Advertisement

ಸ್ಫೋಟ ಪ್ರಕರಣ: ಶಂಕಿತ ಉಗ್ರ ಶಾರಿಖ್ ಚಿಕ್ಕಮ್ಮ ಮಂಗಳೂರಿಗೆ

07:01 PM Nov 20, 2022 | Team Udayavani |

ಶಿವಮೊಗ್ಗ : ಮಂಗಳೂರಿನಲ್ಲಿ ಶನಿವಾರ ಆಟೋ ರಿಕ್ಷಾದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರ ಶಾರಿಖ್ ಚಿಕ್ಕಮ್ಮನನ್ನು ತೀರ್ಥಹಳ್ಳಿ ಪೊಲೀಸರು ತನಿಖೆಗಾಗಿ ಮಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.

Advertisement

ತಂದೆ, ತಾಯಿಯನ್ನು ಕಳೆದುಕೊಂಡ ಬಳಿಕ ಶಾರಿಕ್ ಚಿಕ್ಕಮ್ಮನೊಂದಿಗೆ(ತಂದೆಯ ಎರಡನೆ ಹೆಂಡತಿ) ವಾಸಿಸುತ್ತಿದ್ದ. ಚಿಕ್ಕಮ್ಮ ಹಾಗೂ ಮಗನೊಂದಿಗೆ ವಾಸಿಸುತ್ತಿದ್ದ. ತಿರ್ಥಹಳ್ಳಿ ಡಿವೈಎಸ್ ಪಿ ಶಾಂತವೀರ ಅವರು ಪೊಲೀಸರ ತಂಡದೊಂದಿಗೆ ಇದ್ದಾರೆ.ಇದೆಲ್ಲವನ್ನೂ ಗಮನಿಸಿದಾಗ ಬಾಂಬ್ ಬ್ಲಾಸ್ಟ್ ನಲ್ಲಿ ಗಾಯಗೊಂಡವನು ಶಾರಿಖ್ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ.

ನಟೋರಿಯಸ್ ಉಗ್ರ

ಯುವಜನತೆಯನ್ನು ಉಗ್ರ ಚಟುವಟಿಕೆಯತ್ತ ಸೆಳೆಯುವುದೇ ಶಾರಿಖ್ ನ ಕೆಲಸವಾಗಿದ್ದು, ತೀರ್ಥಹಳ್ಳಿ ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದ ಯುವಜನತೆಯೇ ಈತನ ಟಾರ್ಗೆಟ್ ಆಗಿದ್ದು, ಉನ್ನತ ವ್ಯಾಸಂಗ ಮಾಡುತ್ತಿರುವ ಯುವಕರನ್ನೇ‌ ಟಾರ್ಗೆಟ್ ಮಾಡಿ ಉಗ್ರ ಸಂಘಟನೆಗೆ ಸೇರಿಸುತಿದ್ದ ಎನ್ನಲಾಗಿದೆ.

ಶಾರಿಖ್ ಮೂಲತಃ ತೀರ್ಥಹಳ್ಳಿಯ ಬಟ್ಟೆ ವ್ಯಾಪಾರಿಯಾಗಿದ್ದು,ತಂದೆ ಹಾಸಿಮ್ ಅವರೊಂದಿಗೆ ಸೇರಿ ಬಟ್ಟೆ ವ್ಯಾಪಾರ ಮಾಡುತಿದ್ದ.2020ರಿಂದಲೇ ತಲೆಮರೆಸಿಕೊಂಡಿರುವ ಮತೀನ್ ಸಂಪರ್ಕ ದಿಂದ ಉಗ್ರ ಸಂಘಟನೆಯೊಂದಿಗೆ ಸೇರಿದ್ದು, ಕದ್ರಿ ಗೋಡೆ ಬರಹ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಹೊಂದಿದ್ದ. ನಂತರ ಕೆಲ ಕಾಲ ತೀರ್ಥಹಳ್ಳಿಯಲ್ಲಿ ತಂದೆಯೊಂದಿಗೆ ಬಟ್ಟೆ ಅಂಗಡಿ ನಡೆಸುತಿದ್ದ. ಇದೇ ಅವಧಿಯಲ್ಲಿ ಮಾಜ್ ಹಾಗೂ ಯಾಸಿನ್ ಜೊತೆ ಸೇರಿ ಬಾಂಬ್ ತಯಾರಿಕೆ ಆರಂಭಿಸಿದ್ದ. ಇದಲ್ಲದೆ ಶಿವಮೊಗ್ಗ ನಗರದ ಸಮೀಪದಲ್ಲೇ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಬ್ಲಾಸ್ಟ್ ಮಾಡಿ, ಪ್ರಾಯೋಗಿಕ‌ ಬಾಂಬ್ ಬ್ಲಾಸ್ಟ್ ನಲ್ಲಿ ಯಶಸ್ವಿಯಾಗಿದ್ದರು.

Advertisement

ಇದೇ ವೇಳೆ‌ ಶಿವಮೊಗ್ಗದಲ್ಲಿ ನಡೆದ ಸಾವರ್ಕರ್ ವಿಷಯದ ಗಲಾಟೆಯಲ್ಲಿ ಪ್ರೇಮ್ ಸಿಂಗ್ ಪ್ರಕರಣ ನಡೆದಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಬಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಜಬಿ ಪೊಲೀಸ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಆತ ಉಗ್ರರೊಂದಿಗೆ ಸಂಪರ್ಕ ಹೊಂದಿರುವುದು ದೃಢಪಟ್ಟಿತ್ತು.ಜೊತೆಗೆ ಜಬಿ ಶಂಕಿತ ಉಗ್ರರಾದ ಮಾಜ್, ಯಾಸಿನ್ ಹಾಗೂ ಶಾರಿಖ್ ಜೊತೆಗೆ ನಿರಂತರ ಸಂಪರ್ಕ ಹೊಂದಿರುವುದು ದೃಢಪಟ್ಟಿತ್ತು.

ಪೊಲೀಸರಿಗೆ ತಮ್ಮ ವಿಷಯ ತಿಳಿಯಿತು ಯಾವುದೇ ಕ್ಷಣದಲ್ಲಾದರೂ ಪೊಲೀಸರು ತನ್ನ ಮನೆಯ ಬಾಗಿಲು ತಟ್ಟಬಹುದು ಎಂದು ಶಾರಿಖ್ ಅರಿತಿದ್ದ. ಹೀಗಾಗಿ ನಾನು ಬಟ್ಟೆ ಖರೀದಿಗಾಗಿ ದೆಹಲಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿ ನಾಪತ್ತೆಯಾಗಿದ್ದ.ಆದರೆ ಶಂಕಿತ ಉಗ್ರರಾದ ಮಾಜ್ ಹಾಗೂ ಯಾಸಿನ್ ಪೊಲೀಸರ ಬಲೆಗೆ ಬಿದ್ದಿದ್ದರು.ನಾಪತ್ತೆಯಾಗಿದ್ದ ಶಾರಿಖ್ ಗಾಗಿ ಪೊಲೀಸರು ಹಾಗೂ ಎನ್ ಐಎ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next