Advertisement

ಅಂಕಿತಾ ಭಂಡಾರಿ ಕೇಸ್ : ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ಅಂತ್ಯಸಂಸ್ಕಾರ

03:32 PM Sep 25, 2022 | Team Udayavani |

ಡೆಹರಾಡೂನ್ : ಅಂಕಿತಾ ಭಂಡಾರಿ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ನಂತರವೇ ಮಗಳ ಅಂತ್ಯಸಂಸ್ಕಾರ ಮಾಡುತ್ತೇನೆ ಎಂದು ಆಕೆಯ ತಂದೆ ವೀರೇಂದ್ರ ಸಿಂಗ್ ಭಂಡಾರಿ ಭಾನುವಾರ ತೀವ್ರ ನೋವು ಹೊರ ಹಾಕಿದ್ದಾರೆ.

Advertisement

ಎಸ್‌ಐಟಿ ರಚನೆ, ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಸಿಎಂ ಹೇಳಿದ್ದಾರೆ, ಆದರೆ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ನಂತರವೇ ಮಗಳ ಅಂತ್ಯಸಂಸ್ಕಾರ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಿವಾಜಿ ನಾಡಿನಲ್ಲಿ ಪಾಕಿಸ್ಥಾನ ಜಿಂದಾಬಾದ್ ಕೂಗುವ ಹಕ್ಕು ಯಾರಿಗೂ ಇಲ್ಲ: ಶಿಂಧೆ

ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ದೂರವಾಣಿ ಮೂಲಕ ವೀರೇಂದ್ರ ಸಿಂಗ್ ಭಂಡಾರಿ ಅವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಇದೇ ವೇಳೆ ರಾಜ್ಯ ಸರಕಾರ ಈ ಘೋರ ಅಪರಾಧದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದು, ಇಂತಹ ಘೋರ ಕೃತ್ಯ ಎಸಗುವ ಅಪರಾಧಿಗಳಿಗೆ ಮಾದರಿಯಾಗಲಿದೆ ಎಂದು ಭರವಸೆ ನೀಡಿದರು.

ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ನಂತರವೇ ಮಗಳ ಅಂತ್ಯಸಂಸ್ಕಾರ ಮಾಡುತ್ತೇನೆ. ಎಸ್‌ಐಟಿ ರಚನೆಯಾಗಿದ್ದು, ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಸಿಎಂ ಹೇಳಿದ್ದಾರೆ.

Advertisement

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಪ್ರಕ್ಷುಬ್ಧ ವಾತಾವರಣದ ಮಧ್ಯೆ, ಸ್ಥಳೀಯರು ಒಗ್ಗಟ್ಟು ಪ್ರದರ್ಶಿಸಿ ಭಾನುವಾರ ಸ್ಥಳೀಯ ಮಾರುಕಟ್ಟೆಯನ್ನು ಮುಚ್ಚಿದ್ದಾರೆ. . ಶ್ರೀನಗರದ ಗರ್ವಾಲ್‌ನಲ್ಲಿ ಅಂಕಿತಾ ಅವರ ಅಂತ್ಯಕ್ರಿಯೆಗೆ ಮುನ್ನ ಈ ಬೆಳವಣಿಗೆ ನಡೆದಿದೆ. ವ್ಯಾಪಾರಿಗಳು ತಮ್ಮ ವ್ಯಾಪಾರ ಸಂಸ್ಥೆಗಳನ್ನು ಸಂಪೂರ್ಣವಾಗಿ ಮುಚ್ಚಿ ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನಾಕಾರರು ಅಂಕಿತಾ ಭಂಡಾರಿ ಅವರ ಮೃತದೇಹವನ್ನು ಕೊಂಡೊಯ್ದ ಆಸ್ಪತ್ರೆಯ ಬಳಿಯ ಶವಾಗಾರದ ಮುಂದೆ ಬದರಿನಾಥ್-ಋಷಿಕೇಶ ಹೆದ್ದಾರಿಯನ್ನು ತಡೆದು ನ್ಯಾಯಕ್ಕಾಗಿ ಒತ್ತಾಯಿಸಿದರು. ಪೊಲೀಸರು ಟ್ರಾಫಿಕ್ ಜಾಮ್ ಅನ್ನು ತೆರವುಗೊಳಿಸಲು ಹರಸಾಹಸ ಪಟ್ಟರು.

ರಿಷಿಕೇಶ್ ನಲ್ಲಿರುವ ರೆಸಾರ್ಟ್ ನ ಸ್ವಾಗತಗಾರ್ತಿ ಅಂಕಿತಾ ಭಂಡಾರಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸೆ. ಸೆಪ್ಟೆಂಬರ್ 18 ರಿಂದ ನಾಪತ್ತೆಯಾದ ಬಳಿಕ ಸೆಪ್ಟೆಂಬರ್ 22 ರಂದು ಚಿಲ ಶಕ್ತಿ ನಾಲೆಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ರೆಸಾರ್ಟ್ ಮಾಲಕ ಹಾಗೂ ಇಬ್ಬರು ಸಿಬಂದಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಪೊಲೀಸರು ಮೂವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಮೂವರನ್ನು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಕರಣದಲ್ಲಿ ಆರೋಪಿಯಾಗಿರುವ ಪುಲ್ಕಿತ್ ಆರ್ಯ ತಂದೆ ಬಿಜೆಪಿ ಮುಖಂಡ ವಿನೋದ್ ಆರ್ಯ ಹಾಗೂ ಪುಲ್ಕಿತ್ ಸಹೋದರ ಅಂಕಿತ್ ಆರ್ಯನನ್ನು ಈಗಾಗಲೇ ಪಕ್ಷದಿಂದ ಉಚ್ಛಾಟಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next