Advertisement

ಮಹಾರಾಷ್ಟ್ರ ಸಂಪರ್ಕ ಮುಚ್ಚಿಟ್ಟ ಲ್ಯಾಬ್‌ ಟೆಕ್ನಿಶಿಯನ್‌: ಮೊಕದ್ದಮೆ

01:18 AM Jun 25, 2020 | Hari Prasad |

ಉಡುಪಿ: ಕೋವಿಡ್ 19 ಪಾಸಿಟಿವ್‌ ಕಂಡುಬಂದ ಸ್ಥಳೀಯ ಲ್ಯಾಬ್‌ ಟೆಕ್ನಿಶಿಯನ್‌ಗೆ ಯಾವುದೇ ಸಂಪರ್ಕವಿಲ್ಲವೆಂದು ಭಾವಿಸಿದ್ದೆವು.

Advertisement

ಆದರೆ ಅವರು ಮಹಾರಾಷ್ಟ್ರದಿಂದ ಬಂದವರ ಜತೆಗೆ ಕಾರ್ಯಕ್ರಮ ನಡೆಸಿದ್ದ ಕಾರಣ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಉಡುಪಿ ಡಿಸಿ ಜಿ. ಜಗದೀಶ್‌ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸೋಂಕಿತ ವ್ಯಕ್ತಿಯ ಪ್ರಾಥಮಿಕ, ದ್ವಿತೀಯ ಸಂಪರ್ಕಗಳ ಸಂಪೂರ್ಣ ಮಾಹಿತಿ ನೀಡಬೇಕು. ಆ ಮೂಲಕ ಕೋವಿಡ್ 19 ವೈರಸ್ ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಯಾರೂ ಸಹ ವಿಚಾರವನ್ನು ಮುಚ್ಚಿಡಬಾರದು. ಆ ರೀತಿ ಮಾಡುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಹಾರಾಷ್ಟ್ರ ಸಹಿತ ವಿವಿಧ ಕಡೆಗಳಿಂದ ಪ್ರತಿದಿನ 200-250 ಮಂದಿ ಜಿಲ್ಲೆಗೆ ರೈಲು ಮತ್ತು ಕಾರುಗಳ ಮೂಲಕ ಆಗಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ನಿರ್ವಹಣೆ ಅಸಾಧ್ಯವಾಗುವುದರಿಂದ ಹೋಂ ಕ್ವಾರಂಟೈನ್‌ ವಿಧಿಸಲಾಗುತ್ತಿದೆ.

ಗರ್ಭಿಣಿ, ಸಣ್ಣ ಮಕ್ಕಳು 65 ವರ್ಷಗಳಿಂದ ಮೇಲ್ಪಟ್ಟವರು ಹಾಗೂ ಇತರ ಕಾಯಿಲೆ ಇರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

Advertisement

ಕ್ವಾರಂಟೈನ್‌ ಭೇಟಿ ಜಿಲ್ಲೆ ಪ್ರಥಮ
ಜಿಲ್ಲೆಯಲ್ಲಿ ಅಧಿಕಾರಿಗಳು ಶೇ. 91ರಷ್ಟು ಹೋಂ ಕ್ವಾರಂಟೈನ್‌ ವಿಧಿಸಿರುವ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಕ್ವಾರಂಟೈನ್‌ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನವನ್ನು ಕಲಬುರಗಿ (ಶೇ. 81) ಪಡೆದಿದೆ. ಹೋಂ ಕ್ವಾರಂಟೈನ್‌ನಲ್ಲಿರುವವರು ಸೆಲ್ಫಿ ಫೋಟೋ ಕಳುಹಿಸುವುದರಲ್ಲಿ ಉಡುಪಿ ಜಿಲ್ಲೆ ಶೇ. 48ರಷ್ಟು ಸಾಧನೆ ಮಾಡಿದೆ.
– ಜಿ. ಜಗದೀಶ್‌, ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next