Advertisement

ಮದುವೆಯಿಂದ ಜಾತಿ ಬದಲಾಗದು: ಸು.ಕೋ.

06:05 AM Jan 21, 2018 | Team Udayavani |

ಹೊಸದಿಲ್ಲಿ: ವ್ಯಕ್ತಿಯೊಬ್ಬ ಜನಿಸಿದ ಕೂಡಲೇ ನಿರ್ಧಾರವಾಗುವ ತನ್ನ ಜಾತಿಯನ್ನು, ಮುಂದೆ ತನ್ನ ಮದುವೆಯ ಆಧಾರದಲ್ಲಿ ಬದಲಾಯಿಸಿಕೊಳ್ಳುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ.

Advertisement

ಮೇಲ್ಜಾತಿಗೆ ಸೇರಿದ್ದ ಮಹಿಳೆಯೊಬ್ಬರು ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬನನ್ನು ಮದುವೆಯಾದ ಹಿನ್ನೆಲೆಯಲ್ಲಿ ತಾನೂ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದು, ಅದರ ಆಧಾರದ ಮೇಲೆ ಮೀಸಲಾತಿಯ ಸೌಲಭ್ಯ ಪಡೆದ ಪ್ರಕರಣವೊಂದರಲ್ಲಿ ನ್ಯಾ| ಅರುಣ್‌ ಮಿಶ್ರಾ ಹಾಗೂ ನ್ಯಾ| ಎಂ.ಎಂ. ಶಾಂತನಗೌಡರ್‌ ನ್ಯಾಯ ಪೀಠ ಈ ತೀರ್ಪು ನೀಡಿದೆ. ಜಾತಿ ಹುಟ್ಟುವಾಗಲೇ ನಿರ್ಧಾರ ವಾಗುವಂಥದ್ದು. ವಿವಾಹ ವಾದೊಡನೆ ಅದು ಬದಲಾಗು ವುದಿಲ್ಲ ಎಂದು ಪೀಠ ಹೇಳಿದೆ.

ಏನಿದು ಪ್ರಕರಣ?: ಮೇಲ್ಜಾತಿಗೆ ಸೇರಿದ ಪಂಜಾಬ್‌ನ ಮಹಿಳೆಯೊಬ್ಬರು, ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದರು. ಅನಂತರ, 1995ರಲ್ಲಿ ತನ್ನ ಶೈಕ್ಷಣಿಕ ಅರ್ಹತೆ ಮೂಲಕ ಪಠಾಣ್‌ಕೋಟ್‌ನ ಕೇಂದ್ರೀಯ ವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಕಿ ಹುದ್ದೆಗೆ ನೇಮಕಗೊಂಡಿದ್ದರು. ಆಮೇಲೆ, ತಾನು ಪರಿಶಿಷ್ಟ ವ್ಯಕ್ತಿಯನ್ನು ವಿವಾಹವಾದ ಕಾರಣ ನೀಡಿ, 1991ರಲ್ಲಿ ಜಿಲ್ಲಾಡಳಿತದಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದ ಮಹಿಳೆ, ಸರಕಾರಿ ಸೇವೆಗಳಲ್ಲಿ ಆ ಜಾತಿಗೆ ಸಿಗುವ ಭಡ್ತಿ, ಮುಂತಾದ ಸವಲತ್ತುಗಳನ್ನು ಬಳಸಿಕೊಂಡರಲ್ಲದೆ, ಕೆಲವು ವರ್ಷಗಳ ಹಿಂದೆ ಶಾಲೆಯ ಉಪಪ್ರಾಂಶು ಪಾಲರಾಗಿ ನೇಮಕವಾದರು. ಹಾಗಾಗಿ, ಇದರ ವಿರುದ್ಧ ದೂರು ದಾಖಲಾಗಿತ್ತು.

ದೂರಿನ ಆಧಾರದಲ್ಲಿ ತನಿಖೆ ನಡೆದು, ಜಿಲ್ಲಾಡಳಿತ 2015ರಲ್ಲಿ ಅವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿತ್ತು. ಅದರ ಬೆನ್ನಲ್ಲೇ, ಕೇಂದ್ರೀಯ ವಿದ್ಯಾಲಯವು ಅವರನ್ನು ಸೇವೆ ಯಿಂದ ವಜಾಗೊಳಿಸಿತು. ಇದರ ವಿರುದ್ಧ, ಅಲಹಾಬಾದ್‌ ಹೈಕೋರ್ಟ್‌ ಮೆಟ್ಟಿಲೇರಿದ್ದ ಆ ಮಹಿಳೆಗೆ ನಿರಾಸೆಯಾಗಿದ್ದರಿಂದಾಗಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next