Advertisement
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ್ದ ವರದಿಯ ಬಗ್ಗೆ ಇರುವ ಆಕ್ಷೇಪಗಳು, ಸ್ವಪಕ್ಷೀಯರ ವಿರೋಧ, ಹಲವು ಸಮುದಾಯಗಳ ಸಿಟ್ಟು ಈ ಕ್ಷಿಪ್ರ ಬೆಳವಣಿಗೆಗೆ ಕಾರಣ ಎನ್ನಲಾಗುತ್ತಿದ್ದು, ಇದರೊಂದಿಗೆ ಹೈಕಮಾಂಡ್ ಕೂಡ ಜಾತಿ ಗಣತಿ ವರದಿ ಮಂಡನೆಗೆ ತಡೆಯೊಡ್ಡಿದೆ ಎನ್ನಲಾಗಿದೆ.ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಭೆಯ ಕಾರ್ಯಸೂಚಿಯಲ್ಲಿ “ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿಯ ಮುಚ್ಚಿದ ಲಕೋಟೆಯನ್ನು ತೆರೆಯುವ ಬಗ್ಗೆ’ ಎನ್ನುವ ಅಂಶವನ್ನು ಕೊನೆಯಲ್ಲಿ ಸೇರಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮೊದಲೇ ದಿಲ್ಲಿಗೆ ಹೋದ ಡಿಸಿಎಂ ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ. ಶಿಸ್ತಿನ ಪಾಠದ ಅನಂತರವೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವರಿಷ್ಠರ ಸಮ್ಮುಖದಲ್ಲೇ ನಡೆದ ಸಚಿವರ ಜಟಾಪಟಿ, ಅದರ ಬೆನ್ನಲ್ಲೇ ಸಿಎಂ ಆಪ್ತ ಸಚಿವರು ಹಬ್ಬದ ಶುಭಾಶಯ ಕೋರುವ ನೆಪದಲ್ಲಿ ಭೇಟಿಯಾಗಿದ್ದು, ಡಿನ್ನರ್ ಸಭೆ ಕರೆದವರು ಪೂರ್ವಭಾವಿ ಸಭೆಗೆ ಗೈರು ಹಾಜರಾಗಿದ್ದು ಸೇರಿ ಹಲವು ವಿಷಯಗಳ ಬಗ್ಗೆ ವರಿಷ್ಠರ ಗಮನವನ್ನು ಡಿಸಿಎಂ ಸೆಳೆದರು ಎನ್ನಲಾಗಿದೆ.
Related Articles
ಈ ನಡುವೆ ದಿಲ್ಲಿಯಲ್ಲಿ ಬುಧವಾರ ಆಯೋಜಿಸಿದ್ದ ಇಂದಿರಾ ಭವನ ಉದ್ಘಾಟನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತೆರಳಿದರು. ಅದೇ ವಿಮಾನದಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಇದ್ದು, ಆಗ ಜಾತಿ ಗಣತಿ ವಿಚಾರವನ್ನು ಚರ್ಚಿಸಿರಬಹುದು. ಅದೇ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದು, ಸದ್ಯಕ್ಕೆ ಬೇಡ ಎನ್ನುವ ಸಂದೇಶವನ್ನು ಸಿಎಂಗೆ ರವಾನಿಸಿರಬಹುದು ಎಂಬ ಚರ್ಚೆ ಕಾಂಗ್ರೆಸ್ ಅಂಗಳದಲ್ಲಿ ನಡೆಯುತ್ತಿದೆ.
ಕುರ್ಚಿ ಕಂಟಕ ಬಂದಾಗ ಜಾತಿಗಣತಿ ನೆನಪು
ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ಸಿಎಂ ಕುರ್ಚಿಗೆ ಕಂಟಕ ಬಂದಾಗಲೆಲ್ಲ “ಸಂಕಟ ಬಂದಾಗ ವೆಂಕಟರಮಣ’ ಎಂಬಂತೆ ಜಾತಿ ಗಣತಿ ನೆನಪು ಮಾಡಿಕೊಳ್ಳುತ್ತಾರೆ. ಬಿಜೆಪಿಯ ಮೂಲ ಸಿದ್ಧಾಂತದಲ್ಲೇ ಅಂತ್ಯೋದಯದ ಪರಿಕಲ್ಪನೆ ಇದೆ. ಹೀಗಾಗಿ ಬಿಜೆಪಿಯು ಜಾತಿ ಗಣತಿ ವರದಿ ಮಂಡನೆಗೆ ವಿರುದ್ಧವಿಲ್ಲ. ಆದರೆ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ವಿರೋಧಿಸುತ್ತೇವೆ ಎಂದಿದ್ದಾರೆ. ಅದೇ ರೀತಿ ಛಲವಾದಿ ನಾರಾಯಣಸ್ವಾಮಿ ಕೂಡ ಗೋಲ್‌ಪೋಸ್ಟ್ ಬದಲಿಸುವ ಉದ್ದೇಶದಿಂದ ಜಾತಿಗಣತಿ ಚರ್ಚೆಯನ್ನು ಸರಕಾರ ಮುನ್ನೆಲೆಗೆ ತಂದಿದೆ ಎಂದಿದ್ದಾರೆ.
Advertisement
ಇಂತಹ ಅನೇಕ ವರದಿಗಳಿವೆ. ಜಾರಿಗೆ ತರಲು ಸಮಯ ಇದೆ. ತರಲೇಬೇಕು ಎಂದೇನೂ ಇಲ್ಲ. ನಾವು ಒಪ್ಪಿಯೂ ಇಲ್ಲ, ತಿರಸ್ಕರಿಸಿಯೂ ಇಲ್ಲ. ಸಮುದಾಯ ಅಂತ ಬಂದಾಗ ನೋಡಬೇಕು. ಸಮುದಾಯ ಬಿಟ್ಟು ನಾವಿಲ್ಲ. ಅಂತಹ ಸಮಯ ಬಂದಾಗ ನಿಲ್ಲಬೇಕು. ಅದೇ ಕೆಲಸ ಡಿಕೆಶಿ ಕೂಡ ಮಾಡಿದ್ದಾರೆ.– ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ ಮುಚ್ಚಿದ ಲಕೋಟೆಯಲ್ಲಿ ಕೊಟ್ಟಿರುವ ವರದಿಯನ್ನು ಸಂಪುಟ ಸಭೆಯಲ್ಲೇ ತೆರೆಯಬೇಕಲ್ಲವೇ? ಅದಕ್ಕಾಗಿ ತೆರಿಗೆ ಹಣ 160 ಕೋಟಿ ರೂ. ಖರ್ಚು ಮಾಡಿದ್ದೇವೆ. ಕ್ರಮ ತೆಗೆದುಕೊಳ್ಳುವುದು ಬಿಡುವುದು ಅನಂತರ. – ಡಾ| ಜಿ.ಪರಮೇಶ್ವರ್, ಗೃಹ ಸಚಿವ ವರದಿ ಮಂಡಿಸುವ ಲೆಕ್ಕಚಾರವಿತ್ತು:
ಹಲವು ವಿರೋಧಗಳ ನಡುವೆಯೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಜಾತಿಗಣತಿ ವರದಿಯ ಸ್ವೀಕರಿಸಿದ್ದ ರಾಜ್ಯ ಸರಕಾರವು ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆಯಾಗಲಿದೆ ಎಂದು ಹೇಳಲಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಅಂದಿನ ಕಾಂಗ್ರೆಸ್ ಸರಕಾರ ಕಾಂತರಾಜು ಅಧ್ಯಕ್ಷತೆಯಲ್ಲಿ 2015ರಲ್ಲಿ ಆಯೋಗ ರಚಿಸಿತ್ತು. ಸುಮಾರು 169 ಕೋಟಿ ರೂ. ವ್ಯಯಿಸಿ 1,351 ಜಾತಿ, ಉಪಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಬಗ್ಗೆ ಅಧ್ಯಯನ ನಡೆಸಿತ್ತು. ಆದರೆ ವರದಿ ಸಿದ್ಧಗೊಳ್ಳುವುದ ರೊಳಗಾಗಿಯೇ ಸಿದ್ದರಾಮಯ್ಯ ಸರಕಾರದ ಅವಧಿ ಪೂರ್ಣಗೊಂಡು ಬೇರೆ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. 2020ರಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಆಯೋಗ ರಚಿಸಿ, ಆಯೋಗದ ಅವಧಿ ವಿಸ್ತರಣೆ ಮಾಡಿ ಕೊನೆಗೂ 2024ರಲ್ಲಿ ವರದಿಯನ್ನು ಸರಕಾರ ಪಡೆದುಕೊಂಡಿತ್ತು. ಮೋಹನ್ ಭಾಗವತ್ ಹೇಳಿಕೆ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ:
ಅಯೋಧ್ಯೆಯ ರಾಮಮಂದಿರ ಪ್ರಾರಂಭವಾದ ದಿನ ದೇಶಕ್ಕೆ ನಿಜ ಅರ್ಥದಲ್ಲಿ ಸ್ವಾತಂತ್ರ್ಯ ಲಭಿಸಿದೆ ಎಂಬ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಹೋರಾಟಗಾರರಿಗೆ ಮಾಡಿದ ಅವಮಾನ. ಈ ಬಗ್ಗೆ ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದ ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು ಎಂದು ಆರೋಪಿಸಿದರು. ಬಾಕಿ ಪಾವತಿಗೆ ಕ್ರಮ:
ಕಿಯೋನಿಕ್ಸ್ ಅಸೋಸಿಯೇಷನ್ ಅವರು ಬಾಕಿ ಇರುವ ಬಿಲ್ಲುಗಳು ಪಾವತಿಯಾಗದಿರುವ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದವರು ದೊಡ್ಡ ಮೊತ್ತದ ಬಿಲ್ಲುಗಳನ್ನು ಪಾವತಿ ಮಾಡದೇ ಬಾಕಿ ಉಳಿಸಿದ್ದಾರೆ. ಈ ಬಿಲ್ಲುಗಳನ್ನು ಹಂತ ಹಂತವಾಗಿ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.