ಹೈದರಾಬಾದ್ : ಟಾಲಿವುಡ್ ನಟಿ ನಿಹಾರಿಕಾ ಕೊನಿಡೆಲ್ ಅವರು ಪತಿ ಚೈತನ್ಯ ಅವರಿಗೆ ಇದೀಗ ಕಾನೂನು ಕಂಟಕ ಎದುರಾಗಿದೆ. ಈತನ ವಿರುದ್ಧ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಲಿವುಡ್ ನಿರ್ದೇಶಕ ನಾಗಬಾಬು ಪುತ್ರಿ ನಿಹಾರಿಕಾ ಕಳೆದ ವರ್ಷ ಉದ್ಯಮಿ ಚೈತನ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರ ಈ ದಂಪತಿ ಹೈದರಾಬಾದ್‌ನ ಶೇಕ್‌ಪೇಟೆನಲ್ಲಿರುವ ಟೆನ್‌ಸಿನಾ ಅಪಾರ್ಟ್‌ಮೆಂಟ್‌ನಲ್ಲಿ ಚೈತನ್ಯ ಒಂದು ಫ್ಲಾಟ್ ಖರೀದಿಸಿ ವಾಸವಾಗಿದ್ದಾರೆ. ಇದೀಗ ಈ ಫ್ಲಾಟ್ ನವರು ಈತನ ವಿರುದ್ಧ ದೂರು ನೀಡಿದ್ದಾರೆ.
ಕಾರಣವೇನು ?
ಚೈತನ್ಯ ಅವರು ಫ್ಲಾಟ್ ಗೆ ಜಾಸ್ತಿ ಜನರು ಬರುತ್ತಾರೆ. ಇವರಿಂದ ನಮಗೆ ಕಿರಿಕಿರಿಯುಂಟಾಗುತ್ತಿದೆ ಎಂದು ನೆರೆ ಹೊರೆಯ ಫ್ಲಾಟ್ ವಾಸಿಗಳು ದೂರಿದ್ದಾರೆ. ಇದೇ ವಿಚಾರಕ್ಕೆ ನಿನ್ನೆ(ಗುರುವಾರ) ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಗಲಾಟೆ ಕೂಡ ನಡೆದಿದೆ.
ಇನ್ನು ನೆರೆಹೊರೆಯ ನಿವಾಸಿಗಳ ವಿರುದ್ಧ ಚೈತನ್ಯ ಕೂಡ ಪ್ರತಿ ದೂರು ನೀಡಿದ್ದಾರೆ. ‘ನಿನ್ನೆ ರಾತ್ರಿ ಅಪಾರ್ಟ್‌ಮೆಂಟ್ ನಿವಾಸಿಗಳು ಕೆಲವರು ನನ್ನ ಫ್ಲ್ಯಾಟ್‌ಗೆ ಬಂದು ಜೋರಾಗಿ ಬಾಗಿಲು ತಟ್ಟಿ ಗಲಾಟೆ ಮಾಡಿದ್ದಾರೆ. ನಾನು ಬಾಗಿಲು ತೆರೆಯಯುವ ಮೊದಲು ಪೊಲೀಸರಿಗೆ ವಿಷಯ ತಿಳಿಸಿದೆ. ನಂತರ ಅಪಾರ್ಟ್‌ಮೆಂಟ್ ಮಾಲೀಕರಿಗೆ ವಿಷಯ ತಿಳಿಸಿ ಅವರನ್ನು ಸ್ಥಳಕ್ಕೆ ಬರಲು ಹೇಳಿದೆ. ರಾತ್ರೋರಾತ್ರಿ ನನ್ನ ಫ್ಲಾಟ್‌ಗೆ ನುಗ್ಗಿ ಸುಮಾರು 20 ಮಂದಿ ಅಪಾರ್ಟ್‌ಮೆಂಟ್ ನಿವಾಸಿಗಳು ನನ್ನ ವಿರುದ್ಧ ಜಗಳ ಶುರು ಮಾಡಿದ್ದಾರೆ. ನಾನು ವಾಣಿಜ್ಯ ಉದ್ದೇಶಕ್ಕೆ ಕಚೇರಿ ತೆರೆದಿದ್ದೆ. ಅದೇ ಉದ್ದೇಶಕ್ಕಾಗಿ ಅಲ್ಲಿ ಫ್ಲ್ಯಾಟ್ ಖರೀದಿಸಿದ್ದೆ. ಆದರೆ ನಾನು ಅಲ್ಲಿ ಕಚೇರಿ ಮಾಡಬಾರದು, ಅಪಾರ್ಟ್‌ಮೆಂಟ್ ಬಿಟ್ಟು ಹೋಗಬೇಕು ಎಂದು ಒತ್ತಾಯಿಸಿದರು.
ನನ್ನ ಫ್ಲ್ಯಾಟ್ ಒಳಗೆ ಗಲಾಟೆ ಮಾಡಿರುವ ಸಿಸಿಟಿವಿ ದೃಶ್ಯಗಳನ್ನು ಬಂಜಾರ ಹಿಲ್ಸ್ ಪೊಲೀಸರಿಗೆ ನಾನು ನೀಡಿರುವೆ,’ ಎಂದು ಚೈತನ್ಯ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ವಾಣಿಜ್ಯ ಉದ್ದೇಶಕ್ಕೆ ನಾನು ಫ್ಲ್ಯಾಟ್ ಖರೀದಿ ಮಾಡಿರುವುದು ಎಂದು ಮಾಲೀಕರಿಗೆ ತಿಳಿಸಿರಲಿಲ್ಲ. ಇದು ನನ್ನ ತಪ್ಪು ಎಂದು ಒಪ್ಪಿಕೊಂಡಿರುವ ಚೈತನ್ಯ ಆಗಸ್ಟ್ 10ರಂದು ಅಪಾರ್ಟ್‌ಮೆಂಟ್ ಖಾಲಿ ಮಾಡುವುದಾಗಿಯೂ ತಿಳಿಸಿದ್ದಾರೆ.