಗೆ ಯೋಚನೆ ಮಾಡುತ್ತೇನೆ ಎಂದಿದ್ದಾರೆ. ಇದೇ ವಾರದಲ್ಲಿ ಆ ವರದಿ ಸ್ವೀಕಾರ ಮಾಡಿ ಘೋಷಣೆ ಮಾಡಲಿ ಎಂದರು.

Advertisement

ಚರ್ಚಿಸಿ ಮುಂದಿನ ನಿರ್ಧಾರ
ಸಿದ್ದರಾಮಯ್ಯ ಕೊಪ್ಪಳದಲ್ಲಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದೆ. ಅದನ್ನು ಸಚಿವ ಸಂಪುಟದಲ್ಲಿಟ್ಟು ಚರ್ಚಿಸಲಾಗುವುದು.

ಸಿಎಂ ಘೇರಾವ್‌ಗೆ ಸಿದ್ಧತೆ
ಸಿದ್ದರಾಮಯ್ಯ ಅಧ್ಯಾದೇಶದ ಮೂಲಕ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡುವ ಘೋಷಣೆ ಮಾಡಬೇಕು. ಇಲ್ಲದಿದ್ದರೆ ರಾಯಚೂರು ಜಿಲ್ಲೆಯ ಕಾರ್ಯಕ್ರಮದಲ್ಲೇ ಘೇರಾವ್‌ ಹಾಕಲಾಗುವುದು ಎಂದು ಒಳ ಮೀಸಲಾತಿ ಜಾರಿಗಾಗಿನ ಐಕ್ಯ ಹೋರಾಟ ಸಮಿತಿ ಎಚ್ಚರಿಸಿದೆ.

ಎಚ್ಚರಿಕೆ ಹೆಜ್ಜೆ ಇಡಲಿ
ಜಾತಿ ಗಣತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂದು ಮನವಿ ಮಾಡುವೆ. ಕೇಂದ್ರದ ಜನಗಣತಿ ಸಮಯದಲ್ಲಿ ಯಾವ ಮಾನದಂಡ ಬಳಸಲಾಗುತ್ತದೆ ಎಂಬುದನ್ನು ಕಾದು ನೋಡೋಣ. ಜನಗಣತಿ ಸಂದರ್ಭದಲ್ಲಿ ಜಾತಿ ಗಣತಿಯನ್ನು ಕೇಂದ್ರ ಸರಕಾರ ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಅಲ್ಲಿ ಜಾತಿಗಣತಿ ನಡೆದರೆ ರಾಷ್ಟ್ರಮಟ್ಟದಲ್ಲೇ ದತ್ತಾಂಶಗಳು ಸಂಗ್ರಹವಾಗುತ್ತವೆ. ಆಗ ಎಲ್ಲ ಗೊಂದಲಗಳು ಬಗೆ ಹರಿಯುತ್ತವೆ. ಹೀಗಾಗಿ ಜನಗಣತಿವರೆಗೂ ಕಾಯುವುದು ಉತ್ತಮ ಎಂದು ಮಾಜಿ ಸಂಸದ ಡಿ. ಕೆ. ಸುರೇಶ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಷ್ಟ್ರ ಮಟ್ಟದ ಸಮೀûಾ ವರದಿಗೆ ಅಧಿಕೃತ ಮಾನ್ಯತೆಯೂ ದೊರೆಯಲಿದೆ. ರಾಜ್ಯಮಟ್ಟದಲ್ಲಿ ನಡೆದಿರುವ ಸಮೀಕ್ಷೆಗೆ ಮಾನ್ಯತೆ ಪಡೆಯಲು ಹೋರಾಟ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಎಚ್ಚರಿಕೆಯ ಹೆಜ್ಜೆ ಇಡಬೇಕು. ರಾಷ್ಟ್ರಮಟ್ಟದ ಗಣತಿ ಒಂದು ವರ್ಷದಲ್ಲಿ ಮುಗಿಯುವ ಸಾಧ್ಯತೆ ಇದ್ದು ಅಲ್ಲಿಯವರೆಗೂ ಕಾದು ನೋಡುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಈ ಅವಧಿಯ 5 ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ಇರಬೇಕು ಎಂಬುದು ನಮ್ಮ ಬಯಕೆ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದದೊಂದಿಗೆ ಸಿದ್ದರಾಮಯ್ಯ ಅವರು ಎಲ್ಲ ಆರೋಪಗಳಿಂದ ಮುಕ್ತರಾಗುತ್ತಾರೆ. ಅವರನ್ನು ಯಾರೂ ಅÇÉಾಡಿಸಲು ಆಗುವುದಿಲ್ಲ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next