Advertisement

ಉಡುಪಿ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ನಗದು ರಹಿತ ವಹಿವಾಟು ನಡೆಸಲು ಜಿ.ಪಂ. ನಿರ್ದೇಶನ

03:32 PM Oct 23, 2022 | Team Udayavani |

ಉಡುಪಿ : ಹಣಕಾಸಿನ ಅವ್ಯವಹಾರ ತಪ್ಪಿಸಲು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ನಗದು ರಹಿತ ವಹಿವಾಟು ನಡೆಸಲು ಜಿ.ಪಂ. ನಿರ್ದೇಶನ ನೀಡಿದೆ.

Advertisement

ವಿವಿಧ ರೀತಿಯ ತೆರಿಗೆ, ನೀರಿನ ಶುಲ್ಕ ಪಾವತಿ ಸೇರಿದಂತೆ ನಾನಾ ಸೇವೆಗಳಿಗೆ ಪ್ರತೀ ದಿನ ಸಾರ್ವಜನಿಕರು ಗ್ರಾ.ಪಂ.ಗೆ ಹೋಗುತ್ತಾರೆ. ಸದ್ಯ ಬಹುತೇಕ ಗ್ರಾ.ಪಂ.ಗಳಲ್ಲಿ ಕಾಗದರಲ್ಲಿ ಬರದೇ ರಶೀದಿ ನೀಡುವ ವ್ಯವಸ್ಥೆಯಿದೆ. ಇದರಿಂದ ಹಣಕಾಸಿನ ಅವ್ಯವಹಾರ ನಡೆಯುವ ಸಾಧ್ಯತೆಯಿದೆ. ಅಲ್ಲದೆ ಶುಲ್ಕ ಪಡೆದು ಬಿಲ್‌ ನೀಡದೆ ಇರುವ ನಿದರ್ಶನವೂ ಇರುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲ ಗ್ರಾ.ಪಂ.ಗಳಲ್ಲಿ ನಗದು ರಹಿತ ವಹಿವಾಟಿಗೆ ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ 155 ಗ್ರಾ.ಪಂ.ಗಳಿದ್ದು, ಇದರಲ್ಲಿ ಕೆಲವು ಗ್ರಾ.ಪಂ.ಗಳು ತೀರಾ ಗ್ರಾಮೀಣ ಭಾಗದಲ್ಲಿವೆ. ಹೀಗಾಗಿ ನಗದು ರಹಿತ ವಹಿವಾಟು ಕಷ್ಟ ಎಂಬುದು ಜಿ.ಪಂ. ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್‌ ಸಹಯೋಗದಲ್ಲಿ ಗ್ರಾ.ಪಂ.ಗಳಿಗೆ ಸ್ವೆ„ಪಿಂಗ್‌ ಯಂತ್ರ, ಅಗತ್ಯ ಇರುವ ಸಾರ್ವಜನಿಕರಿಗೆ ಬ್ಯಾಂಕ್‌ ಅಕೌಂಟ್‌ ಮತ್ತು ಎಟಿಎಂ ಕಾರ್ಡ್‌ ಗಳನ್ನು ಒದಗಿಸುವ ಬಗ್ಗೆ ಮಾತುಕತೆ ನಡೆಸಿದ್ದೇವೆ. ಹೀಗಾಗಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಗದು ರಹಿತ ವಹಿವಾಟಿಗೆ ನಿರ್ದೇಶನ ಮಾಡಲಾಗಿದೆ ಎಂದು ಜಿ.ಪಂ. ಸಿಇಒ ಪ್ರಸನ್ನ ಎಚ್‌. ಮಾಹಿತಿ ನೀಡಿದರು.

ಇದನ್ನೂ ಓದಿ : ವಿಟ್ಲ: ಚಲಿಸುತ್ತಿದ್ದ ಆಮ್ನಿ ಕಾರು ಬೆಂಕಿಗಾಹುತಿ… ಪಾರಾದ ಕುಟುಂಬ

Advertisement

Udayavani is now on Telegram. Click here to join our channel and stay updated with the latest news.

Next