ತಮಿಳುನಾಡು: ವೆಲ್ಲೂರಿನಲ್ಲಿ ತನ್ನ ಪ್ರಿಯಕರನೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ದರೋಡೆ ಮಾಡಿದ ಕಳವಳಕಾರಿ ಘಟನೆ ಮಾರ್ಚ್ 17 ರಂದು ನಡೆದಿದೆ.
ಮಹಿಳೆಯು ಮಂಗಳವಾರ, ಮಾ, 22 ರಂದು ವೆಲ್ಲೂರು ಎಸ್ಪಿಗೆ ಇ-ಮೇಲ್ ಕಳುಹಿಸಿ ವಿವರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ, ತನಗಾದ ಕಷ್ಟವನ್ನು ಮಹಿಳೆ ಇ-ಮೇಲ್ ಮೂಲಕ ವಿವರಿಸಿದ್ದಾಳೆ. ಮಾರ್ಚ್ 17 ರಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸಿನಿಮಾ ನೋಡಿ ತನ್ನ ಗೆಳೆಯನೊಂದಿಗೆ ಆಟೋರಿಕ್ಷಾ ಹತ್ತಿದ್ದಳು ಎಂದು ದೂರಿನಲ್ಲಿ ಹೇಳಿಕೊಳ್ಳಲಾಗಿದೆ.
ವೆಲ್ಲೂರಿನ ಖಾಸಗಿ ಆಸ್ಪತ್ರೆಗೆ ಡ್ರಾಪ್ ಮಾಡುವಂತೆ ಚಾಲಕನಿಗೆ ತಿಳಿಸಿದ್ದಾಳೆ. ಅಲ್ಲೇ ವಾಹನವೊಂದರಲ್ಲಿ ನಾಲ್ಕು ಪುರುಷರು ಕುಳಿತಿದ್ದರು. ಆದರೆ ತಡರಾತ್ರಿಯಾಗುತ್ತಿದ್ದಂತೆ ದಂಪತಿಗಳು ಅಲ್ಲೇ ಇದ್ದ ಆಟೋರಿಕ್ಷಾ ಹತ್ತಲು ನಿರ್ಧರಿಸಿದರು ಮತ್ತು ಅವರಿಗೆ ಬೇರೆ ವಾಹನ ಆ ಹೊತ್ತಿಗೆ ಸಿಗುವುದು ಕಷ್ಟವಾಗಿತ್ತು.
ಆ ಆಟೋ ಹತ್ತಿ ಹೋದವರನ್ನು ಚಾಲಕ ಬೇರೆ ದಾರಿಯಲ್ಲಿ ಕರೆದೊಯ್ಯುತ್ತಾನೆ, ದಂಪತಿಗೆ ಅನುಮಾನ ಬಂದು ವಿಚಾರಿಸಿದಾಗ ಯಾವತ್ತು ಹೋಗುವ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಈ ರಸ್ತೆ ಸೂಕ್ತವೆಂದು ಉತ್ತರಿಸುತ್ತಾನೆ. ಅನುಮಾನ ಬಂದು ಮತ್ತೆ ವಿಚಾರಿಸಿದಾಗ ಅವರು ಹೆಚ್ಚಿನ ವೇಗದಲ್ಲಿ ಆಟೋ ಓಡಿಸಲು ಪ್ರಾರಂಭಿಸಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ನಂತರ ಆಟೋರಿಕ್ಷಾ ಚಾಲಕನು ಏಕಾಂತ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ, ಆ ವೇಳೆ ಅಲ್ಲಿಗೆ ಇತರ ನಾಲ್ವರು ಆಗಮಿಸುತ್ತಾರೆ. ದಂಪತಿಗೆ ಚಾಕು ತೋರಿಸಿ ಬೆದರಿಸುತ್ತಾರೆ ಮತ್ತು ಅವರ ಬಳಿಯಿದ್ದ ಮೊಬೈಲ್ ಫೋನ್, 40,000 ರೂ ನಗದು ಮತ್ತು ಎರಡು ಪವನ್ ಚಿನ್ನದ ನಾಣ್ಯಗಳನ್ನು ದೋಚಿದ್ದಾರೆ. ನಂತರ ಐವರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಮುಂದಾದರು ಎಂದು ತಿಳಿಸಲಾಗಿದೆ.
ಈ ನಡುವೆ ಕುಡಿದ ಮತ್ತಿನಲ್ಲಿ ಗಲಾಟೆ ಆರಂಭಿಸಿದ್ದ ಇಬ್ಬರು ಹಣಕ್ಕಾಗಿ ಕಿತ್ತಾಡಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳನ್ನು ಮಂಗಳವಾರ ವೆಲ್ಲೂರು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರಾಗಿದ್ದು, ಅಪರಾಧಿಗಳ ವಿರುದ್ಧ ಕಲಂ 147, 148, 342, 365, 378, 376 (ಡಿ), 376 (ಇ), 395, 397 ಮತ್ತು 506 (II) ಅಡಿಯಲ್ಲಿ ಪ್ರಕರಣ ದಾಖಲಾಸಿದ್ದಾರೆ. ಪೊಲೀಸರು ಐದನೇ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.