Advertisement

ನಗದುರಹಿತ ಚಿಕಿತ್ಸೆ ಪಡೆಯುವುದು ಹೇಗೆ? ಕೊರೊನಾ ಸೋಂಕಿತರ ಸಮಸ್ಯೆಗೆ ಕೆಲವೊಂದು ಸಲಹೆ

11:55 PM Apr 30, 2021 | Team Udayavani |

ಆರೋಗ್ಯ ವಿಮೆ ಹೊಂದಿರುವ ಕೊರೊನಾ ರೋಗಿಗಳಿಗೆ ನಗದು ರಹಿತ ಚಿಕಿತ್ಸೆಗೆ ಅವಕಾಶವಿದ್ದರೂ ಕೆಲವು ಆಸ್ಪತ್ರೆಗಳು ಆ ಸೌಲಭ್ಯ ಉಪಯೋಗಿಸಿ­ಕೊಳ್ಳಲು ಅವಕಾಶ ನೀಡುತ್ತಿಲ್ಲ. ಜತೆಗೆ, ಪ್ರತಿಯೊಂದು ಚಿಕಿತ್ಸೆಗೂ ದುಬಾರಿ ಶುಲ್ಕ ವಿಧಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಕೇಂದ್ರ ಹಣಕಾಸು ಇಲಾಖೆ, ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಕ್ಯಾಶ್‌ಲೆಸ್‌ ಸೇವೆ ನೀಡಬೇಕೆಂದು ಸೂಚಿಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಇಂಥ ಪರಿಸ್ಥಿತಿಗೆ ಸಿಲುಕಿದವರಿಗೆ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

Advertisement

ನಿಮಗೂ ತೊಂದರೆಯಾದರೆ ಹೀಗೆ ಮಾಡಿ…
1. ಟಿಪಿಎ ಜತೆ ಮಾತನಾಡಿ
ಯಾವುದೇ ಆಸ್ಪತ್ರೆಯಲ್ಲಿ ಇಂಥ ಪರಿಸ್ಥಿತಿ ಎದುರಾದರೆ ವಿಮಾ ಕಂಪೆನಿಯ ಥರ್ಡ್‌ ಪಾರ್ಟಿ ಅಸಿಸ್ಟೆಂಟ್‌ (ಟಿಪಿಎ) ಜತೆ ಮಾತನಾಡಿ, ಸಂಬಂಧಿಸಿದ ನೆಟ್‌ವರ್ಕ್‌ ಆಸ್ಪತ್ರೆಯಲ್ಲಿ ಕ್ಯಾಶ್‌ಲೆಸ್‌ ವ್ಯವಸ್ಥೆ ಪಡೆಯಬಹುದು.

2. ಮರುಪಾವತಿಗೆ ಆದ್ಯತೆ
ರೋಗಿಯ ಪರಿಸ್ಥಿತಿ ಗಂಭೀರವಾಗಿದ್ದಲ್ಲಿ ಹಣ ಪಾವತಿಸಿ ಚಿಕಿತ್ಸೆ ಸಿಗುವಂತೆ ಮಾಡಬೇಕು. ಅನಂತರ ಹಣ ಮರುಪಾವತಿಗೆ ಮನವಿ ಸಲ್ಲಿಸಬಹುದು. ಐಆರ್‌ಡಿಎಐ ಕೂಡ ಇದನ್ನೇ ಹೇಳಿದೆ.

3.ಮರುಪಾವತಿ ಸಾಧ್ಯ
ನೆಟ್‌ವರ್ಕ್‌ ಆಸ್ಪತ್ರೆಯಲ್ಲಿ ಕ್ಯಾಶ್‌ಲೆಸ್‌ ಚಿಕಿತ್ಸೆ ಸಿಗದೇ ಇದ್ದಾಗ, ತುರ್ತು ಸಂದರ್ಭ­ಗಳಲ್ಲಿ ನೆಟ್‌ವರ್ಕ್‌ನಲ್ಲಿ ಇಲ್ಲದ ಆಸ್ಪತ್ರೆಗಳಲ್ಲಿ ರೋಗಿಯನ್ನು ದಾಖಲಿಸಬಹುದು. ಅನಂತರ, ಚಿಕಿತ್ಸೆಯ ಹಣದ ಮರುಪಾವತಿಗೆ ಅರ್ಜಿ ಸಲ್ಲಿಸಬಹುದು.

4.ವಿಮಾ ಕಂಪೆನಿಗಳಿಗೆ ಎಚ್ಚರಿಕೆ
ಕೊರೊನಾ ರೋಗಿಗಳಿಗೆ ಎಲ್ಲ ನೆಟ್‌ವರ್ಕ್‌ ಆಸ್ಪತ್ರೆಗಳಲ್ಲೂ ಕಿರಿಕಿರಿಯಿಲ್ಲದ ಚಿಕಿತ್ಸೆ ಸಿಗುವಂತಾಗಬೇಕು. ಇಲ್ಲವಾದರೆ ಕ್ರಮ ಜರಗಿಸ­ ಬೇಕಾದೀತು ಎಂದು ಈಗಾಗಲೇ ವಿಮಾ ಕಂಪೆನಿ ಗಳಿಗೆ ಐಆರ್‌ಡಿಎಐ ಎಚ್ಚರಿಸಿದೆ. ಆದಾಗ್ಯೂ ಕಿರಿಕಿರಿಯಾದರೆ ರೋಗಿಯ ಕಡೆಯ ವರು ಸ್ಥಳೀಯ ಆಡಳಿತಕ್ಕೆ ದೂರು ಸಲ್ಲಿಸಬಹುದು.

Advertisement

5.ಪ್ರಾಧಿಕಾರಕ್ಕೂ ಮೊರೆ
ಸ್ಥಳೀಯ ಮಟ್ಟದಲ್ಲಿಯೂ ರೋಗಿಗಳ ಸಮಸ್ಯೆ ಇತ್ಯರ್ಥ­ವಾಗ­ದಿದ್ದರೆ, ಪ್ರಾಧಿಕಾರಕ್ಕೂ ದೂರು ಸಲ್ಲಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ದೂರು ನೋಂದಣಿ ಹೇಗೆ?
– complaints@irdai.gov.in ಎಂಬ ಇ-ಮೇಲ್‌ ಐಡಿಗೆ ಅಥವಾ 155255 ಅಥವಾ 1800 4254 732 ಎಂಬ ಶುಲ್ಕ ರಹಿತ ಸಂಖ್ಯೆಗಳಿಗೆ ಕರೆ ಮಾಡಿ ದೂರನ್ನು ದಾಖಲಿಸಬಹುದು.
– ಇಲ್ಲವಾದಲ್ಲಿ, https://igms.irda.gov.in/ ಜಾಲತಾಣದಲ್ಲಿ ದೂರುದಾರರು ತಮ್ಮ ಅಧಿಕೃತ ಮಾಹಿತಿಗಳನ್ನು ನಮೂದಿಸುವ ಮೂಲಕ ತಮ್ಮನ್ನು ತಾವು ನೋಂದಾಯಿಸಿ, ಅನಂತರ ದೂರು ದಾಖಲಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next