Advertisement

ಕೋಳಿ ತ್ಯಾಜ್ಯ ಎಸೆದರೆ ಕೇಸ್‌: ತಹಶೀಲ್ದಾರ್‌ ಎಚ್ಚರಿಕೆ

02:05 AM Jun 30, 2019 | sudhir |

ಸುಳ್ಯ : ತಾಲೂಕಿನ ಬೆಂಗಮಲೆ, ಸಂಪಾಜೆ, ಜಾಲ್ಸೂರು, ಆನೆಗುಂಡಿ ಸಹಿತ ಹಲವು ಕಡೆಗಳಲ್ಲಿ ಕೋಳಿ ತ್ಯಾಜ್ಯ ಎಸೆಯುತ್ತಿರುವ ಪ್ರಕರಣ ನಿರಂತರ ನಡೆಯುತ್ತಿರುವ ಬಗ್ಗೆ ದೂರು ಬರುತ್ತಿದ್ದು, ಸ್ಥಳ ಪರಿಶೀಲನೆ ಸಂದರ್ಭ ಅದು ದೃಢಪಟ್ಟಿದೆ. ಈ ರೀತಿ ತ್ಯಾಜ್ಯ ಎಸೆಯುವವರು ಪತ್ತೆಯಾದಲ್ಲಿ ಅವರ ವಿರುದ್ಧ ಸೆಕ್ಷನ್‌ 133 ಅಡಿ ಪ್ರಕರಣ ದಾಖಲಿಸಲಾಗುವುದು ಮತ್ತು ತ್ಯಾಜ್ಯ ನೀಡಿದ ಅಂಗಡಿ ಪರವಾನಿಗೆ ಪತ್ರ ರದ್ದುಪಡಿಸಲಾಗುವುದು ಎಂದು ತಹಶೀಲ್ದಾರ್‌ ಕುಂಞಿ ಅಹ್ಮದ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಗರದ ಕೋಳಿ ಅಂಗಡಿ ಮಾಲಕರ ಸಭೆ ನಡೆದು, ಈ ಎಚ್ಚರಿಕೆ ನೀಡಲಾಯಿತು.

ಪರಿಸರ ಕಲುಷಿತಗೊಳಿಸುವ ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಕೆಲವೆಡೆ ಸಿಸಿ ಕೆಮರಾ ಅಳವಡಿಸಲಾಗಿದೆ. ತಪ್ಪಿತಸ್ಥರು ಯಾರೆನ್ನುವ ಸುಳಿವು ಸಿಗಲಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ಹೇಳಿದರು.

ವಲಯ ಅರಣ್ಯಾಧಿಕಾರಿ ಎನ್‌. ಮಂಜುನಾಥ, ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ, ನ.ಪಂ. ಎಂಜಿನಿಯರ್‌ ಶಿವಕುಮಾರ್‌, ಪಿಎಸ್‌ಐ ಹರೀಶ್‌ ಕುಮಾರ್‌ ಉಪಸ್ಥಿತರಿದ್ದರು. ಕೋಳಿ ಅಂಗಡಿ ಮಾಲಕರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next