Advertisement

Cash-for-query; ಮೊಯಿತ್ರಾ ಮನವಿ ತಿರಸ್ಕಾರ:ನ.2 ರಂದು ಹಾಜರಾಗಿ ಎಂದ ನೈತಿಕ ಸಮಿತಿ

05:20 PM Oct 28, 2023 | Vishnudas Patil |

ಹೊಸದಿಲ್ಲಿ: ‘ಪ್ರಶ್ನೆಗಾಗಿ ನಗದು’ಆರೋಪಕ್ಕೆ ಸಂಬಂಧಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಮನವಿಯನ್ನು ಲೋಕಸಭೆಯ ನೈತಿಕ ಸಮಿತಿ ಶನಿವಾರ ತಿರಸ್ಕರಿಸಿದೆ. ನವೆಂಬರ್ 2 ರಂದು ಮೌಖಿಕ ಸಾಕ್ಷ್ಯಕ್ಕಾಗಿ ತನ್ನ ಮುಂದೆ ಹಾಜರಾಗುವಂತೆ ಸಮಿತಿಯು ಸೂಚಿಸಿದ್ದರಿಂದ ಎರಡು ದಿನಗಳ ವಿಸ್ತರಣೆಗೆ ಅವಕಾಶ ನೀಡಿ ನ 5 ರ ನಂತರ ತನ್ನನ್ನು ಕರೆಯುವಂತೆ ಸಂಸದೆ ಮನವಿ ಮಾಡಿದ್ದರು.

Advertisement

ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ನೇತೃತ್ವದ ಸಮಿತಿ, ಯಾವುದೇ ಕಾರಣಕ್ಕೂ ವಿಸ್ತರಣೆಗಾಗಿ ಯಾವುದೇ ಹೆಚ್ಚಿನ ವಿನಂತಿಯನ್ನು ಪರಿಗಣಿಸುವುದಿಲ್ಲ ಎಂದು ಮೊಯಿತ್ರಾಗೆ ತಿಳಿಸಿದೆ. ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಸಂಸತ್ತಿನ ಘನತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ತನ್ನ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ಸಮಿತಿಗೆ ಶುಕ್ರವಾರ ಪತ್ರ ಬರೆದಿದ್ದ ಮೊಯಿತ್ರಾ , ನಿಗದಿಯಂತೆ ಅಕ್ಟೋಬರ್ 31 ರಂದು ಹಾಜರಾಗಲು ಅಸಮರ್ಥತೆಯನ್ನು ವ್ಯಕ್ತಪಡಿಸಿ ನವೆಂಬರ್ 5 ರ ನಂತರ ಮಾತ್ರ ನಾನು ಲಭ್ಯವಿದ್ದೇನೆ ಎಂದು ಹೇಳಿದ್ದರು.

‘ಸಮಿತಿಯ ಮುಂದೆ ಹಾಜರಾಗಲು ದಿನಾಂಕವನ್ನು ವಿಸ್ತರಿಸಲು ನಿಮ್ಮ ಕೋರಿಕೆಯನ್ನು ನೈತಿಕ ಸಮಿತಿಯು ಒಪ್ಪಿಕೊಂಡಿದೆ, ಅಂದರೆ, ಸಮಿತಿಯ ಸಭೆಯನ್ನು ಮರು-ನಿಗದಿಪಡಿಸುವುದು. ಅದರ ಪ್ರಕಾರ, ಮೇಲಿನ ವಿಷಯದಲ್ಲಿ ನೀವು ವೈಯಕ್ತಿಕವಾಗಿ ನವೆಂಬರ್ 2 ರಂದು ಹಾಜರಿರಬೇಕೆಂದು ನಿರ್ಧರಿಸಲಾಗಿದೆ” ಎಂದು ಲೋಕಸಭೆಯ ಸಚಿವಾಲಯ ಶನಿವಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next