Advertisement
ಆಯುರ್ವೇದ ವೈದ್ಯರು ಭಾಗಿಚೆನ್ನೈ, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಬಿಜಾಪುರ, ಹಾಸನ ಮೊದಲಾದ ಕಡೆಗಳಿಂದ ಬಂದಿರುವ ಆಯುರ್ವೇದ ವೈದ್ಯರು ವಿಚಾರ ಸಂಕಿರಣದ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಹುಟ್ಟಿದಾರಭ್ಯ ಕಾಯಿಲೆಗಳ ಬಗ್ಗೆ ಡಾ| ತನ್ಮಯ ಗೋಸ್ವಾಮಿಯವರು ತಾನೇ ಬರೆದ ಕಾಸ್ಮೋ ಥೆರಪಿ ಪುಸ್ತಕದ ಮೂಲಕ ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದಾರೆ. ಸೋಮವಾರ ಸಂಜೆ ಎಲ್ಲ ವಿಷಯಗಳ ಬಗ್ಗೆ ಚರ್ಚಾಕೂಟ ಇದೆ. ಪಾಲ್ಗೊಂಡವರಿಗೆ ಮುಂದಿನ ವರ್ಷ ಆನ್ ಲೈನ್ ಶಿಕ್ಷಣವೂ ಕೊಡಲಾಗುತ್ತದೆ.
ಗ್ರಹಗಳಿಗೂ ಜೀವಿಗಳಿಗೂ ಅವಿನಾಭಾವ ಸಂಬಂಧವಿದೆ. ಸೂರ್ಯ, ಚಂದ್ರ, ಬುಧ, ಗುರು, ಶುಕ್ರ, ಶನಿ, ಕುಜ ಮೊದಲಾದ ಗ್ರಹಗಳ ಸ್ಥಿತಿಗಳಿಂದ ಮನುಷ್ಯನ ದೇಹಕ್ಕೆ ರೋಗ ಬಾಧಿಸುವುದಿದೆ. ಜಾತಕ, ನಕ್ಷತ್ರ ನೋಡಿಕೊಂಡು ದೇಹಕ್ಕೆ ಬಂದಿರುವ ಕಾಯಿಲೆಗಳನ್ನು ಆಯುರ್ವೇದ ಚಿಕಿತ್ಸೆಯಿಂದ ಗುಣಪಡಿಸಬಹುದು. ಗ್ರಹದೋಷವನ್ನು ಅರ್ಥಮಾಡಿಕೊಂಡು ಆಯುರ್ವೇದ ಚಿಕಿತ್ಸೆಯನ್ನು ರೋಗಿಯ ನಕ್ಷತ್ರಕ್ಕೆ ಅನುಗುಣವಾಗಿ ಸರಿಯಾದ ಸಮಯಕ್ಕೆ ಕೊಡಬೇಕಾಗುತ್ತದೆ. ಉದಾ: ಸೂರ್ಯನಿಂದ ಪಿತ್ಥ, ಶನಿಯಿಂದ ವಾತ ದೋಷಗಳು ಮನುಷ್ಯರನ್ನು ಆವರಿಸುತ್ತದೆ. ಇಂತಹ ಸನ್ನಿವೇಶದಲ್ಲಿ ದೇಹಕ್ಕೆ ಏನು, ಹೇಗೆ ಕೊಡಬೇಕು? ಆಹಾರ ಕ್ರಮದಲ್ಲಿ ಯಾವುದನ್ನು ತಿನ್ನಬೇಕು? ಯಾವುದನ್ನು ತಿನ್ನಬಾರದು ಎನ್ನುವುದನ್ನು ಹೇಳಿಕೊಡಲಾಗುತ್ತದೆ. ಮಾನಸಿಕ ತೊಂದರೆ, ಒತ್ತಡ ನಿಯಂತ್ರಣಕ್ಕೂ ಚಿಕಿತ್ಸೆ ಇದೆ ಎಂದು ಡಾ| ತನ್ಮಯ ಗೋಸ್ವಾಮಿ ಹೇಳುತ್ತಾರೆ. ಆಧುನಿಕ ಖಗೋಳ ವಿಜ್ಞಾನದ ಬಗೆಗೆ ಡಾ|ಎ.ಪಿ.ಭಟ್, ಪ್ರಾಚೀನ ಜೋತಿಷ ಶಾಸ್ತ್ರದ ಕುರಿತು ವಿಶ್ವೇಶ್ವರ ಭಟ್, ಸುಬ್ರಹ್ಮಣ್ಯ ಭಟ್ ಇತರ ಸಂಪನ್ಮೂಲ ವ್ಯಕ್ತಿಗಳು ಮಾತನಾಡಿದರು. ದೇಹ ದಂಡಿಸಿದರೂ ಬೆಂಬಿಡದ ಕಾಯಿಲೆ
ಯೋಗ, ವ್ಯಾಯಾಮ, ಆಟ, ಓಟ ಹೀಗೆ ಎಷ್ಟೇ ದೇಹ ದಂಡಿಸಿದರೂ ಕೆಲ ಹುಟ್ಟಿದಾರಭ್ಯ ಕಾಯಿಲೆಗಳು ಬಂದು ಬಿಡುತ್ತದೆ. ವಿಪರೀತ ಒತ್ತಡ, ಆಧುನಿಕ ಜೀವನ ಶೈಲಿಯೂ ಹಲವಾರು ಕಾಯಿಲೆಗಳಿಗೆ ಮೂಲ ಕಾರಣವಾಗುತ್ತಿದೆ. ಆಯುರ್ವೇದದಿಂದ ಇದನ್ನು ಹೋಗಲಾಡಿಸಬಹುದು. ಜೋತಿಷ ಮತ್ತು ಆಯುರ್ವೇದ ಒಟ್ಟೊಟ್ಟಿಗೇ ಇರಬೇಕು. ಇಲ್ಲಿ ಜೋತಿಷ ಗೊತ್ತಿದ್ದವರಿಗೆ ಆಯುರ್ವೇದ ಗೊತ್ತಿಲ್ಲ. ಆಯುರ್ವೇದ ಪಂಡಿತರಿಗೆ ಜೋತಿಷ ತಿಳಿದಿಲ್ಲ. ಅನುವಂಶೀಯತೆ, ಆಹಾರದ ತಪ್ಪುಗಳಿಂದ ಬರುವ ಕಾಯಿಲೆಗಳನ್ನು ಕಾಸ್ಮೋ ಥೆರಪಿಯಿಂದ ಹೋಗಲಾಡಿಸಬಹುದು. ಹೇಗೆ ಆಕ್ಯುಪೇಶನಲ್ ಥೆರಪಿ, ರೇಡಿಯೋಥೆರಪಿ, ಫಿಸಿಯೋಥೆರಪಿ, ಕೀಮೋಥೆರಪಿ ಇರುವ ಹಾಗೆಯೇ ಕಾಸ್ಮೋ ಥೆರಪಿಯೂ ಒಂದಾಗಿದೆ.
– ಡಾ| ತನ್ಮಯ ಗೋಸ್ವಾಮಿ