ಹೊಸದಿಲ್ಲಿ: ಭಾರತೀಯ ಭಾಷೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಾಹಿತಿ ಮತ್ತು ವಾರ್ತಾ ಪ್ರಸಾರ ಸಚಿವಾಲಯವು ವಿಶಿಷ್ಟ ಸುತ್ತೋಲೆ ಹೊರಡಿಸಿದ್ದು, ಎಲ್ಲ ಸ್ಯಾಟಲೈಟ್ ಟಿವಿ ಚಾನೆಲ್ಗಳು ಪಾತ್ರವರ್ಗ, ಕೃಪೆ ವಿವರ ಹಾಗೂ ಶೀರ್ಷಿಕೆಗಳನ್ನು ಹಿಂದಿ ಹಾಗೂ ಪ್ರಾಂತೀಯ ಭಾಷೆಗಳಲ್ಲಿ ಆದ್ಯತೆ ಮೇರೆಗೆ ಪ್ರದರ್ಶಿಸಬೇಕು ಎಂದು ಸೂಚಿಸಿದೆ.
ಇದರಿಂದ ಕನ್ನಡದ ಟಿವಿ ವಾಹಿನಿಗಳು ಕನ್ನಡದಲ್ಲೇ ಪಾತ್ರವರ್ಗ ವಿವರ ಮತ್ತು ಇತರ ವಿವರಗಳನ್ನು ನೀಡಬೇಕಾಗುತ್ತದೆ. ಹಲವು ಟಿವಿ ಚಾನೆಲ್ಗಳು ಶೀರ್ಷಿಕೆ ಹಾಗೂ ಪಾತ್ರ ವಿವರಗಳನ್ನು ಕೇವಲ ಇಂಗ್ಲಿಷ್‌ನಲ್ಲಿ ನೀಡುತ್ತಿವೆ. ಇದರಿಂದ ಇಂಗ್ಲಿಷ್ ಬಾರದ ವೀಕ್ಷಕರಿಗೆ ತಾರತಮ್ಯ ಎಸಗಿದಂತಾಗುತ್ತದೆ. ದೇಶದ ಟಿವಿ ವೀಕ್ಷಕರ ಸಂಖ್ಯೆಯನ್ನು ತಲುಪುವುದು ಹಾಗೂ ಹೆಚ್ಚಿಸುವ ನಿಟ್ಟಿನಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ವಾರ್ತಾ ಪ್ರಸಾರ ಇಲಾಖೆ ತಿಳಿಸಿದೆ.
Advertisement