Advertisement

ಆಳಂದ ಪ್ರಕರಣ: ಒಂದೇ ಎಫ್‌ಐಆರ್‌ನಲ್ಲಿ ಮೂರು ಸಾವಿರ ಆರೋಪಿಗಳ ಹೆಸರು ಉಲ್ಲೇಖ

11:15 AM Mar 04, 2022 | Team Udayavani |

ಆಳಂದ: ಒಂದು ಗುಂಪಿನ ವಾದದಂತೆ ಪಟ್ಟಣದ ಲಾಡ್ಲೆ ಮಶಾಕ್‌ ದರ್ಗಾದಲ್ಲಿನ ರಾಘವಚೈತನ್ಯ ಲಿಂಗದ ಪೂಜೆ ಮತ್ತು ಶುದ್ಧೀಕರಣ ವಿವಾದಕ್ಕೆ ಸಂಬಂಧಿಸಿದಂತೆ ಮಾ.1ರಂದು ಪಟ್ಟ ಣದಲ್ಲಿ ನಡೆದ ಗಲಭೆ ಪ್ರಕರಣದ ವಿಡಿಯೋ ಚಿತ್ರೀಕಣ ಆಧರಿಸಿ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

Advertisement

ಈಗಾಗಲೇ ಅಲ್ಪಸಂಖ್ಯಾತರ ಮೇಲೆ ದಾಖಲಾದ ಐದು ಪ್ರಕರಣಗಳ ಪೈಕಿ ಎಫ್‌ಐಆರ್‌ವೊಂದರಲ್ಲಿ 2500ರಿಂದ 3000 ಜನರಿದ್ದು, ಈ ಪೈಕಿ ಬುಧವಾರ 167 ಜನರನ್ನು ಬಂಧಿಸಲಾಗಿದೆ.

ಗುರುವಾರ ಮತ್ತೆ ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಮಾ.1ರಂದು ಶಿವ ಲಿಂಗದ ಪೂಜೆಗೆ ತೆರಳುವ ವೇಳೆ ಕೇಂದ್ರ ಸಚಿವ ಭಗವಂತ ಖೂಬಾ ಸೇರಿ ಬಿಜೆಪಿಯ ಹಲವು ಶಾಸಕರು, ಮುಖಂಡರು ಮತ್ತು ಇನ್ನಿತರ ಕಾರ್ಯಕರ್ತರಿಂದ 144 ಕಲಂ ನಿಷೇಧಾಜ್ಞೆ ಉಲ್ಲಂಘನೆ ಆರೋಪ ಕುರಿತು ಅಧಿಕಾರಿಗಳು ಕೈಗೊಂಡ ನಿರ್ಧಾರದ ಬಗ್ಗೆ ತಿಳಿದುಬಂದಿಲ್ಲ.

ಪೋಲಿಸರ ಮೇಲೆ ದಾಳಿ ಮಾಡಿ, ಕಲ್ಲುಗಳಿಂದ ಹೊಡೆದು ಜೀವಕ್ಕೆ ಹಾನಿಯುಂಟು ಮಾಡುವ ಸಂಚು ರೂಪಿಸಿದ್ದು ಕಂಡುಬಂದ ಹಿನ್ನೆಲೆಯಲ್ಲಿ ಕೆಲ ಮುಸ್ಲಿಂ ಮುಖಂಡರು, ಮಹಿಳೆಯರು, ಯುವಕರನ್ನು ಒಳಗೊಂಡು ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ವ್ಯಾಪಕ ಜಾಲಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next